ಮಧುಗಿರಿ: ಶಾಲೆಬಿಟ್ಟ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಬಿಇಒ ರಂಗಪ್ಪ ತಿಳಿಸಿದರು.
ಪಟ್ಟಣದ ಬಿಆರ್‌ಸಿ ಕಚೇರಿಯ ಮೈದಾನದಲ್ಲಿ ಆಂದೋಲನದ ಜಾಥಾಗೆ ಚಾಲನೆ ನೀಡಿದ ಅವರು ಮಾತನಾಡಿ, ಮೇ 31ರವರೆಗೆ ವಿಶೇಷ ದಾಖಲಾತಿ ಆಂದೋಲನವನ್ನು ನಡೆಯಲಿದೆ. ಜೂ.1ರಿಂದ ಜೂ.30 ರವರೆಗೂ ಸಾಮಾನ್ಯ ದಾಖಲಾತಿ ಆಂದೋಲನ ನಡೆಸಲಿದೆ. ಮಕ್ಕಳಿಗೆ ಉಚಿತ ಶಿಕ್ಷಣವನ್ನು ಎಲ್ಲ ಸೌಲಭ್ಯದ ಜೊತೆಗೆ ನೀಡಲಾಗುವುದು.
ತಾಲೂಕಿನಲ್ಲಿ ಶಾಲೆ ಬಿಟ್ಟಂತಹ 33 ಮಕ್ಕಳನ್ನು ಗುರುತಿಸಿದ್ದು, ಮತ್ತೆ ಮುಖ್ಯವಾಹಿನಿಗೆ ತರಲು ಅಧಿ ಕಾರಿಗಳು ಹಾಗೂ ಶಿಕ್ಷಕ ವರ್ಗವು ಶ್ರಮಿಸುತ್ತಿದ್ದೇವೆ. ಅಲ್ಲದೆ, ಬಾಲ ಕಾರ್ಮಿಕರಾಗಿ ಕೆಲವು ಅಂಗಡಿಗಳಲ್ಲಿ ಕೆಲಸ ಮಾಡು ತ್ತಿದ್ದು, ಅಂತಹ ಮಕ್ಕಳ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಮಕ್ಕಳ ಮಾಹಿತಿ ದೊರೆತರೆ ಖಂಡಿತ ಸ್ಥಳಕ್ಕೆ ತೆರಳಿ ಶಿಕ್ಷಣದ ಗೂಡಿಗೆ ಮರಳಿ ಕರೆ ತರಲಾಗುವುದು ಎಂದರು.
ಸಂಪೂರ್ಣ ಶಿಕ್ಷಣದ ಕನಸು ನನಸು: ಡಿಡಿಪಿಐ ಸಹಾಯಕ ಯೋಜನಾ ಉಪ ಸಮನ್ವಯಾಧಿಕಾರಿ ಮಾರುತಿ ಮಾತ ನಾಡಿ, ಜಿಲ್ಲೆಯಲ್ಲಿ ಶಾಲೆಬಿಟ್ಟ ಮಕ್ಕಳನ್ನು ಗುರುತಿಸಿದ್ದು, ಮಧುಗಿರಿ ಯಲ್ಲಿ 33, ಕೊರಟಗೆರೆ-34, ಪಾವಗಡ-34, ಸಿರಾದಲ್ಲಿ 198 ಮಕ್ಕಳಿದ್ದಾರೆ. ಇವರನ್ನು ಜಾನಾಂದೋಲನದ ಮೂಲಕ ಶಿಕ್ಷಣದ ಮುಖ್ಯವಾಹಿಸಿಗೆ ಕರೆತರಲು ಇಲಾಖೆ ಮುಂದಾಗಿದ್ದು, ಶಾಲೆ ಕಡೆ ನನ್ನ ನಡೆ ಎಂದು ಇಡೀ ರಾಜ್ಯಾದ್ಯಂತ ಈ ಕಾರ್ಯ ಕ್ರಮ ಆರಂಭವಾಗುತ್ತಿದೆ. ಇದರಿಂದ ವಿಶೇಷ ಮಕ್ಕಳಿಗೆ ಅನುಕೂಲವಾಗಲಿದ್ದು, ಸಂಪೂರ್ಣ ಶಿಕ್ಷಣದ ಕನಸು ನನಸಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಆರ್‌ಸಿ ಆನಂದ್ ಕುಮಾರ್, ಮುಖ್ಯಶಿಕ್ಷಕ ಹನುಮಂತರಾಯಪ್ಪ, ಶಿಕ್ಷಕರಾದ ನಾಗೇಶಯ್ಯ, ಚೆನ್ನಬಸವಣ್ಣ, ರಂಗಮ್ಮ ಹಾಜರಿದ್ದರು.