Advertisement

ರಸ್ತೆ ಕಾಮಗಾರಿಗೆ ಚಾಲನೆ

01:15 PM Dec 12, 2019 | Team Udayavani |

ಸಾವಳಗಿ: ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿ ಹೊಂದಿದ್ದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

Advertisement

ಚಿಕ್ಕಲಕ್ಕಿ, ಚಿಕ್ಕಲಕ್ಕಿಕ್ರಾಸ ಹಾಗೂ ತುಂಗಳ ಗ್ರಾಮಗಳಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಮಂಜೂರಾಗಿದ ರಸ್ತೆಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಚಿಕ್ಕಲಕ್ಕಿ ಕ್ರಾಸ್‌ದಿಂದ ಚಿಕ್ಕಪಡಸಲಗಿ ಗ್ರಾಮದವರೆಗೆ ಹದಗಟ್ಟಿರುವ ರಸ್ತೆ ನಿಮಾರ್ಣಕ್ಕೆ 499 (4.9ಕೋಟಿ) ಲಕ್ಷ ರೂ. ಚಿಕ್ಕಲಕ್ಕಿ ಗ್ರಾಮದ ಎಸ್‌ಸಿ ಕಾಲೋನಿಯ ರಸ್ತೆಗೆ 1ಕೋಟಿ, ತುಂಗಳ ಗ್ರಾಮದ ಜನತಾ ಪ್ಲಾಟ್‌ನಲ್ಲಿ 17ಲಕ್ಷ

ರೂಪಾಯಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ರಸ್ತೆ ಹಾಳಾಗಿರುವ ಕಡೆ ಗಮನಿಸಿ ಅನುದಾನ ಬಿಡುಗಡೆ ನೀಡಿರುವುದಾಗಿ ಹೇಳಿದರು. ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚು ಅನುದಾನ ತಂದು ಒಳ್ಳೆಯ ರಸ್ತೆಯ ನಿರ್ಮಾಣ ಮಾಡಿ ಜನರ ಸಂಪರ್ಕಕ್ಕೆ ಅನುಕೂಲ ಮಾಡುವುದಾಗಿ ಭರವಸೆ ನೀಡಿದರು.

ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು, ಜನರು ಕಾಮಗಾರಿಯ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು. ಜಯಾನಂದ ಹಿರೇಮಠ, ವೆಂಕಟೇಶ ಆದಾಪೂರ ಹಾಗೂ ಪ್ರಮುಕರಾದ ಕಲ್ಲಪ್ಪ ಗಿರಡ್ಡಿ, ಮಹಾದೇವ ಭಜಂತ್ರಿ ಸೇರಿದಂತೆ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next