Advertisement
ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ದ.ಕ. ಜಿಲ್ಲಾಡಳಿತವು ಪೂರ್ಣ ರೀತಿಯಲ್ಲಿ ವ್ಯವಸ್ಥೆ ಕೈಗೊಂಡಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಸಿಸಿ ಕೆಮರಾಗಳನ್ನು ಅಳವಡಿಸಲಾಗಿತ್ತು. ಜತೆಗೆ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಂಗಳೂರು ವ್ಯಾಪ್ತಿಯಲ್ಲಿ ಬಹುತೇಕ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನುತಲುಪಿದ್ದರು. ಪರೀಕ್ಷೆ ಆರಂಭವಾಗುವ ಮೊದಲು ವಿದ್ಯಾರ್ಥಿಗಳು ಸಹಪಾಠಿಗಳ ಜತೆಗೆ ಸೇರಿ ಕೊನೆಯ ಕ್ಷಣದ ಸಿದ್ಧತೆ, ಅಭ್ಯಾಸ ಮಾಡಿದರು. ಈ ಮಧ್ಯೆ ಕೆಲವು ವಿದ್ಯಾರ್ಥಿಗಳ ಹೆತ್ತವರು ಕೂಡ ಮಕ್ಕಳ ಜತೆಗೆ ಆಗಮಿಸಿ, ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಅವ ರಿಗೆ ಧೈರ್ಯ ತುಂಬುತ್ತಿದ್ದ ದೃಶ್ಯ ಕಂಡು ಬಂತು. ಜಿಲ್ಲೆಯ ಒಟ್ಟು 54 ಪರೀಕ್ಷಾ ಕೇಂದ್ರ ಗಳ ಪೈಕಿ ಮಂಗಳೂರು ತಾಲೂಕಿನ 25, ಮೂಡಬಿದಿರೆ 5, ಬಂಟ್ವಾಳ 7, ಪುತ್ತೂರು 9, ಬೆಳ್ತಂಗಡಿ 5 ಹಾಗೂ ಸುಳ್ಯದ 3 ಕೇಂದ್ರಗಳಲ್ಲಿ ಪರೀಕ್ಷೆ ಮೊದಲ ದಿನ ನಡೆಯಿತು. ಪರೀಕ್ಷೆ ಬರೆಯುವ ವಿದ್ಯಾ ರ್ಥಿಗಳು ಬೆಳಗ್ಗೆ ಬೇಗ ಎದ್ದು ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡರು.
Related Articles
ದ.ಕ. ಜಿಲ್ಲೆಯಲ್ಲಿ ಒಟ್ಟು 19,567 ಗಂಡು ಮಕ್ಕಳು ಹಾಗೂ 19,066 ಹೆಣ್ಣು ಮಕ್ಕಳು ಸೇರಿ ಒಟ್ಟು 38,633 ವಿದ್ಯಾರ್ಥಿಗಳು ಒಟ್ಟು 54 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಂಡಿದ್ದರು. ಇದರಲ್ಲಿ 34,863 ರೆಗ್ಯುಲರ್ ವಿದ್ಯಾರ್ಥಿಗಳು, 1,400 ಮಂದಿ ರಿಪೀಟರ್, 2,370 ಮಂದಿ ಖಾಸಗಿಯಾಗಿ ಬರೆಯುವವರು ಆಗಿದ್ದಾರೆ. ಕಲಾ ವಿಭಾಗದಲ್ಲಿ 4,901, ವಾಣಿಜ್ಯ ವಿಭಾಗದಲ್ಲಿ 17,045 ಹಾಗೂ ವಿಜ್ಞಾನ ವಿಭಾಗದಲ್ಲಿ 16,687 ವಿದ್ಯಾರ್ಥಿಗಳಿದ್ದಾರೆ.
Advertisement