ಬೆಂಗಳೂರು: ಕೈದಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಸಿಬ್ಬಂದಿ ಯಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಆರೋ ಪಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸುಮಾರು ಐದೂವರೆ ಸಾವಿರ ಸಿಬ್ಬಂದಿ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ನಂತರ ಸಂಜೆ ವೇಳೆ ಹಿರಿಯ ಅಧಿಕಾರಿಗಳ ಕೈದಿಗಳ ಮನವೊಲಿಸಿದ್ದು, ಎಲ್ಲರು ಭೋಜನ ಸೇವಿಸಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಜೈಲಿನ ಹಿರಿಯ ಅಧಿಕಾರಿಗಳು ಕೈದಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜೈಲಿನ ವೈದ್ಯಾಧಿಕಾರಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಕಳೆದ 15 ದಿನಗಳಿಂದ ಇಬ್ಬರು ಖೈದಿಗಳು ಮೃತಪಟ್ಟಿದ್ದಾರೆ.
ಒಂದು ವಾರದಿಂದ ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜೈಲಿನಲ್ಲಿರುವ ಐದೂವರೆ ಸಾವಿರ ಕೈದಿಗಳ ಉಪವಾಸ ಸತ್ಯಾಗ್ರಾಹ ಕೈಗೊಂಡಿದ್ದರು. ಅಲ್ಲದೆ, ಜೈಲಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆಗಮಿಸಿ ಸಮಸ್ಯೆ ಆಲಿಸ ಬೇಕೆಂದು ಪಟ್ಟು ಹಿಡಿದಿದ್ದರು. ಸಂಜೆ ವೇಳೆ ಹಿರಿಯ ಅಧಿಕಾರಿಗಳು ಕೈದಿಗಳಿಗೆ, ಮತ್ತೂಮ್ಮೆ ಈ ರೀತಿಯ ಘಟನೆಗಳು ನಡೆ ಯದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಮನವೊಲಿಸಿದರು. ಬಳಿಕ ಎಲ್ಲರೂ ಊಟ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:- ಕೆಆರ್‌ಐಡಿಎಲ್ ಭ್ರಷ್ಟಾಚಾರಕ್ಕೆ ಬಿಬಿಎಂಪಿ, ಸರ್ಕಾರ ಬೆಂಬಲ: ಆರೋಪ
ಮತ್ತೂಂದೆಡೆ ಕಳೆದ ಆರೇಳು ತಿಂಗಳಲ್ಲಿ ಸಿಸಿಬಿ ಅಧಿಕಾರಿಗಳ 2-3 ಬಾರಿ ಜೈಲಿಗೆ ದಾಳಿ ನಡೆಸಿ ಮಾದಕ ವಸ್ತುಗಳು, ಮೊಬೈಲ್‌ಗಳು, ತಟ್ಟೆ, ಲೊಟ ದಿಂದ ಚೂರಿ ತಯಾರಿಸಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜೈಲಿನ ಅಧೀಕ್ಷಕ ರಂಗನಾಥ್ ಜೈಲಿನ ಹಲವು ಅಕ್ರಮಗಳಿಗೆ ಬ್ರೇಕ್ ಹಾಕಿದ್ದರು. ಇತ್ತೀಚಿಗೆ ಜೈಲಿನ ಸಿಬ್ಬಂದಿ ಸೇರಿ ಪ್ರತಿ ಯೊಬ್ಬರಿಗೂ ಮೊಬೈಲ… ನಿರ್ಬಂಧಿಸಲಾಗಿತ್ತು. ರಂಗನಾಥ್ ಸೂಪರಿಡೆಂಟ್ ಆಗಿ ಬಂದ ಬಳಿಕ ಟೈಟ್ ಸೆಕ್ಯೂರಿಟಿ ಇತ್ತು. ಯಾವುದೇ ಅಕ್ರಮ ವಸ್ತುಗಳು ಒಳಗೆ ಹೋಗದಂತೆ ತಡೆಯೊಡ್ಡಲಾಗಿತ್ತು.
ಜೈಲಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರಂಗನಾಥ್ ಹಲವಾರು ಕಾರ್ಯಕ್ರಮ ರೂಪಿಸಿದ್ದರು. ಅದರಿಂದ ಕೆಳ ಹಂತದ ಕೆಲ ಅಧಿ ಕಾರಿಗಳು ಅಸಮಾಧಾನಗೊಂಡಿದ್ದರು. ಇದರೊಂದಿಗೆ ಕೆಲ ಕೈದಿಗಳು ತಮ್ಮ ಅಕ್ರಮ ವ್ಯವಹಾರಗಳಿಗೆ ಸಂಪೂರ್ಣವಾಗಿ ಬ್ರೇಕ್ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳ ಕುಮ್ಮಕ್ಕಿ ನಿಂದಲೇ ಕೈದಿಗಳು ಉಪವಾಸ ಸತ್ಯಾಗ್ರಹ ನಡೆಯಲು ಕಾರಣ ಎಂದು ಸಹ ಹೇಳಲಾಗಿದೆ. ಈ ಸಂಬಂಧ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಘಟ ನೆಗೆ ಕಾರಣ ಕೇಳಿ ರಂಗನಾಥ್ ಅವರಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ, ಕೈದಿಗಳ ಜತೆಯಾರಾದರೂ ಅಧಿಕಾರಿಗಳ ಶಾಮೀಲಾಗಿದ್ದರೆ ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಎಂದು ಸಹ ಹೇಳಲಾಗಿದೆ.