ಹೊಸದಿಲ್ಲಿ: ಗುಜರಾತ್,ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿ ದ್ದಂತೆಯೇ ಎರಡೂ ರಾಜ್ಯಗಳಲ್ಲಿ ಸರಕಾರ ರಚನೆ ಪ್ರಕ್ರಿಯೆಯನ್ನು ಬಿಜೆಪಿ ಚುರುಕುಗೊಳಿಸಿದೆ. ಇದಕ್ಕಾಗಿ ಎರಡೂ ರಾಜ್ಯಗಳಿಗೆ ಮೇಲ್ವಿಚಾರಕರನ್ನು ಪಕ್ಷ ಕಳುಹಿಸಿಕೊಟ್ಟಿದೆ.
ಕಾರ್ಯಕರ್ತರು, ಶಾಸಕರ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಸಚಿವ ಅರುಣ್ ಜೇಟಿÉ, ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ ಅವರನ್ನು ಗುಜರಾತ್‌ಗೆ ಕಳುಹಿಸಲಾಗಿದೆ. ಹಿಮಾಚಲ ಪ್ರದೇಶಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್ ಅವರನ್ನು ಕಳುಹಿಸಲಾಗಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಪಿ.ಕೆ. ಧುಮಾಲ್ ಸಹಿತ ಹಲವು ಪ್ರಮುಖರೇ ಸೋತಿರುವ ಹಿನ್ನೆಲೆಯಲ್ಲಿ ಸಿಎಂ ಆಯ್ಕೆ ಕಷ್ಟ ಸಾಧ್ಯ ಎನ್ನಲಾಗಿದೆ. ಇನ್ನು ಗುಜರಾತ್‌ನಲ್ಲಿ ಹಾಲಿ ಸಿಎಂ ವಿಜಯ ರೂಪಾಣಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಕರ್ನಾಟಕ ರಾಜ್ಯಪಾಲರು ಗುಜರಾತ್‌ಗೆ ಸಿಎಂ?: ಗುಜರಾತ್‌ನ ಹಾಲಿ ಸಿಎಂ ವಿಜಯ ರೂಪಾಣಿಯೇ ಪಕ್ಷದ ಮುಖವಾಣಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವಿåತ್ ಶಾ ಈ ಹಿಂದೆ ಹೇಳಿದ್ದರೂ ಈ ಬಾರಿಯೂ ಅವರೇ ಸಿಎಂ ಆಗ್ತಾರಾ ಎಂಬುದನ್ನು ಸದ್ಯಕ್ಕೆ ನಿರ್ಧರಿಸಿಲ್ಲ. ಈ ಬಾರಿ ಅವರು ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದಂತೂ ನಿಜ. ಆದರೆ ಸಂಭಾವ್ಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯಪಾಲ ವಜೂಭಾಯಿ ರುಢಾಭಾಯಿ ವಾಲಾ ಕೂಡ ಇದ್ದಾರೆ ಎನ್ನಲಾಗಿದೆ. ಕೇಂದ್ರ ಜವುಳಿ ಖಾತೆ ಸಚಿವೆ ಸ್ಮತಿ ಇರಾನಿ, ಸಾರಿಗೆ ಮತ್ತು ಬಂದರು ರಾಜ್ಯ ಖಾತೆ ಸಚಿವ ಮನ್ಸುಖ್ ಎಲ್. ಮಾಂಡವಿಯಾ ಕೂಡ ಪಟ್ಟಿಯಲ್ಲಿದ್ದಾರೆ. ಸ್ಮತಿ ಇರಾನಿ ಗುಜರಾತ್‌ನಲ್ಲಿ ಸಾಕಷ್ಟು ಜನಪ್ರಿಯವೂ ಆಗಿದ್ದು, ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೆ ತಾನು ಕಣದಲ್ಲಿಲ್ಲ ಎಂದು ಸ್ಮತಿ ಇರಾನಿ ಮಂಗಳವಾರ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಮನ್ಸುಖ್ ಪಾಟೀದಾರ ಮುಖಂಡರಾಗಿದ್ದು, ಸಿಎಂ ಆಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಸಿಎಂ ಆಗ್ತಾರಾ ಧುಮಾಲ್?: ಸಾಮಾನ್ಯವಾಗಿ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸದ ಬಿಜೆಪಿ ಈ ಬಾರಿ ಹಿಮಾಚಲ ಪ್ರದೇಶ ದಲ್ಲಿ ಪಿ.ಕೆ.ಧುಮಾಲ್‌ರನ್ನು ಘೋಷಿಸಿತ್ತು. ಆದರೆ 68 ಕ್ಷೇತ್ರಗಳ ಪೈಕಿ 44 ಕ್ಷೇತ್ರಗಳನ್ನು ಬಿಜೆಪಿ ಗೆದ್ದರೂ ಧುಮಾಲ್ ಸೋತಿದ್ದಾರೆ. ಪಕ್ಷಕ್ಕೆ ಹೊಸ ಮುಖ ಆಯ್ಕೆ ಮಾಡುವ ಅನಿವಾರ್ಯತೆ ಉಂಟಾಗಿದೆ.
