Advertisement

ಅಂಗನವಾಡಿಯಲ್ಲೇ ನರ್ಸರಿ ಆರಂಭಿಸಿ

02:40 PM Jun 19, 2019 | Suhan S |

ರಾಮದುರ್ಗ: ಅಂಗನವಾಡಿಯಲ್ಲೇ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಸಂಯೋಜಿತ ತಾಲೂಕು ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಂಗನವಾಡಿ ನೌಕರರು ತಹಶೀಲ್ದಾರ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಬಿಇಒ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಕಳೆದ 30-35 ವರ್ಷಗಳಿಂದ 3 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವದರ ಮೂಲಕ ಅಂಗನವಾಡಿ ನೌಕರರು ಜನಪ್ರೀಯ ಐಸಿಡಿಎಸ್‌ ಯೋಜನೆಯಡಿ ಕಡಿಮೆ ವೇತನದಲ್ಲಿ ತಮ್ಮ ಜೀವನವನ್ನೆ ಕಳೆದಿದ್ದಾರೆ. ಇಂತಹ ಸಮಯದಲ್ಲಿ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾರ್ಥಮಿಕ ಶಾಲೆಗಳನ್ನು ತೆರೆದು 3.5 ವರ್ಷ ಮೇಲ್ಪಟ್ಟು ಮಕ್ಕಳಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3:30ರ ತನಕ ಶಾಲೆ ನಡೆಸಬೇಕು. ಆದರೆ ಈ ಆದೇಶವನ್ನು ತರುವ ಪೂರ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಟ್ಟಿಗೆ ಮತ್ತು ಮಕ್ಕಳ, ಶಿಕ್ಷಣ ತಜ್ಞರೊಂದಿಗೆ, ಸಂಘಟನೆಗಳೊಂದಿಗೆ ಸಂವಾದ ನಡೆಸದೆ ಏಕಮುಖವಾಗಿ ಸುತ್ತೋಲೆ ತರಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ, ಕಾರ್ಯದರ್ಶಿ ಶಕುಂತಲಾ ನಾರಾಯಣಕರ, ಖಜಾಂಚಿ ತಾಹೀರಾ ಮಕನದಾರ, ಬೋರಮ್ಮ ತೆಕ್ಕಿ, ರುಕ್ಮಾಯಿ ಬಿಂಗೆ, ವಿಜಯಲಕ್ಷ್ತ್ರೀ ಸಿದ್ದಿಬಾಂವಿ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next