Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಕಾರಣಕ್ಕೆ 2020ರ ಮಾರ್ಚ್ ಕೊನೇ ವಾರದಿಂದ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ನಿಲ್ಲಿಸಲಾಗಿತ್ತು. ಆದರೆ, ವಾಹನ ಸವಾರರು ಅದನ್ನು ದುರುಪಯೋಗ ಪಡಿಸಿಕೊಂಡು ಅಪಘಾತಕ್ಕಾಡುಗುತ್ತಿದ್ದರು. ಈಗಾಗಲೇ ಕೊರೊನಾ 2ನೇ ಅಲೆ ಬಳಿಕ ದೇಶದ ಬೇರೆ ಬೇರೆ ಮಹಾನಗರಗಳಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಆರಂಭವಾಗಿದೆ. ಹೀಗಾಗಿ ವೈದ್ಯರು, ತಜ್ಞರ ಸಲಹೆ ಪಡೆದು ಮೊದಲಿನಂತೆ ಅಲ್ಕೋಮೀಟರ್ ಮೂಲಕ ತಪಾಸಣೆ ನಡೆಯಲಿದೆ. ಈ ಮೂಲಕ ನಗರದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತ ತಡೆಯಲು ಈ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
Related Articles
Advertisement
ಎಎನ್‌ಪಿಆರ್ ಕ್ಯಾಮೆರಾ:
ನಗರದಲ್ಲಿ ಸಿದ್ದವಾಗುತ್ತಿರುವ 12 ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಅಧ್ಯಯನ ನಡೆಸಿ ಸಂಬಂಧಿಸಿ ಕಂಪನಿ, ಇಲಾಖೆ ವರದಿ ಕೊಡಲಾಗಿತ್ತು. ಇದೀಗ 2ನೇ ಬಾರಿ ಮತ್ತೂಮ್ಮೆ ಅಧ್ಯಯನ ನಡೆಸಿ ಒಂದೆರಡು ದಿನಗಳಲ್ಲಿ ವರದಿ ಕೊಡಲಾಗುತ್ತದೆ. ನಂತರ ಈ ವೇಳೆ ಎಎನ್‌ಪಿಆರ್
ಕ್ಯಾಮೆರಾ(ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್‌ನೇಷನ್) ಅಳವಡಿಕೆಗೆ ಕೊರಲಾಗುತ್ತದೆ. ಪ್ರತಿ ಎಲಿವೇಟೆಡ್ ಕಾರಿಡಾರ್ ಬಳಸುವ ಆರಂಭದಲ್ಲಿ ವಾಹನ ಸವಾರ ಎಷ್ಟು ವೇಗವಾಗಿ ವಾಹನ ಚಾಲನೆ ಮಾಡಿದ್ದಾನೆ. ಎಷ್ಟು ಸಮಯದಲ್ಲಿ ಎಲಿವೇಟೆಡ್ ಕಾರಿಡಾರ್‌ನಿಂದ ಹೊರಹೋಗಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಈ ಕ್ಯಾಮೆರಾದಲ್ಲಿ ಲಭ್ಯವಾಗಲಿದೆ ಎಂದರು.
ಟೋಯಿಂಗ್ ವೇಳೆ ಫೋಟೊ ಕಡ್ಡಾಯ:
ಟೋಯಿಂಗ್ ಮಾಡುವಾಗ ಸಂಚಾರ ಪೊಲೀಸರು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳಬೇಕು. ಒಬ್ಬ ಎಎಸ್‌ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು. ಟೋಯಿಂಗ್ ಸಿಬ್ಬಂದಿ ಕೂಡ ಸಮವಸ್ತ್ರ ಧರಿಸಬೇಕು. ಟೋಯಿಂಗ್‌ಗೆ ಮೊದಲು ಧ್ವನಿವರ್ಧಕದ ಮೂಲಕ ಸೂಚಿಸಬೇಕು. ನಂತರವೂ ವಾಹನ ಮಾಲೀಕರ ಬರದಿದ್ದಾಗ, ವಾಹನದ ನಾಲ್ಕು ಕಡೆಯಿಂದ ಪೋಟೋ ತೆಗೆದುಕೊಂಡು ಟೋಯಿಂಗ್ ಮಾಡಬೇಕು.
ಟೋಯಿಂಗ್ ಮಾಡುವಾಗ ಮಾಲೀಕ ಬಂದರೆ, ನೋಪಾರ್ಕಿಂಗ್ ದಂಡ ಮಾತ್ರ ಕಟ್ಟಿಸಿಕೊಳ್ಳಬೇಕು. ಟೋಯಿಂಗ್ ಮಾಡಿದರೆ ಮಾತ್ರ ಟೋಯಿಂಗ್, ನೋಪಾರ್ಕಿಂಗ್ ದಂಡ ಎರಡನ್ನು ಕಟ್ಟಿಸಿಕೊಳ್ಳಬೇಕು. ಟೋಯಿಂಗ್ ಯಾರ್ಡ್‌ನಲ್ಲಿ ಒಬ್ಬ ಸಿಬ್ಬಂದಿ ಇರಲಿದ್ದಾರೆ. ಇದೇ ವೇಳೆ ಟೋಯಿಂಗ್ ನಿಯಮ ಪಾಲಿಸದ ಐದು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಜತೆಗೆ ಟೋಯಿಂಗ್ ಸಂದರ್ಭದಲ್ಲಿ ಲೈವ್ ಸ್ಟ್ರೀಮಿಂಗ್ ಮಾಡದ ಟೋಯಿಂಗ್‌ನ 45 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ ಹೇಳಿದರು.
ಗುಂಡಿ ಮುಚ್ಚಲು ಬಿಬಿಎಂಪಿಗೆ ಸೂಚನೆ: ಪ್ರತಿ ಸಂಚಾರ ಠಾಣಾ ವ್ಯಾಪ್ತಿಯರಸ್ತೆಗಳಲ್ಲಿರುವ ಗುಂಡಿಗಳ ಫೋಟೋ ಸಮೇತ ಬಿಬಿಎಂಪಿಗೆ ಮಾಹಿತಿ ನೀಡಲಾಗು ತ್ತಿದೆ.ಅದೇ ರೀತಿ ಬಿಬಿಎಂಪಿ ಅಧಿಕಾರಿಗಳು ಕೂಡ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ರವಿಕಾಂತೇಗೌಡ ಹೇಳಿದರು.