Advertisement

ಜ.8ರಂದು ರಾಜ್ಯಮಟ್ಟದ ಕಂಬಳ ಕ್ರೀಡೋತ್ಸವಕ್ಕೆ ಚಾಲನೆ: ಸುನಿಲ್‌  

11:10 PM Jan 05, 2023 | Team Udayavani |

ಕಾರ್ಕಳ: ಕಾರ್ಕಳದ ಮಿಯಾರಿನಲ್ಲಿ ಜ.8ರಂದು ನಡೆಯುವ 19ನೇ ವರ್ಷದ ಲವಕುಶ ಜೋಡುಕರೆ ಕಂಬಳದ ಸಂದರ್ಭ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಭಾವೇದಿಕೆಯ ಉದ್ಘಾಟನೆ, ಯುವಜನ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯಿಂದ ರಾಜ್ಯಮಟ್ಟದ ಕಂಬಳ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದೇವೆ ಎಂದು ಮಿಯಾರು ಕಂಬಳ ಸಮಿತಿ ಅಧ್ಯಕ್ಷ , ಸಚಿವ ವಿ.ಸುನಿಲ್‌ಕುಮಾರ ಹೇಳಿದ್ದಾರೆ.

Advertisement

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಭಾವೇದಿಕೆಯ ಉದ್ಘಾಟನೆಯನ್ನು ಅಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ, ಜೀವ ವೈವಿಧ್ಯ ಮತ್ತು ಪರಿಸರ ಇಲಾಖೆ ಸಚಿವ ಆನಂದ್‌ಗ್‌ ನೆರವೇರಿಸುವರು.

ಕೇಂದ್ರ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಸಚಿವ ಎಸ್‌.ಅಂಗಾರ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿ, ಡಾ| ಎಂ.ಎನ್‌ ರಾಜೇಂದ್ರಕುಮಾರ್‌ ಮೊದಲಾದ ಗಣ್ಯರು ಉಪಸ್ಥಿತರಿರುವರು. ಕಂಬಳ ಕ್ರೀಡೆಯನ್ನು ರಾಜ್ಯಮಟ್ಟದ ಗ್ರಾಮೀಣ ಕ್ರೀಡೆಯಾಗಿ ಸರಕಾರ ಮಾನ್ಯ ಮಾಡಿದೆ.

ತುಳುನಾಡಿನ ಜಾನಪದ ಕ್ರೀಡೆ ಕಂಬಳ ಪ್ರೇಮಿಗಳನ್ನು ಆಕರ್ಷಿಸಿದ್ದು, ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿರುವ ಕಾರ್ಕಳದ ಮಿಯಾರಿನಲ್ಲಿ ಕಂಬಳ ನಡೆಯುತ್ತಿದೆ. ಕಂಬಳದಲ್ಲಿ 250ಕ್ಕೂ ಅಧಿಕ ಸಂಖ್ಯೆಯ ಕೋಣಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಲಿವೆ.

24 ತಾಸಿನೊಳಗೆ ಕಂಬಳ ಕೂಟದ ಸ್ಪರ್ಧೆಗಳನ್ನು ಅನುಭವಿ ಕಂಬಳ ಸಮಿತಿ ಸಂಘಟಕರಿಂದ , ವಿವಿಧ ಸಮಿತಿ ಸದಸ್ಯರ ಮೂಲಕ ಶಿಸ್ತಬದ್ಧವಾಗಿ ಆಯೋಜಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next