ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕಿರುವ ಸಾಮರ್ಥ್ಯ ವಿಶ್ವವನ್ನೇ ಆಳಲಿದೆ. ಈ ಕ್ಷೇತ್ರದಲ್ಲಿ ಭಾರತ ಮೇಲು ಗೈ ಸಾಧಿಸುತ್ತದೆ ಎಂದು ವಿಶ್ವವೇ ಒಪ್ಪಿಕೊಂಡಿದೆ. ಈಗ ನಾವು ಆ ಅವಕಾಶವನ್ನು ಸಮರ್ಥವಾಗಿ ಬಳಸಿ ಕೊಳ್ಳಬೇಕು ಅಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾ ಲಯದ ವತಿಯಿಂದ ಹೊಸದಿಲ್ಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ “ಸ್ಟಾರ್ಟ್‌ಅಪ್ ಮಹಾಕುಂಭ’ದಲ್ಲಿ ಪ್ರಧಾನಿ ಪಾಲ್ಗೊಂಡಿದ್ದರು.
ಈ ವೇಳೆ ಎಐನ ಹೊಸ ಯುಗದಲ್ಲಿ ನಾವಿದ್ದೇವೆ. ಈ ಕ್ಷೇತ್ರವು ನವೋದ್ಯಮಿಗಳಿಗೆ, ಯುವ ಸಂಶೋಧಕರಿಗೆ ಮತ್ತು ಜಾಗತಿಕ ಹೂಡಿಕೆ ದಾರರಿಗೆ ಅಸಂಖ್ಯ ಅವಕಾಶಗಳನ್ನು ಒದಗಿಸುತ್ತದೆ. ಈ ಕ್ಷೇತ್ರದ ನಾಯಕತ್ವವು ಭಾರತದ ಕೈಯಲ್ಲಿದೆ ಮತ್ತು ಭಾರತದ ಕೈಯಲ್ಲೇ ಇರಬೇಕು. ಈ ನಿಟ್ಟಿನಲ್ಲಿ ಜಗತ್ತಿನ ಸಮಸ್ಯೆಗಳಿಗೆ ಭಾರತೀಯ ನವೋ ದ್ಯಮಗಳೇ ಪರಿಹಾರ ಒದಗಿಸಲಿವೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಜತೆಗೆ ಕಳೆದ ಒಂದು ದಶಕದಲ್ಲಿ ಜಗತ್ತಿನ ನವೋದ್ಯಮ ಕ್ಷೇತ್ರದಲ್ಲಿ ಭಾರತ ಇರಿಸಿರುವ ದಾಪುಗಾಲು ಅಸಾಧಾರಣವಾದದ್ದು. 2014ರಲ್ಲಿ ದೇಶದಲ್ಲಿ 100 ನವೋದ್ಯಮಗಳೂ ಇರಲಿಲ್ಲ, ಪ್ರಸಕ್ತ 1.25 ಲಕ್ಷ ನವೋದ್ಯಮಗಳು ಮತ್ತು 110 ಯೂನಿಕಾರ್ನ್ಗಳನ್ನು ನಾವು ಹೊಂದಿದ್ದೇವೆ. 12,000 ನವೋದ್ಯಮಗಳು ಪೇಟೆಂಟ್ ಹೊಂದಿವೆ. ಶೇ.45ರಷ್ಟು ನವೋದ್ಯಮಗಳನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.
ಚುನಾವಣೆಯಲ್ಲಿ ನಮಗೆ ಗೆಲುವು:
ಪ್ರಧಾನಿ ಮೋದಿ ಸಾಮಾನ್ಯವಾಗಿ ಚುನಾವಣೆ ಸಮೀಪವಿರುವ ಸಂದರ್ಭದಲ್ಲಿ ಯತಾಸ್ಥಿತಿಯನ್ನು ಕಾಯ್ದುಕೊಂಡು ಮುಂದಿನ ಸರಕಾರ ರಚನೆಯಾದಾಗ ನೋಡೋಣವೆಂದು ಅಭಿವೃದ್ಧಿ ಕಾರ್ಯಗಳನ್ನು ಮುಂದೂಡುವವರೇ ಹೆಚ್ಚು. ಆದರೆ ನೀವು ಚುನಾವಣೆ ದಿನಾಂಕ ನಿಗದಿಯಾದ ಬಳಿಕವೂ ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದೀರಿ. ಈ ಮೂಲಕ ಮುಂದಿನ 5 ವರ್ಷದಲ್ಲಿ ಏನಾಗಲಿದೆ ಎಂಬುದರ ಬಗ್ಗೆ ನಿಮಗೆ ಈಗಲೇ ತಿಳಿದಿದೆ ಎಂದು ಕಾರ್ಯಕ್ರಮವನ್ನು ಆಯೋಜಿಸಿದ ಸಚಿವಾಲಯವನ್ನು ಪ್ರಧಾನಿ ಶ್ಲಾ ಸಿದ್ದಾರೆ. ಈ ಮೂಲಕ ತಮ್ಮ ಗೆಲುವಿನ ಬಗ್ಗೆ ವಿಶ್ವಾಸವನ್ನೂ ವ್ಯಕ್ತ ಪಡಿಸಿದ್ದಾರೆ.