Advertisement

10 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ

02:22 PM Oct 04, 2019 | Suhan S |

ಮಹಾಲಿಂಗಪುರ: ಹೊಸದಾಗಿ ನಿರ್ಮಿಸುತ್ತಿರುವ ಸಾಮೂಹಿಕ ಶೌಚಾಲಯಗಳನ್ನು ಮಾದರಿಯಾಗಿ ನಿರ್ಮಿಸಿ, ಅವುಗಳ ನಿರ್ವಹಣೆ ಮತ್ತು ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಪಟ್ಟಣದ ಕೇಂಗೇರಿಮಡ್ಡಿಯ ವಾರ್ಡ್‌ ನಂಬರ 13ರಲ್ಲಿ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯಲ್ಲಿ ಸುಮಾರು 10.07 ಲಕ್ಷ ವೆಚ್ಚದ ಸಾಮೂಹಿಕ ಶೌಚಾಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದಅವರು, ಕೇಂಗೇರಿಮಡ್ಡಿಯಲ್ಲಿ ಮಹಿಳೆಯರು – ಪರುಷರಿಗೆ ಶೌಚಾಲಯದ ಸಮಸ್ಯೆ ತೀವ್ರವಾಗಿದೆ. ಅದಕ್ಕಾಗಿ ಈಗ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಕೆಂಗೇರಿಮಡ್ಡಿ ಸುತ್ತಲಿರುವ ಅತಿಕ್ರಮಣ ಸರಕಾರಿ ಜಾಗೆ ಗುರುತಿಸಿ, ಬೇಲಿ ಹಾಕಿ, ಅದೇ ಜಾಗದಲ್ಲಿ ಬರುವ ದಿನಗಳಲ್ಲಿ ಅಗತ್ಯವಿರುವಷ್ಟು ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕೆಂಗೇರಿಮಡ್ಡಿಯನ್ನು ಬಯಲು ಶೌಚ ಮುಕ್ತ ಪಟ್ಟಣವನ್ನಾಗಿಸಬೇಕು ಎಂದು ಶಾಸಕ ಸವದಿ, ಮುಖ್ಯಾಧಿಕಾರಿ ಬಾಬುರಾವ ಕಮತಗಿ ಅವರಿಗೆ ಆದೇಶಿಸಿದರು.

ತೇರದಾಳ ಮತಕ್ಷೇತ್ರದ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ಕಾರ್ಯದರ್ಶಿ ಆನಂದ ಕಂಪು, ವಾರ್ಡ್‌ ಸದಸ್ಯ ಶೇಖರ ಅಂಗಡಿ, ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ, ಮುಖ್ಯಾಧಿಕಾರಿ ಬಾಬುರಾವ ಕಮತಗಿ, ಬಿಜೆಪಿ ಮುಖಂಡರಾದ ಚನಬಸು ಹುರಕಡ್ಲಿ, ಚನ್ನಪ್ಪ ರಾಮೋಜಿ, ಪ್ರಶಾಂತ ಮುಕ್ಕೆನ್ನವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next