Advertisement

ಮಲ್ಲೇಶ್ವರ ಕಡಲೆಕಾಯಿ ಪರಿಷೆ ಶುರು

12:42 AM Nov 17, 2019 | Lakshmi GovindaRaju |

ಬೆಂಗಳೂರು: ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಮೂರು ದಿನಗಳ ಕಡಲೆಕಾಯಿ ಪರಿಷೆಗೆ ಶನಿವಾರ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು. ಕಾಡುಮಲ್ಲೇಶ್ವರ ಗೆಳೆಯರ ಬಳಗವು ಹುಣ್ಣಿಮೆ ಹಾಡು 125ನೇ ಕಾರ್ಯಕ್ರಮ (ದಶಮಾನೋತ್ಸವ)ದ ಅಂಗವಾಗಿ ಮೂರನೇ ವರ್ಷದ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಹಮ್ಮಿಕೊಂಡಿದೆ. ಪರಿಷೆ ಜತೆಗೆ ಕಾಡುಮಲ್ಲೇಶ್ವರ ಬಯಲು ರಂಗಮಂಟಪದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳುನ್ನು ಆಯೋಜಿಸಲಾಗಿದೆ.

Advertisement

ಮೊದಲ ದಿನವಾದ ಶನಿವಾರ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಗರ್ಭಗುಡಿ ಹಾಗೂ ಒಳಾಂಗಣವನ್ನು ಪೂರ್ತಿ ಕಡಲೆಕಾಯಿಗಳಿಂದಲೇ ಅಲಂಕರಿಸಲಾಗಿತ್ತು. ಕಾಡುಮಲ್ಲೇಶ್ವರ ದೇವಸ್ಥಾನದ ಸುತ್ತಲಿನ ರಸ್ತೆಗಳು ಹೂವು, ತಳಿರು ತೋರಣಗಳಿಂದ ಅಲಂಕೃತಗೊಂಡಿವೆ. ದೇವಸ್ಥಾನ ಆವರಣದಲ್ಲಿ ರಾಶಿ ರಾಶಿ ಕಡಲೆಕಾಯಿ ಹಾಕಿ ಮಾರಾಟ ಮಾಡಲಾಗುತ್ತಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತಿತರ ಭಾಗಗಳಿಂದ ಹಾಲ್ಗಡಲೆ, ಕೆಂಪುಕಡಲೆ ಲಭ್ಯವಿದ್ದು, ಎರಡು, ಮೂರು ಹಾಗೂ ನಾಲ್ಕು ಬೀಜದ ನಾಟಿ ಮತ್ತು ಹೈಬ್ರಿಡ್ ತಳಿಯ ಕಡಲೇ ಕಾಯಿಗಳು ಗ್ರಾಾಹಕರನ್ನು ಸೆಳೆಯುತ್ತಿಿವೆ. ಸದ್ಯ ಸೇರಿಗೆ 30 ರೂ.ನಂತೆ ಮಾರಾಟವಾಗುತ್ತಿವೆ.

500ಕ್ಕೂ ಹೆಚ್ಚು ಮಳಿಗೆ: ಈ ಬಾರಿ ಪರಿಷೆಯಲ್ಲಿ ಕಡಲೆಕಾಯಿ, ಆಟಿಕೆಗಳು, ತಿಂಡಿ ಮಳಿಗೆಗಳು ಸೇರಿದಂತೆ ಪರಿಷೆಯಲ್ಲಿ ಒಟ್ಟಾಾರೆ 500ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಜತೆಗೆ ಚಿತ್ರಪರಿಷೆ, ಕರಕುಶಲ ವಸ್ತುಗಳ ಮಾರಾಟ, ಮಕ್ಕಳಿಗೆ ಆಟಿಕೆಗಳಿವೆ. ಹಲವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಪರಿಷೆಗೆ ಬರುವವರ ಗಮನ ಸೆಳೆಯಲಿವೆ ಎಂದು ಬಳಗದ ಸದಸ್ಯರು ತಿಳಿಸಿದರು.

ಮುತ್ತೈದೆಯರಿಗೆ ಉಚಿತ ಬಳೆ ವಿತರಣೆ: ಪರಿಷೆಯಲ್ಲಿ ಮುತ್ತೈದೆಯರಿಗೆ ದಾಂಡೇಲಿಯ ಉಳವಿ ಚನ್ನಬಸವೇಶ್ವರ ಮಠದ ವತಿಯಿಂದ ಲಿಂಗ ಮತ್ತು ಬಸವನ ಅಚ್ಚುಳ್ಳ ಹಸಿರು ಗಾಜಿನ ಬಳೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಬಳೆಗಳನ್ನು ತೊಡುವುದು ಶ್ರೇಯಸ್ಕರ ಎಂಬ ಪ್ರತೀತಿಯಿದೆ. ಹೀಗಾಗಿ ಪರಿಷೆಯ ಆಯೋಜಕರು ಉಳುವಿಯಿಂದ 10 ಸಾವಿರ ಗಾಜಿನ ಬಳೆಗಳನ್ನು ತರಿಸಿ ಪರಿಷೆಗೆ ಬರುವವರಿಗೆ ತಲಾ ಎರಡೆರಡು ಬಳೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಜತೆಗೆ ಹೆಚ್ಚಿನ ಬಳೆಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next