Advertisement

ಇನ್ನೆರಡು ದಿನ ರಾಜ್ಯ ಸ್ತಬ್ಧ; ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ಆರಂಭ

02:42 AM Jan 08, 2022 | Team Udayavani |

ಬೆಂಗಳೂರು: ಕೊರೊನಾ ಹಾಗೂ ಒಮಿಕ್ರಾನ್‌ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶುಕ್ರವಾರ ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸೋಮವಾರ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿದ್ದು ಅಗತ್ಯ ಸೇವೆ ಹೊರತುಪಡಿಸಿ, ಉಳಿದೆಲ್ಲವೂ ಬಂದ್‌ ಆಗಲಿವೆ. ತುರ್ತು ಅಗತ್ಯ ಇದ್ದರೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Advertisement

ಹಾಲು, ಔಷಧ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲ. ತುರ್ತು ಸೇವೆ ಹಾಗೂ ಸರಕಾರಿ ಸೇವೆಗಳಿಗೆ ಹೋಗುವವರು ಗುರುತಿನ ಚೀಟಿ ತೋರಿಸಿ ಸಂಚರಿಸಬಹುದಾಗಿದೆ. ಬಸ್‌ ಹಾಗೂ ರೈಲು ಸಂಚಾರ ವ್ಯವಸ್ಥೆ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಇರಲಿದ್ದು ಉಳಿದಂತೆ ಮೆಟ್ರೋ ಸೇವೆ ಸಹ ಬೆಂಗಳೂರಿನಲ್ಲಿ ಇರಲಿದೆ. ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ
ಅವಕಾಶ. ಜತೆಗೆ ರೆಸಾರ್ಟ್‌, ವಸತಿ ಗೃಹಗಳನ್ನೂ ಬಂದ್‌ ಮಾಡಲು ಸೂಚನೆ ಹೊರಡಿಸಲಾಗಿದೆ.

ಮದ್ಯ ಮಾರಾಟ ನಿಷೇಧ
ಈ ಮಧ್ಯೆ ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಘೋಷಿಸಿರುವ ವಾರಾಂತ್ಯದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಎಂಟು ಗಂಟೆಯಿಂದ ಸೋಮವಾರ ಬೆಳಗಿನವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿ¨ªಾರೆ. ರಾಜ್ಯದ ಜನರ ಹಿತದೃಷ್ಟಿಯಿಂದ ಸರಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಎಲ್ಲ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮಾಲಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ರೆಸಾರ್ಟ್‌ ಅತಿಥಿಗಳಿಗೆ ನಿರ್ಬಂಧವಿಲ್ಲ
ಈ ನಡುವೆ ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಹೊಟೇಲ್‌/ರೆಸಾರ್ಟ್‌ಗಳಲ್ಲಿ ತಂಗುವುದಕ್ಕೆ ಪ್ರವಾಸಿ ಗರ ಚಲನವಲನ ಮತ್ತು ಅರಣ್ಯ ಪ್ರದೇಶಗಳಲ್ಲಿ ಸಫಾರಿಗೆ ವಿಧಿಸಿರುವ ನಿಬಂìಧಗಳಿಗೆ ಸಂಬಂಧಿ ಸಿದಂತೆ ಪ್ರವಾಸೋದ್ಯಮ ಇಲಾಖೆ ಸ್ಪಷ್ಟನೆ ನೀಡಿದೆ. ಅದರಂತೆ ವಾರಾಂತ್ಯಕ್ಕೆ ಬುಕ್ಕಿಂಗ್‌ ಮಾಡಿ, ಅಧಿಕೃತ ದಾಖಲೆ ಹೊಂದಿರುವ ಪ್ರವಾಸಿಗರು ತಮ್ಮ ಕಾರುಗಳು/ಟ್ಯಾಕ್ಸಿ ಮತ್ತು ಇತರ ಸಾರಿಗೆ ವಿಧಾನಗಳ ಮೂಲಕ ಪ್ರಯಾಣಿಸಲು ಅನುಮತಿಸಲಾಗಿದೆ.

ಇದನ್ನೂ ಓದಿ:ಸರ್ಕಾರಿ ಶಾಲೆಯ 21ವಿದ್ಯಾರ್ಥಿಗಳು, ಓರ್ವ ಶಿಕ್ಷಕರಲ್ಲಿ ಕೋವಿಡ್ ದೃಢ : ಶಾಲೆಗೆ 7 ದಿನ ರಜೆ

ಅದೇ ರೀತಿ ಹೊಟೇಲ್‌/ರೆಸಾರ್ಟ್‌ಗಳಲ್ಲಿ ತಂಗಿರು ವಂತಹ ಅತಿಥಿಗಳಿಗೆ ಯಾವುದೇ ನಿರ್ಬಂಧ ವಿರುವುದಿಲ್ಲ. ಅವರಿಗೆ ಎಲ್ಲ ಸೌಲಭ್ಯ ಗಳನ್ನು ಒದಗಿಸಲು ಅನುಮತಿ ಇದೆ. ಬುಕ್ಕಿಂಗ್‌ ಮಾಡಿರುವ ದಾಖಲೆಯೊಂದಿಗೆ ಅತಿಥಿಗಳು ಹೊಟೇಲ್‌ಗ‌ಳಲ್ಲಿ ಚೆಕ್‌-ಇನ್‌ ಹಾಗೂ ಚೆಕ್‌- ಔಟ್‌ ಮಾಡಬಹುದು. ಜತೆಗೆ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ, ಅರಣ್ಯ ಪ್ರದೇಶಗಳನ್ನು ಮತ್ತು ಅಭಯಾರಣ್ಯಗಳಲ್ಲಿ ಸಫಾರಿಗೆ ಅನುಮತಿಯನ್ನು ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Advertisement

ಶಾಲೆ ಬಂದ್‌
ರಾಜ್ಯಾದ್ಯಂತ ಜ. 6ರಿಂದ 19ರ ವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ (ಜ. 8, 15) ಎಲ್ಲ ರೀತಿಯ ಶಾಲೆ ಗಳನ್ನು ನಡೆಸದಿರಲು ಸೂಕ್ತ ಕ್ರಮ ಕೈಗೊಳ್ಳು ವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next