Advertisement

ಕುಮುದ್ವತಿ ನದಿ ಪುನರುಜ್ಜೀವನ 2.0 ಅಭಿಯಾನಕ್ಕೆ ಚಾಲನೆ

01:07 PM May 28, 2019 | Suhan S |

ಬೆಂಗಳೂರು: ನೀರಿನ ಸಮಸ್ಯೆ ಪರಿಹಾರ ಹಾಗೂ ರೈತರಲ್ಲಿ ಜಲಸಾಕ್ಷರತೆ ಮೂಡಿಸುವ ಉದ್ದೇಶದಿಂದ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ‘ಕುಮುದ್ವತಿ ಪುನರುಜ್ಜೀವನ 2.0’ ಅಭಿಯಾನವನ್ನು ಆರಂಭಿಸಿದೆ.

Advertisement

ಕುಮುದ್ವತಿ ನದಿಯ ಹಿದಿನ ವೈಭವವನ್ನು ಮರುಳಿಸುವಂತೆ ಮಾಡುವ ಉದ್ದೇಶದಿಂದ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆಯು 2013ರಲ್ಲಿ ನದಿಯ ಪುನರುಜ್ಜೀವನ ಯೋಜನೆ ಆರಂಭಿಸಿತ್ತು. ಅದರಂತೆ ಕಳೆದ ಆರು ವರ್ಷಗಳಲ್ಲಿ 3000ಕ್ಕೂ ಹೆಚ್ಚು ಮಳೆನೀರು ಸಂಗ್ರಹ ತೊಟ್ಟಿಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ಮರುಪೂರಣಗೊಳ್ಳುವಂತೆ ಮಾಡಲಾಗಿದೆ.

ಇದರೊಂದಿಗೆ 460 ಚದರ ಕಿ.ಮೀ. ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ. ಪರಿಣಾಮ ಕುಮುದ್ವತಿ ಪುನರುಜ್ಜೀವನ ಯೋಜನೆಯಿಂದಾಗಿ ಕುಮುದ್ವತಿ ನದಿ ಜಲಾನಯನ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಶೇ.2ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ಇದೀಗ ಕುಮುದ್ವತಿ 2.0 ಯೋಜನೆಯ ಮೂಲಕ ರೈತರಲ್ಲಿ ಜಲಸಾಕ್ಷರತೆ ಮೂಡಿಸಲು ಸಂಸ್ಥೆ ಮುಂದಾಗಿದೆ.

