Advertisement
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ “ನಮ್ಮ 100′ ಮತ್ತು “ಕಮಾಂಡೊ ಸೆಂಟರ್’ಗೆ ಚಾಲನೆ ನೀಡಿದ ಅವರು, “ಸಮಾಜವನ್ನು ಸಂಪೂರ್ಣ ಅಪರಾಧ ಮುಕ್ತವಾಗಿಸಲು ಅಸಾಧ್ಯ. ಆದರೆ, ಕಡಿಮೆ ಮಾಡಬಹುದು. ಇದು ಸವಾಲಿನ ಕೆಲಸವೇನಲ್ಲ. ಇನ್ಸ್‌ಪೆಕ್ಟರ್, ಎಸಿಪಿಗಳು ಮನಸ್ಸು ಮಾಡಬೇಕು ಅಷ್ಟೇ,’ ಎಂದು ತಿಳಿಸಿದರು.
Related Articles
Advertisement
ಏನಿದು ನಮ್ಮ 100?: ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ ಸೇರಿದಂತೆ ನಾನಾ ಸೇವೆಗಳನ್ನು ಒಂದೆ ಸೂರಿನಡಿ ತರಲಾಗಿದೆ. ಈ ಸೇವೆ ಪಡೆಯಲು ಸಾರ್ವಜನಿಕರು 100ಗೆ ಡಯಲ್ ಮಾಡಬೇಕು. ಪೊಲೀಸ್ ಸೇವೆಗೆ 1, ಸಂಚಾರ ಪೊಲೀಸ್ ಸೇವೆಗೆ 2, ವಿಚಾರಣೆ ಮತ್ತು ಪೊಲೀಸ್ ಠಾಣೆಗೆ ಭೇಟಿ ನೀಡುವ ಸಮಯ ನಿಗದಿಗೆ 3 ನಮೂದಿಸಬೇಕು. ಆಗ ಬೇಕಾದ ಮಾಹಿತಿ ಮತ್ತು ನೆರವು ಲಭ್ಯವಾಗುತ್ತದೆ. ಮುಂದಿನ ಒಂದೆರಡು ವಾರಗಳಲ್ಲಿ ಅಗ್ನಿ ಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಯನ್ನೂ ಈ ವ್ಯವಸ್ಥೆಯಲ್ಲೇ ಸೇರಿಸುವ ಉದ್ದೇಶವಿದೆ. ಇದಕ್ಕಾಗಿ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ.
ಕನ್ನಡಿಗರಿಗಿಲ್ಲ ಪ್ರಾಧಾನ್ಯತೆ: ಹೊಸದಾಗಿ ಆರಂಭವಾಗಿರುವ ಕಮಾಂಡೊ ಸೆಂಟರ್‌ನಲ್ಲಿ ಹೆಚ್ಚಾಗಿ ತಮಿಳರು, ಇತರೆ ಭಾಷಿಕರಿಗೆ ಆದ್ಯತೆ ನೀಡಲಾಗಿದೆ. ಕನ್ನಡಿಗರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿನ ಕೆಲ ಸಿಬ್ಬಂದಿಗೆ ಸ್ಪಷ್ಟವಾಗಿ ಕನ್ನಡವೇ ಬರುವುದಿಲ್ಲ. ಇನ್ನು ಬೆಂಗಳೂರಿಗರ ಜತೆ ಹೇಗೆ ವ್ಯವಹರಿಸುತ್ತಾರೆ. ಅಲ್ಲದೇ ಕಮಾಂಡ್ ಸೆಂಟರ್‌ನಲ್ಲಿ ಹೆಚ್ಚಿನವರು ಪರಸ್ಪರ ತಮಿಳು ಮತ್ತು ಉರ್ದುವಿನಲ್ಲಿ ಮಾತನಾಡುತ್ತಾರೆ.
ಈ ಬಗ್ಗೆ ಕಮಾಂಡೊ ಸೆಂಟರ್‌ನಲ್ಲಿದ್ದ ಸಿಬ್ಬಂದಿಯೊಬ್ಬರು ಉದಯವಾಣಿಗೆ ಜತೆ ಮಾತನಾಡಿ, “ಬೆಂಗಳೂರಿನಲ್ಲಿ ಇಂಗ್ಲಿಷ್, ಹಿಂದಿ, ತಮಿಳು ಇತರೆ ಭಾಷಿಕರೆ ಹೆಚ್ಚಾಗಿದ್ದಾರೆ. ಹೀಗಾಗಿ ಕನ್ನಡವನ್ನೊಳಗೊಂಡಂತೆ ಬಹುಭಾಷೆ ಬರುವವರನ್ನು ಆಯ್ಕೆ ಮಾಡಲಾಗಿದೆ,’ ಎಂದು ಅವರು ಹೇಳಿದರು.
ನಗರದಲ್ಲಿ 1.10 ಕೋಟಿ ಜನಸಂಖ್ಯೆ ಇದೆ. 30ರಿಂದ 40 ಲಕ್ಷ ಮಂದಿ ನಿತ್ಯ ಬಂದು ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ “ನಮ್ಮ 100′ ಕೇಂದ್ರ ಆರಂಭಿಸಲಾಗಿದೆ. ಸಿಬ್ಬಂದಿ 24/7 ಕರ್ತವ್ಯ ನಿರ್ವಹಿಸಲಿದ್ದಾರೆ. ಕೇಂದ್ರಕ್ಕೆ ಬರುವ ದೂರುಗಳನ್ನು ಹೊಯ್ಸಳ, ಪಿಂಕ್ ಹೊಯ್ಸಳ ಸೇವೆಗೆ ವರ್ಗಾಯಿಸಿ ತ್ವರಿತಗತಿಯಲ್ಲಿ ಸಹಾಯ ಮಾಡಲಾಗುವುದು-ಸಿದ್ದರಾಮಯ್ಯ, ಮುಖ್ಯಮಂತ್ರಿ