Advertisement
ಚನ್ನರಾಯಪಟ್ಟಣ ಘಟಕದಿಂದ 104ಮಾರ್ಗಗಳಲ್ಲಿಬಸ್ ಸಂಚಾರ ಮಾಡಬೇಕಿದೆ. ಆದರೆ, ಈಗ 65 ಮಾರ್ಗದಲ್ಲಿ ಮಾತ್ರ ಓಡಾಟ ನಡೆಸುತ್ತಿವೆ. ಉಳಿದ 39 ಮಾರ್ಗದಲ್ಲಿ ಬಸ್ ಸಂಚರಿಸದೇ ಜನತೆ ಸರಕು ಸಾಗಣೆ ವಾಹನ ಗಳು, ಪ್ರಯಾಣಿಕರ ಆಟೋ, ಖಾಸಗಿ ವಾಹನ ಅವಲಂಬಿಸುವಂತಾಗಿದೆ. ಈಗಾಗಲೇ ವಾರದ ಸಂತೆಗಳು ಆರಂಭವಾಗಿರುವುದರಿಂದ ತರಕಾರಿ, ದಿನಸಿ, ಇತರೆ ಪದಾರ್ಥ ಕೊಳ್ಳುವವರು, ಮಾರಾಟ ಮಾಡುವವರ ಪರಿಸ್ಥಿತಿ ಹೇಳ ತೀರದಾಗಿದೆ.
Related Articles
Advertisement
ಘಟಕಕ್ಕೆ ದೂರವಾಣಿ ಕರೆಗಳ ಸುರಿಮಳೆ: ನಿತ್ಯವೂ ಗ್ರಾಮೀಣ ಭಾಗದ ಜನ ಘಟಕಕ್ಕೆ ದೂರವಾಣಿ ಕರೆ ಮಾಡಿ ಬಸ್ ಸೌಲಭ್ಯಕಲ್ಪಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ವೇಳೆ ಘಟಕದ ಸಿಬ್ಬಂದಿ ನಿಗಮದ ನಿಯಮ ಹಾಗೂ ಆದಾಯವಾಗದ ಬಗ್ಗೆ ತಿಳಿಸುವ ಮೂಲಕ ಪ್ರಯಾಣಿಕರನ್ನು ಸಂತೈಸುವಂತಾಗಿದೆ.
ಪಾಸ್ ಪಡೆಯುವವರ ಸಂಖ್ಯೆಯೂ ಕ್ಷೀಣ : ಕೋವಿಡ್ ಗೆ ಮೊದಲು ಮಾಸಿಕ ಪಾಸ್ ವಿತರಣೆಯಿಂದ ನಿತ್ಯವೂ50 ಸಾವಿರ ರೂ. ಹಣ ಸಂಗ್ರಹ ಆಗುತ್ತಿತ್ತು. ಲಾಕ್‌ಡೌನ್ ತೆರವಾದ ಮೇಲೆ ಮಾಸಿಕ ಪಾಸ್ ನಿಂದ 20 ರಿಂದ 25 ಸಾವಿರ ರೂ. ಹಣ ನಿತ್ಯ ಸಂಗ್ರಹವಾಗುತ್ತಿದೆ. ಇನ್ನು ಕಳೆದ ಸಾಲಿನಲ್ಲಿ90 ಸಾವಿರ ವಿದ್ಯಾರ್ಥಿಗಳು ವಾರ್ಷಿಕ ಪಾಸ್ ಪಡೆದಿದ್ದರಿಂದ ಲಕ್ಷಾಂತರ ರೂ. ಹಣನಿಗಮಕ್ಕೆ ಬಂದಿತ್ತು. ಪ್ರಸಕ್ತ ವರ್ಷ ಶಾಲಾಕಾಲೇಜು ಬಾಗಿಲು ತೆರೆಯದೆ ಇರುವುದರಿಂದ ವಿದ್ಯಾರ್ಥಿ ಪಾಸ್ ವಿತರಣೆ ಆಗಿಲ್ಲ, ಆದಾಯವೂ ಶೂನ್ಯ.
ತರಬೇತಿ, ರಜೆ : ಘಟಕದಲ್ಲಿ430 ಚಾಲಕ, ನಿರ್ವಾಹಕರು,59 ಮಂದಿ ತಾಂತ್ರಿಕ ಸಿಬ್ಬಂದಿ ಇದ್ದಾರೆ. ಇವರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಚಾರ ಮಾಡುವ ಬಸ್‌ನ ಚಾಲಕ ಹಾಗೂ ನಿರ್ವಾಹಕರು ತರಬೇತಿಯಲ್ಲಿದ್ದಾರೆ. ಇನ್ನು ಕೆಲವರು ರಜೆ ಮೇಲೆ ಊರಿಗೆ ತೆರಳಿದ್ದಾರೆ, ಇವರಿಗೆಲ್ಲ ಸರ್ಕಾರ ಆಗಸ್ಟ್ ಅಂತ್ಯದವರೆಗೆ ವೇತನ ನೀಡಿಲ್ಲ,59 ಮಂದಿ ತಾಂತ್ರಿಕ ಸಿಬ್ಬಂದಿ ಸೆ.1ರಿಂದಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಶಾಲಾಕಾಲೇಜು ಪ್ರಾರಂಭ ಆಗುವವರೆಗೆ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಮಾಡುವುದು ಬೇಡ ಎಂದು ಮೇಲಧಿಕಾರಿಗಳು ಆದೇಶಿಸಿದ್ದಾರೆ,ಕ್ಷೇತ್ರದ ಶಾಸಕ ಬಾಲಕೃಷ್ಣ ಈಗಾಗಲೆ ಸಭೆ ಮಾಡಿ ಅಗತ್ಯ ಇರುವ ಗ್ರಾಮಕ್ಕೆ ಹಂತವಾಗಿ ಬಸ್ ಓಡಿಸಲು ಸೂಚಿಸಿದ್ದಾರೆ. ಆದಾಯ ನೋಡಿ ಸಂಚಾರ ಆರಂಭಿಸಲಾಗುವುದು. –ಎಸ್.ಬಿ.ಶ್ರೀಧರ್, ಸಹಾಯಕ ಕಾರ್ಯಧೀಶಕರು.
ಗ್ರಾಮೀಣ ಭಾಗಕ್ಕೆ ಬಸ್ ಸಂಚಾರ ಮಾಡದೇ ಇರುವುದರಿಂದ ಅನೇಕ ಮಂದಿಗೆ ತೊಂದರೆ ಆಗುತ್ತಿದೆ. ಆದಷ್ಟು, ಬೇಗ ಬಸ್‌ಗಳು ಹಳ್ಳಿಕಡೆಗೆ ಸಂಚರಿಸುವಂ ತಾಗಲಿ, ಸ್ವಂತ ವಾಹನ ಹೊಂದಿಲ್ಲದವರ ಪಾಡು ಹೇಳತೀರದಂತಾಗಿದೆ. –ಶೇಖರ್, ಅಂಗವಿಕಲ, ಬಾಗೂರು.
ಶಾಮಸುಂದರ್ ಕೆ. ಅಣ್ಣೇನಹಳ್ಳಿ