Advertisement

ರೈಲ್ವೆ ವಿಚಕ್ಷಣಾ ಸಪ್ತಾಹಕ್ಕೆ ಚಾಲನೆ

10:45 AM Oct 30, 2019 | Team Udayavani |

ಹುಬ್ಬಳ್ಳಿ: ನೈಋತ್ಯ ರೈಲ್ವೆ ವತಿಯಿಂದ ಆಯೋಜಿಸಿದ ವಿಚಕ್ಷಣಾ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ರೈಲ್‌ ಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಪ್ತಾಹಕ್ಕೆ ಚಾಲನೆ ನೀಡಿದ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್‌ ಮಾತನಾಡಿ, ಒಗ್ಗಟ್ಟು ನಮ್ಮ ಬಲವಾಗಿದೆ. ಒಗ್ಗಟ್ಟಿನಿಂದ ನಾವು ಪ್ರಗತಿ ಹೊಂದಲು ಸಾಧ್ಯ. ಪ್ರಾಮಾಣಿಕತೆ ಹಾಗೂ ಏಕತೆ ನಮ್ಮ ಅಸ್ತ್ರಗಳಾಗಬೇಕು ಎಂದರು.

Advertisement

ಇದೇ ಸಂದರ್ಭದಲ್ಲಿ ಎ.ಕೆ. ಸಿಂಗ್‌ ವಿಚಕ್ಷಣಾ ಸಪ್ತಾಹದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು. ರೈಲ್‌ ಸೌಧ ಆವರಣದ ಇಂಟಿಗ್ರಿಟಿ ಗಾರ್ಡನ್‌ನಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಮೂರ್ತಿ ಅನಾವರಣಗೊಳಿಸಿದರು.

ಉಪ ಪ್ರಧಾನ ವ್ಯವಸ್ಥಾಪಕ ರಾಜೀವ ಸಕ್ಸೇನಾ ಮಾತನಾಡಿ, ದೈನಂದಿನ ಕಾರ್ಯದಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಅವಶ್ಯಕತೆ ಕುರಿತು ತಿಳಿಸಿದರು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next