ಸದ್ಯ ಸಿಎಂ ಪೈಪೋಟಿಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಜೈರಾಮ್ ಠಾಕೂರ್, ಧುಮಾಲ್ ಪುತ್ರ ಅನುರಾಗ್ ಠಾಕೂರ್ ಇದ್ದಾರೆ. ಜೆ.ಪಿ.ನಡ್ಡಾ ರಾಜ್ಯದಲ್ಲಿ ಉತ್ತಮ ಅಭಿಪ್ರಾಯ ಉಳಿಸಿಕೊಂಡಿದ್ದಾರೆ. ಇಂದಿಗೂ ಆಗಾಗ್ಗೆ ತಮ್ಮ ಕ್ಷೇತ್ರಕ್ಕೆ ತೆರಳಿ ಜನರ ಜತೆ ಬೆರೆಯುತ್ತಾರೆ. ಆದರೆ ಜಾತಿ ವಿಚಾರದಲ್ಲಿ ಇವರನ್ನು ಆಯ್ಕೆ ಮಾಡುವ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಹಿಮಾಚಲ ಪ್ರದೇಶದಲ್ಲಿ ಶೇ. 32ರಷ್ಟು ಠಾಕೂರರಿದ್ದು, ಬ್ರಾಹ್ಮಣ ನಡ್ಡಾರನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಇದೆ.
ಇನ್ನು ಜೈರಾಮ್ ಠಾಕೂರ್ ಮಂಡಿ ಪ್ರಾಂತ್ಯದವರಾಗಿದ್ದು ಸತತ 5ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇವರು ಆಡಳಿತ ಹಾಗೂ ಸಂಘಟನೆಯೆರಡರಲ್ಲೂ ಅಪಾರ ಅನುಭವ ಹೊಂದಿರುವ ನಾಯಕ. ಪಕ್ಷದ ಅಧ್ಯಕ್ಷರೂ ಆಗಿದ್ದವರು. ಆದರೆ ಹಿಮಾಚಲ ಪ್ರದೇಶದ ಎಲ್ಲ ಭಾಗಗಳ ಜನರಿಗೂ ಇವರು ಅಷ್ಟು ಪ್ರಚಲಿತದಲ್ಲಿರುವ ವ್ಯಕ್ತಿಯಲ್ಲ.
ಹಮೀರ್‌ಪುರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನುರಾಗ್ ಠಾಕೂರ್, ಧುಮಾಲ್ ಅವರ ಪುತ್ರ. ಆದರೆ ಇವರನ್ನು ಸಿಎಂ ಆಗಿ ಮಾಡಿದರೂ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಅನುರಾಗ್ ಬಗ್ಗೆ ಒಲವಿದೆ ಎನ್ನಲಾಗಿದೆ.
ನನ್ನ ಕ್ಷೇತ್ರಕ್ಕೆ ಬನ್ನಿ ಧುಮಾಲ್!
ಧುಮಾಲ್ ಸುಜಾನ್‌ಪುರದಲ್ಲಿ ಸ್ವತಂತ್ರ ಅಭ್ಯರ್ಥಿಯ ಎದುರು ಸೋತ ಹಿನ್ನೆಲೆಯಲ್ಲಿ ತನ್ನ ಕ್ಷೇತ್ರದಿಂದ ಸ್ಪರ್ಧಿಸಿ ಸಿಎಂ ಆಗುವಂತೆ ವರಿಂದರ್ ಕನ್ವರ್ ಕೇಳಿಕೊಂಡಿದ್ದಾರೆ. ಕನ್ವರ್ ಉನಾದಲ್ಲಿನ ಕುಟ್ಲೆಹಾರ್‌ನಲ್ಲಿ ಆಯ್ಕೆಯಾಗಿದ್ದು, “ನನ್ನ ಕ್ಷೇತ್ರ ವನ್ನು ಬಿಟ್ಟುಕೊಡುತ್ತೇನೆ. ಇಲ್ಲಿ ಚುನಾವಣೆಗೆ ಸ್ಪರ್ಧಿಸಿ, ಸಿಎಂ ಆಗಿ’ ಎಂದು ಧುಮಾಲ್ ಅವರನ್ನು ಆಹ್ವಾನಿಸಿದ್ದಾರೆ. ಆದರೆ ಧುಮಾಲ್ ಇನ್ನೂ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ಬಗ್ಗೆ ಹೈಕಮಾಂಡ್ ಸೂಚನೆಗೆ ಧುಮಾಲ್ ಕಾದಿದ್ದಾರೆ ಎನ್ನಲಾಗುತ್ತಿದೆ.