Advertisement
ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಯವರು ಈಗಾಗಲೇ 2017-18ರ ಹಂಗಾಮು ಪ್ರಾರಂಭಿಸುವ ಮುಂಚೆ ರೈತರಿಗೆ ತಾವು ಘೋಷಣೆ ಮಾಡಿದಂತೆ 2017-18ರ ಅವಧಿಯ ಹಂಗಾಮಿನ ಕೊನೆಯವರೆಗೂ ಪ್ರತಿ ರೈತರಿಗೆ ಪ್ರತಿ ಟನ್ ಕಬ್ಬಿಗೆ 2500 ರೂ. ನಿಗದಿತ ಕಾಲಮಿತಿಯೊಳಗೆ ಪಾವತಿಸಬೇಕು. ಜಿಲ್ಲೆಯ ಎಲ್ಲ ಕಾರ್ಖಾನೆ ಮಾಲಿಕರು, ಜಿಲ್ಲಾಧಿಕಾರಿಗಳ ಕಚೇರಿಯನ್ನು ತಕ್ಷಣ ಸಂಪರ್ಕಿಸಿ, ಘೋಷಿಸಿಕೊಂಡ ಮೊತ್ತವನ್ನು ಕಾಲಮಿತಿಯೊಳಗೆ ಪಾವತಿಸಲಾಗುವುದೆಂದು ಮುಚ್ಚಳಿಕೆ ಪತ್ರ ನೀಡಬೇಕು. ನಂತರವೇ ಈ ವರ್ಷದ (2018-19) ಹಂಗಾಮಿಗೆ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಬೇಕು. ನ.20ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ ಆದೇಶದಲ್ಲಿ ತಿಳಿಸಿದ್ದಾರೆ. Advertisement
ಮುಚ್ಚಳಿಕೆ ಪತ್ರ ಕೊಟ್ಟು ಕಾರ್ಖಾನೆ ಆರಂಭಿಸಿ
06:40 AM Nov 23, 2018 | |
Advertisement
Udayavani is now on Telegram. Click here to join our channel and stay updated with the latest news.