Advertisement

ನೀರಿನ ಯೋಜನೆಗೆ ಶೀಫ್ರ ಚಾಲನೆ

02:23 PM Nov 22, 2019 | Team Udayavani |

ಯಳಂದೂರು: ತಾಲೂಕಿನ ವಿವಿಧ ಗ್ರಾಮಗಳಿಗೆ ಕಾವೇರಿ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೃರ್ಮಲ್ಯ ಇಲಾಖೆಯ ಎಇಇ ರವಿಕುಮಾರ್‌ ತಿಳಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಹನೂರು ತಾಲೂಕಿನಲ್ಲಿ ಈ ಕಾಮಗಾರಿಗೆ ಆರಂಭಿಸಲು ಸಜ್ಜಾಗಿದೆ. ಯಳಂದೂರು ತಾಲೂಕಿಗೂ ಮಂಜೂರಾಗಿದ್ದು, ತಿಂಗಳ ಒಳಗಾಗಿ ಕಾಮಗಾರಿಗೆ ಚಾಲನೆ ಸಿಗಲಿದೆ. ತಾಲೂಕಿನ ಹೊನ್ನೂರು, ಕೆಸ್ತೂರು, ಅಂಬಳೆ, ಮದ್ದೂರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇದು ಕೆಟ್ಟು ನಿಂತಿವೆ. ಈ ಬಗ್ಗೆ ಸಂಬಂಧಪಟ್ಟ ಏಜೇನ್ಸಿಗೆ ನೋಟಿಸ್‌ ನೀಡಲಾಗಿದೆ. ಇದಕ್ಕೆ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ರೇಷ್ಮೆ ಇಲಾಖೆ ಕಟ್ಟಡ ಶಿಥಿಲ: ತಾಲೂಕಿನ ಕೆಸ್ತೂರು ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ರೇಷ್ಮೆಇಲಾಖೆಯ ಕಟ್ಟಡ ಶಿಥಿಲವಾಗಿದೆ. ಇದನ್ನು ತೆರವುಗೊಳಿಸಿ ಎಂದು ಇಒ ಬಿ.ಎಸ್‌. ರಾಜು ಪಂಚಾಯತ್‌ ರಾಜ್‌ ಇಲಾಖೆಯ ಎಇಇ ಹರೀಶ್‌ ಅವರಿಗೆ ಸೂಚನೆ ನೀಡಿದರು. ಈ ಕಟ್ಟಡ ಪರಿಶೀಲಿಸಿದ್ದು, ಇದು ಶಿಥಿಲವಾಗಿದೆ.

ಆದಷ್ಟು ಬೇಗ ಇದನ್ನು ತೆರವುಗೊಳಿಸಲಾಗುವುದು ಮಾಹಿತಿ ನೀಡಿದರು. ರೇಷ್ಮೆ, ಕೃಷಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಸಭೆಗಳೂ ನಡೆದವು. ತಾಪಂ ಅಧ್ಯಕ್ಷ ನಿರಂಜನ್‌, ಉಪಾಧ್ಯಕ್ಷೆ ಮಲ್ಲಾಜಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‌, ಸದಸ್ಯರಾದ ಮಣಿ, ಶಾರದಾಂಬ, ಪಲ್ಲವಿ ಮಹೇಶ್‌, ನಾಗರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next