ರಾಮದುರ್ಗ: ತೇರ ಬಜಾರದ ಸುತ್ತಮುತ್ತಲಿನ ವಾರ್ಡ್‌ಗಳಲ್ಲಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ತೇರಬಜಾರದಲ್ಲಿ ಶನಿವಾರ ಸುಮಾರು 2 ಕೋಟಿ ವೆಚ್ಚದಲ್ಲಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿರುವ ಚರಂಡಿಗಳ ದುರಸ್ತಿಯೊಂದಿಗೆ, ಚರಂಡಿಯ ಮೇಲೆ ಸ್ಲಾ ಬ್ ಹಾಕಿ, ಪೇವರ್ ಅವಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ನಗರ ಸ್ವತ್ಛತೆ ಹೆಚ್ಚಿನ ಆಸಕ್ತಿ ವಹಿಸಿದ್ದು, ಕಸ ತುಂಬಿಕೊಂಡು ಹೋಗಲು ಇನ್ನೂ ನಾಲ್ಕು ವಾಹನ ತರಲಾಗುವುದು ಎಂದರು.
ಪುರಸಭೆ ಮೀಸಲಾತಿ ವಿವಾದಕ್ಕೆ ಶೀಘ್ರ ಮುಕ್ತಿ: ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಮೀಸಲಾತಿ ವಿವಾದ ಕೋರ್ಟ್‌ನಲ್ಲಿದ್ದು, ಕಳೆದ ಒಂದು ವರ್ಷಗಳಿಂದ ಆಡಳಿತ ಮಂಡಳಿ ರಚನೆಯಾಗದೆ.
ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ಮುತವರ್ಜಿ ವಹಿಸಿ ಅದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಶೀಘ್ರ ಮೀಸಲಾತಿ ವಿವಾದಕ್ಕೆ ಮುಕ್ತಿ ದೊರೆಯಲಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಮುಖಂಡರಾದ ಎಸ್.ಜಿ. ಮಾಳವಾಡ, ಗುರಪ್ಪ ಮೆನಸಗಿ, ಪುರಸಭೆ ಸದಸ್ಯರಾದ ರಘುನಾಥ ರೇಣಕೆ, ಶಾನೂರ ಯಾದವಾಡ, ರಾಜು ಬೆಂಬಳಗಿ, ಸಂಗೀತಾ ರಾಯಭಾಗ, ಲಕ್ಷ್ಮಿಬಾಯಿ ಹಂಚಾಟೆ, ರಾಘು ದೊಡಮನಿ ಇದ್ದರು.