Advertisement

ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ಕೆ ಚಾಲನೆ

11:55 AM Sep 04, 2019 | Suhan S |

ಮೈಸೂರು: ಭಾರತ ಚುನಾವಣಾ ಆಯೋಗವು ಸೆ.1ರಿಂದ ಅ.15 ರವರೆಗೆ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೇಯರ್‌ ಪುಷ್ಪಲತಾ ಜಗನ್ನಾಥ್‌ ಹಾಗೂ ಗಾಯಕ ಶ್ರೀ ಹರ್ಷ ಚಾಲನೆ ನೀಡಿದರು.

Advertisement

ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪ ದೋಷಗಳಿದ್ದರೂ ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಅ.15ರವರೆಗೆ ಹತ್ತಿರದ ಸೇವಾ ಕೇಂದ್ರಗಳಲ್ಲಿ ಸರಿಪಡಿಸಿಕೊಳ್ಳಲು ಇದೊಂದು ಅವಕಾಶ ಇದೆ. ಎಲ್ಲರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಹಾಗೂ ಬಿಎಲ್ಒಗಳು ಮನೆ-ಮನೆಗಳಿಗೆ ಭೇಟಿ ನೀಡಲಿದ್ದಾರೆ.ಆ ಸಂದರ್ಭದಲ್ಲಿ ಮೊಬೈಲ್ಆ್ಯಪ್‌ ಮೂಲಕ ಅಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಮೊಬೈಲ್ ಆ್ಯಪ್‌ಕೂಡ ಶೀಘ್ರವಾಗಿ ಬರಲಿದೆ ಎಂದು ಹೇಳಿದರು.

ಗಾಯಕ ಶ್ರೀಹರ್ಷ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ಬೇರೆ ಕಡೆ ವಾಸವಿದ್ದರೆ ಅಲ್ಲಿ ಮತದಾರರ ಚೀಟಿ ಪಡೆಯಲು ಪ್ರತಿಯೊಂದಕ್ಕೂ ಇದೊಂದು ಸುವರ್ಣಾಕಾಶವಾಗಿದೆ.ಅಲ್ಲದೇ ಬಿಎಲ್ಒಗಳು ಮನೆಗಳಿಗೆ ಭೇಟಿ ನೀಡಲಿದ್ದಾರೆ ಅಲ್ಲೂ ಕೂಡ ಸಮಸ್ಯೆ ಪರಿಹರಿಸಿಕೊಳ್ಳಬಹುದು ಹಾಗಾಗಿ ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಉಪ ಮೇಯರ್‌ ಶಫಿಅಹಮದ್‌, ಜಿಪಂ ಸಿಇಒ ಕೆ. ಜ್ಯೋತಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ, ಜಿಪಂ ಮುಖ್ಯಯೋಜನಾಧಿಕಾರಿ ಪದ್ಮಶೇಖರ್‌ ಪಾಂಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸುವುದು ಹೇಗೆ?: 2020ರ ಜನವರಿ 1ರೊಳಗೆ 18 ವರ್ಷ ಪೂರ್ಣಗೊಂಡಿರುವ ಎಲ್ಲಾ ಪ್ರಜೆಗಳು ಮತದಾರರ ಪಟ್ಟಿಗೆ ಸೇರ್ಪಡೆ ಹೊಂದಲು ಅರ್ಹರಾಗಿರುತ್ತಾರೆ.

ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಸೆ.1ರಿಂದ ಅ.15ರವರೆಗೆ ನಡೆಯಲಿದ್ದು, ಬಿಎಲ್ಒ ಗಳಿಂದ ಮನೆ ಮನೆ

ಭೇಟಿ ಮಾಡಿ ಪರಿಶೀಲನೆ ಕಾರ್ಯಕ್ರಮ 1-9-2019 ರಿಂದ 30-9-2019ರ ವರೆಗೆ ನಡೆಯಲಿದೆ.

