Advertisement

ಗ್ರಾಹಕರ ಸೇವಾ ಕೇಂದ್ರಕ್ಕೆ ಚಾಲನೆ

12:05 PM Jun 09, 2019 | Team Udayavani |

ಹನಮಸಾಗರ: ಸರ್ಕಾರದ ಪ್ರತಿಯೋಜನೆಯನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಎಸ್‌ಬಿಐ ಗ್ರಾಹಕರ ಸೇವಾ ಕೇಂದ್ರದ ರೂಪದಲ್ಲಿ ಗ್ರಾಮೀಣ ಭಾಗದಲ್ಲಿ ಶಾಖೆ ತೆರೆದಿದೆ ಎಂದು ವೈ.ಎ. ಚೂರಿ ಹೇಳಿದರು.

Advertisement

ಇಲ್ಲಿಗೆ ಸಮೀಪದ ಮನ್ನೇರಾಳ ಗ್ರಾಮದಲ್ಲಿ ಚಂದಾಲಿಂಗೇಶ್ವರ ಎಂಟರ್‌ಪ್ರೈಸಿಸ್‌ ಹಾಗೂ ಎಸ್‌ಬಿಐ ಗ್ರಾಹಕರ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಸಾರ್ವಜನಿಕರು ಬ್ಯಾಂಕಿನೊಂದಿಗೆ ವ್ಯವಹರಿಸಲು ಪಟ್ಟಣದ ಬ್ಯಾಂಕ್‌ಗಳಿಗೆ ಹೋಗಬೇಕಾಗಿತ್ತು. ಇದರಿಂದಾಗಿ ಒಂದು ದಿನದ ಕೆಲಸ ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕರು ಬ್ಯಾಂಕಿನ ವ್ಯವಹಾರದಿಂದ ವಿಮುಖರಾಗುತ್ತಿದ್ದರು. ಇದನ್ನು ಮನಗಂಡ ಸರ್ಕಾರ ದೇಶದ ಪ್ರತಿಯೊಬ್ಬರು ಬ್ಯಾಂಕ್‌ ಖಾತೆ ತೆರೆದು ವ್ಯವಹರಿಸಬೇಕು ಎಂದು ಶೂನ್ಯ ಠೇವಣಿ ಖಾತೆ ತೆರೆಸಿ ಗ್ರಾಮಗಳಲ್ಲಿ ಗ್ರಾಹಕರ ಸೇವಾಕೇಂದ್ರ ತೆರೆಯಲಾಗಿದೆ. ಆದ್ದರಿಂದ ಗ್ರಾಮದ ಪ್ರತಿಯೊಬ್ಬರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಪಂ ಸದಸ್ಯೆ ಮಹದೇವಿ ಹುಣಸಿಹಾಳ, ಮಹಾಂತೇಶ ಹುಣಕುಂಟಿ ಗ್ರಾಹಕರ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಗ್ರಾಹಕರ ಸೇವಾ ಕೇಂದ್ರದ ಮುಖ್ಯಸ್ಥ ಮಹಾಂತೇಶ ಗೋನಾಳ ಪ್ರಾಸ್ತಾವಿಕ ಮಾತನಾಡಿದರು. ಯರಗೇರಾ, ಹಾಬಲಕಟ್ಟಿ, ಕಬ್ಬರಗಿ, ಕಟಾಪುರ ಗ್ರಾಹಕರ ಸೇವಾ ಕೇಂದ್ರದ, ಯಮನೂರ ರಾಜೂರ, ಫಕೀರಪ್ಪ , ಸೂರೇಶ ಕಟಾಪೂರ, ಸಂಗಮೇಶ ಸಂಗಮದ, ಪ್ರವೀಣಕುಮಾರ ಗೌಡರ, ಹಿರಿಯ ಪತ್ರಕರ್ತ ಶ್ರೀನಿವಾಸ ಜಹಗೀರದಾರ, ಮರಿಯಪ್ಪ ಪಾಲಕರ, ರಮೇಶ ಪಾವಿ, ಚಂದಪ್ಪ ಗೋನಾಳ, ಮಲ್ಲಕಾರ್ಜುನ , ಬಸವರಾಜ ವಡ್ಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next