Advertisement

ಫಿಲ್ಮ್ ಬ್ಯುರೋ ಆಫ್ ಕರ್ನಾಟಕ ಅಸೋಸಿಯೇಶನ್‌ ಕಚೇರಿ ಆರಂಭ

07:00 AM Aug 26, 2018 | |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮರಾಠಗಲ್ಲಿ ಡೆಕ್ಕನ್‌ ಸಿ ಮಾಲ್‌ ನಲ್ಲಿ ಫಿಲ್ಮ್
ಬ್ಯುರೋ ಆಫ್ ಕರ್ನಾಟಕ ಅಸೋಸಿಯೇಶನ್‌ನ ನೂತನ ಕಚೇರಿ ಆರಂಭಿಸಲಾಗಿದೆ.

Advertisement

ಈ ಭಾಗದ ಕಲಾವಿದರಿಗೆ ಚಲನಚಿತ್ರ, ಕಿರುಚಿತ್ರ, ಜಾಹೀರಾತುಗಳಲ್ಲಿ ನಟನೆ, ಹಾಡು ಮತ್ತು ನೃತ್ಯದ ಕುರಿತು ಸೂಕ್ತ ತರಬೇತಿ ನೀಡುವ ಮೂಲಕ ಅವಕಾಶ ಕಲ್ಪಿಸಿಕೊಡುವುದು ಇದರ ಮುಖ್ಯ ಉದ್ದೇಶ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದೀಪಕ ಬೋಂಗಾಳೆ ಮಾತನಾಡಿ,ಈಗಾಗಲೇ ಸಂಸ್ಥೆಯಿಂದ ಶೋಮ್ಯಾನ್‌ ಮಿಡಿಯಾ ಕ್ರಿಯೇಶನ್‌ ಆ್ಯಂಡ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ 60 ನಿಮಿಷದ ಒಂದು ಮಕ್ಕಳ ಚಲನಚಿತ್ರ ನಿರ್ಮಿಸ ಲಾಗಿದೆ. ಈ ಚಿತ್ರದಲ್ಲಿ ಹು-ಧಾ ಹಾಗೂ ರಾಣೆಬೆನ್ನೂರಿನ ಹೊಸ ಕಲಾವಿದರು, ತಂತ್ರಜ್ಞರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅತಿ ಶೀಘ್ರದಲ್ಲೇ ಅವರೆಲ್ಲ ರನ್ನು ಪರಿಚಯಿಸಿ ಕೊಡಲಾಗುವುದು ಎಂದರು.

ಸ್ಪರ್ಧಾ ಚುಕ್ಕಿ ಗ್ರುಪ್‌ನ ಸಂಪಾದಕ ಸುಧಾಕರ ಖಟಾವಕರ ಶನಿವಾರ ನೂತನ ಕಚೇರಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಅರುಣ ಚೌಧರಿ, ನಾಗರತ್ನಾ ಬೋಂಗಾಳೆ, ವನಜಾಕ್ಷಿ ಚೌಧರಿ, ಶೃತಿ ಬೋಂಗಾಳೆ, ಸುನಿತಾ ಚೌಧರಿ, ರೇಣುಕಯ್ಯ ಹಿರೇಮಠ, ಈರಣ್ಣ ಧಾರವಾಡ ಮೊದಲಾದವರು ಇದ್ದರು.

ಹುಬ್ಬಳ್ಳಿಯ ಮರಾಠಗಲ್ಲಿ ಡೆಕ್ಕನ್‌ ಸಿ ಮಾಲ್‌ನಲ್ಲಿ μಲ್ಮ್ ಬ್ಯುರೋ ಆಫ್ ಕರ್ನಾಟಕ ಅಸೋಸಿಯೇಶನ್‌ ನೂತನ ಕಚೇರಿಯನ್ನು ಸ್ಪರ್ಧಾ ಚುಕ್ಕಿ ಗ್ರುಪ್‌ನ ಸಂಪಾದಕ ಸುಧಾಕರ ಖಟಾವಕರ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next