ಎರಡನೇ ಹಂತ ಯೋಜನೆ ಕುರಿತು ಮಾಹಿತಿ ನೀಡಿದ ಆರ್ಟ್‌ ಆಫ್ ಲಿವಿಂಗ್‌ ನದಿ ಪುನರುಜ್ಜೀವನ ಯೋಜನೆಯ ರಾಷ್ಟ್ರೀಯ ನಿರ್ದೇಶಕರಾಗಿರುವ ಡಾ.ವೈ.ಲಿಂಗರಾಜು, ಕುಮುದ್ವತಿ ನದಿಯು ತನ್ನ ವೈಭವದ ಕಾಲದಲ್ಲಿ 278 ಹಳ್ಳಿಗಳ ಜೀವನಾಡಿಯಾಗಿತ್ತು. ಅದ್ಭುತವಾದ ಜೀವವೈವಿಧ್ಯದ ನೆಲೆಯೂ ಆಗಿತ್ತು. 45 ಕಿ.ಮೀ. ಉದ್ದದ ನದಿಯು ಅರ್ಕಾವತಿ ನದಿಯೊಂದಿಗೆ ಬೆಂಗಳೂರಿನ ಶೇ.30-40ರಷ್ಟು ನೀರಿನ ಅವಶ್ಯಕತೆಯನ್ನು ಪೂರೈಸುತ್ತಿತ್ತು. ನದಿಯನ್ನು ಪುರುಜ್ಜೀವನಗೊಳಿಸಲು ಈಗಾಗಲೇ 3000ಕ್ಕೂ ಹೆಚ್ಚು ಮರುಪೂರಣಗಳನ್ನು ನಿರ್ಮಿಸಲಾಗಿದ್ದು, ಎರಡನೇ ಹಂತದಲ್ಲಿ ರೈತರ ಹೊಲಗಳು ಹಾಗೂ ಜನವಸತಿ ಪ್ರದೇಶಗಳಿಗೆ ಯೋಜನೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೀರಿನ ಪ್ರಮುಖ ಮೂಲ ಮಳೆಯಾಗಿದ್ದು, ಮಳೆನೀರಿನ ಕೊಯ್ಪಿನ ಮೂಲಕ ಅಂತರ್ಜಲ ಮರು ಪೂರಣ ಮಾಡುವುದು ಅಗತ್ಯವಾಗಿದೆ. ಯೋಜನೆ ಆದ್ಯತೆ ವಿಷಯವೆಂದರೆ ರೈತರಲ್ಲಿ ಜಲಸಾಕ್ಷತೆ ಮೂಡಿಸುವುದು. ಆ ನಿಟ್ಟಿನಲ್ಲಿ ತಮ್ಮ ಹೊಲಗಳಲ್ಲಿ ನಿರ್ಮಿಸಿಕೊಳ್ಳುವ ಮರುಪೂರಣ ವ್ಯವಸ್ಥೆಯಿಂದ ಮತ್ತು ನೀರು ಸಮರ್ಪಕ ಬಳಕೆಯಿಂದ ನೀರಿನ ಸಂಗ್ರಹ ಸಾಮರ್ಥಯ ಹೆಚ್ಚಿಸಿಕೊಳ್ಳುವ ಕುರಿತು ಹಾಗೂ ಜಲಸಂರಕ್ಷಣೆಯ ವಿಷಯದಲ್ಲಿ ರೂಪಿತವಾಗಿರುವ ಸರ್ಕಾರಿ ಯೋಜನೆಗಳ ಜಾರಿಯ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

Advertisement

2.0 ಯೋಜನೆಯ ಗುರಿಗಳು

2500 ಹೆಕ್ಟೆರ್‌ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆ
ಮರುಪೂರಣ ನಿರ್ಮಾಣಗಳನ್ನು ಖಾಸಗಿ ಹೊಲಗಳಲ್ಲಿ ನಿರ್ಮಿಸುವುದು ರೈತರಿಗೆ ಜಲಸಾಕ್ಷರತೆ, ಬಹು ಬೆಳೆ ಬೇಸಾಯ, ನೀರಿನ ಯೋಜಿತ ಬಳಕೆ ಕುರಿತು ತರಬೇತಿ
ಕೆರೆಗಳ ಹೂಳು ತೆಗೆದು ಸಂಗ್ರಹ ಸಾಮರ್ಥಯ ಹೆಚ್ಚಿಸುವುದು
ನಿರ್ಮಾಣಗೊಂಡಿರುವ ಮರುಪೂರಣ ವ್ಯವಸ್ಥೆಗಳನ್ನು ಸುವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳುವುದು
ಪ್ರದೇಶದ ನೀರಿನ ಅಗತ್ಯಗಳನ್ನು ಪೂರೈಸುವ ಜಲಾನಯನ ಪ್ರದೇಶದ  ವ್ಯವಸ್ಥಾಪಕರಂತೆ ವರ್ತಿಸಲು ಪ್ರಚೋದಿಸುವುದು
ಸತತವಾಗಿ ಏರುತ್ತಿರುವ ಉತ್ಪಾದನಾ ವೆಚ್ಚ ತಗ್ಗಿಸಲು ಸಹಜ ಕೃಷಿಯ ಬಗ್ಗೆ ತರಬೇತಿ ನೀಡುವುದು
ರೈತರ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದು
ರೈತರ ಸಮುದಾಯಗಳನ್ನು ರಚಿಸಿ ಅವರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯುವಂತೆ ಮಾಡುವುದು
Advertisement

Udayavani is now on Telegram. Click here to join our channel and stay updated with the latest news.

Next