Advertisement

ಸ್ವಚ್ಛಮೇವ ಜಯತೆ ಕಲಾಜಾಥಾಕ್ಕೆ ಚಾಲನೆ

11:07 AM Sep 17, 2019 | Suhan S |

ಕಲಬುರಗಿ: ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸ್ವಚ್ಛ ಭಾರತ ಮಿಷನ್‌ (ಗ್ರಾ) ಯೋಜನೆಯಡಿ ಗ್ರಾಪಂಗಳಲ್ಲಿ ಎರಡು ಸಂಚಾರಿ ವಾಹನಗಳ ಮೂಲಕ ಹಮ್ಮಿಕೊಂಡಿರುವ ‘ಸ್ವಚ್ಛ ಮೇವ ಜಯತೇ’ ಕಲಾಜಾಥಾಕ್ಕೆ ಮಿನಿ ವಿಧಾನಸೌಧದ ಆವರಣದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ ಚಾಲನೆ ನೀಡಿದರು.

Advertisement

ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ಧೇಶ್ವರಪ್ಪ ಜಿ.ಬಿ., ಸ್ವಚ್ಛ ಭಾರತ ಮಿಷನ್‌ (ಗ್ರಾ)ನ ನೋಡಲ್ ಅಧಿಕಾರಿಯಾದ ಜಿ.ಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಐಇಸಿ ಕೋ-ಆರ್ಡಿನೇಟರ್‌ ಪಾಪರಡ್ಡಿ ಬಿ. ಶೇರಿಕರ ಹಾಜರಿದ್ದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಕಲಾಜಾಥಾ ಆಯೋಜಿಸಿದ್ದು, ಜಿಲ್ಲೆಯ 70 ಗ್ರಾಪಂಗಳಲ್ಲಿ ಐವರು ಕಲಾವಿದರು ಸ್ವಚ್ಛ ಭಾರತ ಬಗ್ಗೆ ಅರಿವು ಮೂಡಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 2000 ಗ್ರಾಪಂಗಳಲ್ಲಿ ಕಲಾಜಾಥಾ ಹಮ್ಮಿಕೊಳ್ಳಲಾಗಿದೆ.

ಕಲಾವಿದರು ಕುಡಿಯುವ ನೀರು, ನೈರ್ಮಲ್ಯ, ಸ್ವಚ್ಛತೆ, ಶೌಚಾಲಯ ಬಳಕೆ, ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next