Advertisement
ಪ್ರಸ್ತುತ ಲಾಕ್‌ಡೌನ್‌ನ ಹಂತವು ಜೂನ್ 30ಕ್ಕೆ ಕೊನೆಗೊಳ್ಳುತ್ತದೆ. ಮುಂಬಯಿಯಲ್ಲಿ ಉಪನಗರ ರೈಲು ಸೇವೆಗಳು ಪುನರಾರಂಭಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ. ಈಗಲೂ ಸಹ ಅನೇಕರಿಗೆ ಸಾರಿಗೆ ಕೊರತೆಯಿಂದಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ರೈಲು ಸೇವೆಗಳನ್ನು ಕೇಂದ್ರದಿಂದ ಪುನರಾರಂಭಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಆಸ್ಪತ್ರೆಯ ಸಿಬಂದಿ ಮತ್ತು ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ತೊಡಗಿರುವ ಇತರ ಕಾರ್ಮಿಕರು ದೂರದ ಪ್ರದೇಶಗಳಿಂದ ಮುಂಬಯಿಗೆ ಪ್ರಯಾಣಿಸುವುದು ಕಷ್ಟಕರ ವಾಗಿದೆ. ಅವರಲ್ಲಿ ಕೆಲವರು ಕರ್ತವ್ಯಕ್ಕೆ ವರದಿ ಮಾಡಲು ಸಹ ಸಾಧ್ಯವಾಗುವುದಿಲ್ಲ. ಆದ್ದರಿಂದ ಲೋಕಲ್ ರೈಲುಗಳನ್ನು ಪ್ರಾರಂಭಿಸುವುದು ಬಹಳ ಮುಖ್ಯವಾಗಿದೆ ಎಂದು ಠಾಕ್ರೆ ಹೇಳಿದರು.
Related Articles
Advertisement
ಮುಂಬಯಿ, ಪುಣೆ ಮತ್ತು ನಾಗಪುರ ಮೆಟ್ರೋ ಯೋಜನೆಗಳು, ಮುಂಬಯಿ ಟ್ರಾನ್ಸ್ ಹಾರ್ಬರ್ ಲಿಂಕ್ ಮತ್ತು ಇತರ ದೊಡ್ಡ ಉದ್ಯಮಗಳ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಂಎಂಆರ್ ಹೊರತುಪಡಿಸಿ ರಾಜ್ಯದ ಹಲವಾರು ಸ್ಥಳಗಳಲ್ಲಿ ಕೋವಿಡ್ ವೈರಸ್ ಪ್ರೇರಿತ ಲಾಕ್‌ಡೌನ್ ಅನ್ನು ಸರಾಗಗೊಳಿಸಲಾಗಿದೆ ಮತ್ತು ಕೈಗಾರಿಕಾ ಚಟುವಟಿಕೆಗಳು ಪುನರಾರಂಭ ಗೊಂಡಿದೆ. ಆದರೆ ಕಾರ್ಮಿಕರ ಕೊರತೆಯಿದೆ ಎಂದು ಅವರು ಹೇಳಿದರು. ವಲಸೆ ಕಾರ್ಮಿಕರು ತಮ್ಮ ಸ್ಥಳೀಯ ಸ್ಥಳಗಳಿಗೆ ಹಿಂದಿರುಗಿದ್ದಾರೆ. ಅವರು ಹಿಂತಿರುಗುವವರೆಗೂ ಯೋಜನೆಗಳು ತೊಂದರೆ ಅನುಭವಿಸಬಾರದು ಎಂದು ಮುಖ್ಯಮಂತ್ರಿ ಹೇಳಿದರು, ಉದ್ಯೋಗಗಳಲ್ಲಿ ಸ್ಥಳೀಯ ಕಾರ್ಮಿಕರನ್ನು ನಿಯೋಜಿಸಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.