Advertisement

ಮಾನವೀಯ ನೆಲೆ : ಮಹಾರಾಷ್ಟ್ರದ 400 ಮಂದಿಗೆ ರಾಜ್ಯ ಪ್ರವೇಶಾವಕಾಶ

06:50 AM May 21, 2020 | mahesh |

ಉಡುಪಿ/ಮಂಗಳೂರು: ಮಹಾರಾಷ್ಟ್ರ ಗಡಿಯ ನಿಪ್ಪಾಣಿ ಸಮೀಪದ ಕಾಗಲ್‌ ಚೆಕ್‌ ಪೋಸ್ಟ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಉಡುಪಿಯ ಗರ್ಭಿಣಿ ಸೇರಿದಂತೆ 30 ಬಸ್‌ಗಳ ಸುಮಾರು 400 ಜನರನ್ನು ಕರ್ನಾಟಕಕ್ಕೆ ಕರೆತರಲು ರಾಜ್ಯ ಸರಕಾರ ಅನುಮತಿಸಿದೆ.

Advertisement

ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಮುಜರಾಯಿ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಖಾಸಗಿ ಬಸ್‌ನಲ್ಲಿ ಹೊರಟಿದ್ದ ಉಡುಪಿ ಮತ್ತು ಮಂಗಳೂರು ಮೂಲದ 32 ಮಂದಿಯಲ್ಲಿ ಕೆಲವರಲ್ಲಿ ಸೇವಾ ಸಿಂಧು ಪಾಸ್‌ ಇಲ್ಲದ ಕಾರಣ ಕರ್ನಾಟಕ ಗಡಿಭಾಗದಲ್ಲಿ ತಡೆಯಲಾಗಿತ್ತು. ಬಸ್‌ನಲ್ಲಿ ಗರ್ಭಿಣಿಯರು ಹಾಗೂ ಮಕ್ಕಳು ಇರುವ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲೆಗೆ ಕರೆತರಲು ಅವಕಾಶ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದ್ದೆ. ಈಗ ಸರಕಾರ ಅನುಮತಿ ನೀಡಿದೆ. ಮುಖ್ಯಮಂತ್ರಿಯವರು ಮುಖ್ಯಕಾರ್ಯದರ್ಶಿಯವರಿಗೆ ಸೂಚನೆ ಕೊಟ್ಟಿದ್ದಾರೆ ಎಂದರು.

ಮೇ 20ರಂದು ಮಹಾರಾಷ್ಟ್ರದಿಂದ ಉಡುಪಿ ಮತ್ತು ಮಂಗಳೂರಿನ 3 ಬಸ್‌ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳುವ 20 ಬಸ್‌ಗಳ 400ಕ್ಕೂ ಅಧಿಕ ಮಂದಿ ಅತಂತ್ರರಾಗಿ ಸರಕಾರಕ್ಕೆ ರಾಜ್ಯದೊಳಗೆ ಪ್ರವೇಶ ಪಡೆಯಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಸರಕಾರ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿ ಅವಕಾಶ ಕಲ್ಪಿಸಿದರು. ಆಯಾ ಜಿಲ್ಲಾಡಳಿತಕ್ಕೆ ಸರಕಾರಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿಕೊಳ್ಳಲು ಎಲ್ಲರ ಮಾಹಿತಿಯನ್ನು ಸಂಗ್ರಹಿಸಿ ಕಳುಹಿಸಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next