ಕರಡು ಮತದಾರರ ಪಟ್ಟಿಯನ್ನು ದಿನಾಂಕ 15-10-2019ರಂದು ಪ್ರಕಟಿಸಲಾಗುವುದು. ವಿಶೇಷ ಆಂದೋಲನ ದಿನಾಂಕ 2-11-2019 ಮತ್ತು 3-11-2019 ಹಾಗೂ 9-11-2019 ಮತ್ತು 10-11-2019 ರಂದು ನಡೆಯಲಿದೆ. ಹಕ್ಕು ಮತ್ತು ಆಕಗಳನ್ನು ದಿನಾಂಕ 15.10.2019 ರಿಂದ 30-11-2019 ವರೆಗೆ, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ 15-12-2019 ಒಳಗಾಗಿ, ಮೂಲ ಮತದಾರರ ಪಟ್ಟಿಯ ಪ್ರಕಟಣೆ 1-1-2020 ದಿಂದ 15-01-2020 ರವರೆಗೆ ನಡೆಯಲಿದೆ.

ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ನಮೂನೆ-6, ಮತದಾರರ ಪಟ್ಟಿಯಿಂದ ಕೈಬಿಡಲು ನಮೂನೆ-7, ಗುರುತಿನ ಚೀಟಿಯಲ್ಲಿರುವ ವಿವರಗಳನ್ನು ತಿದ್ದುಪಡಿ ಮಾಡಲು ನಮೂನೆ-8, ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಒಂದು ನಿವಾಸ ಸ್ಥಳದಿಂದ ಮತ್ತೂಂದು ನಿವಾಸ ಸ್ಥಳಕ್ಕೆ ಸ್ಥಳಾಂತರಗೊಂಡರೆ ವಿಳಾಸ ಬದಲಾವಣೆ ಮಾಡಲು, ನಮೂನೆ-8ಎ ಅರ್ಜಿ ಪಡೆದು ಸಲ್ಲಿಸಬೇಕು ಹಾಗೂ ಸಾರ್ವಜನಿಕರು ಮುಖಾಂತರಅರ್ಜಿ ಸಲ್ಲಿಸಬಹುದು.

ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ವಿವರಗಳನ್ನು ತಿದ್ದುಪಡಿ ಮಾಡಲು ನಮೂನೆ-8ರಲ್ಲಿ ಅರ್ಜಿ ದಾಖಲಿಸಬಹುದು.

ಮೈಸೂರು ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂ, ಚುನಾವಣಾ ಶಾಖೆ ಹಾಗೂ ಮತದಾರರ ನೋಂದಣಾಧಿಕಾರಿ / ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆಗಳು ಇಂತಿವೆ.

ಪಿರಿಯಾಪಟ್ಟಣ, ತಾಲೂಕು ಕಚೇರಿ: ದೂ. 08223-274175, ಕೆ.ಆರ್‌. ನಗರ ತಾಲೂಕು ಕಚೇರಿ: 08223 – 262371, 08223 – 262234, ಹುಣಸೂರು ತಾಲೂಕು ಕಚೇರಿ: 08222 – 252040, ಎಚ್.ಡಿ.ಕೋಟೆ ತಾಲೂಕು ಕಚೇರಿ: 08228 – 255325, ನಂಜನಗೂಡು ತಾಲೂಕು ಕಚೇರಿ: 08221 – 223108, ಮೈಸೂರು ತಾಲೂಕು ಕಚೇರಿ: 0821 – 2414811, 0821 – 2414812, ಮೈಸೂರು ಮಹಾ ನಗರ ಪಾಲಿಕೆ, ಮೈಸೂರು: 0821 – 2418800, ನಂಜನಗೂಡು ತಾಲೂಕು ಕಚೇರಿ: 08221 – 223108, ತಿ.ನರಸೀಪುರ ತಾಲೂಕು ಕಚೇರಿ: 08227 – 260210 ಸಾರ್ವಜನಿಕರು ಇಲ್ಲಿಗೆ ಕರೆ ಮಾಡಿ ಯಾವುದಾದರೂ ಸ್ಪಷ್ಟೀಕರಣ, ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಭಿರಾಮ್‌.ಜಿ.ಶಂಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next