Advertisement

ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯ ಮುಂದೆ

11:40 AM Jul 10, 2018 | Team Udayavani |

ಕೆ.ಆರ್‌.ಪುರ: ಹೆಚ್ಚು ಹೆಚ್ಚು ತಂತ್ರಜ್ಞಾನ ಬಳಕೆ ರಾಜ್ಯದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಇಸ್ರೇಲ್‌ ದೇಶದ ಮಾಜಿ ರಾಯಭಾರಿ ಚಕ್‌ ಮೆನಹಮ್‌ ಕನಾಫಿ ತಿಳಿಸಿದರು. 

Advertisement

ಕೆ.ಆರ್‌.ಪುರದ ಸಿಲಿಕಾನ್‌ ಸಿಟಿ ಕಾಲೇಜಿನಲ್ಲಿ ನಡೆದ, “ಕರ್ನಾಟಕ ಮತ್ತು ಇಸ್ರೇಲ್‌ ಸಹಯೋಗದಲ್ಲಿ ಒದಗುವ ಅವಕಾಶಗಳು’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಲಭ್ಯವಿರುವ ಎಲ್ಲ ಸುಧಾರಿತ ತಂತ್ರಜ್ಞಾನಗಳೂ ಕರ್ನಾಟಕದಲ್ಲಿ ಬಳಕೆಯಲ್ಲಿವೆ. ಇದರೊಂದಿಗೆ ಇಸ್ರೇಲ್‌ನಲ್ಲಿ ಪ್ರಚಲಿತದಲ್ಲಿರುವ ಉನ್ನತ ತಂತ್ರಜ್ಞಾನಗಳನ್ನು ಬೆಂಗಳೂನಲ್ಲಿ ಲಭ್ಯವಾಗಿಸಲು ಇಸ್ರೇಲ್‌ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಇಸ್ರೇಲ್‌ ಮತ್ತು ಭಾರತದಲ್ಲಿ ಏಕ ರೀತಿಯ ಹವಾಗುಣ ಇದೆ. ಕರ್ನಾಟಕದಲ್ಲಿನ ಭೂಮಿ ಕೃಷಿಗೆ ಹೆಚ್ಚು ಅನುಕೂಲಕರವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದ ಪ್ರಗತಿಗೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಇಸ್ರೇಲ್‌ ಒದಗಿಸಲಿದೆ. ಐಟಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬೆಂಗಳೂರಿಗೆ ಸೈಬರ್‌ ಸೆಕ್ಯೂರಿಟಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅಗತ್ಯವಿರುವ ನೆರವು ನೀಡುವ ಉದ್ದೇಶ ನಮ್ಮದಾಗಿದೆ ಎಂದರು.

ಇದೇ ವೇಳೆ “ಸೈಬರ್‌ ಕ್ಷೇತ್ರ ಮತ್ತು ಇಲ್ಲಿನ ಸವಾಲುಗಳು’ ಕುರಿತ ಎರಡನೇ ಸಂಪುಟ ಬಿಡುಗಡೆ ಮಾಡಲಾಯಿತು. ಐಇಟಿಒ ಅಧ್ಯಕ್ಷ ಆಸೀಫ್‌ ಇಕ್ಬಾಲ್‌, ಕಾಲೇಜಿನ ಅಧ್ಯಕ್ಷ ಡಾ.ಎಚ್‌.ಎಂ.ಚಂದ್ರಶೇಖರ್‌, ನಿರ್ದೇಶಕ ಎಚ್‌.ಎಂ.ಮುಕುಂದ್‌, ಪ್ರಿನ್ಸಿಪಾಲ್‌ ಜ್ಞಾನೇಶ್‌, ಡಿಎಸ್‌ಪಿ ಇಂಟಲಿಜೆನ್ಸ್‌ನ ಬಾಬು ಆಂಜಿನಪ್ಪ, ಸಂಶೋಧನಾ ನಿರ್ದೇಶಕಿ ರೋಸ್‌ ಕವಿತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next