Advertisement

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಲಾಬಿ ಶುರು

12:18 PM Jan 06, 2021 | Team Udayavani |

ದೇವನಹಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಫ‌ಲಿತಾಂಶ ಹೊರಬಿದ್ದಿದ್ದು ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಪಡೆಯಲು ಸದಸ್ಯರು ಆಯಾ ಮೀಸಲಾತಿ ಅನುಗುಣವಾಗಿ ಅಧಿಕಾರದ ಗದ್ದುಗೆ ಹಿಡಿಯಲು ಕಸರತ್ತು ನಡೆಸಿದ್ದಾರೆ.

Advertisement

ಜಿಲ್ಲೆಯ 91 ಗ್ರಾಪಂಗಳ ಪೈಕಿ 1605 ಅಭ್ಯರ್ಥಿಗಳು ಜಯಶೀಲರಾಗಿದ್ದು, ಅಷ್ಟು ಅಭ್ಯರ್ಥಿಗಳ ಪೈಕಿ ಯಾರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪಟ್ಟ ಸಿಗಲಿದೆ ಎಂಬ ಕುತೂಹಲ ತೆರೆಮರೆಯಲ್ಲಿ ಲಾಬಿ ನಡೆಯುತ್ತಿದೆ. ಗ್ರಾಪಂ ಚುನಾವಣೆ ಫ‌ಲಿತಾಂಶ ಬಂದ ಕೂಡಲೇ ಮೀಸಲಾತಿ ಕಡೆ ಲೆಕ್ಕಾಚಾರ ಪ್ರಾರಂಭವಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬದಲಾವಣೆ ಲಾಬಿಯೂ ಪ್ರಾರಂಭವಾಗಿದೆ.

ಒತ್ತಡ ಹಾಕಲು ಕಸರತ್ತು: ಈ ಹಿಂದೆ ಸ್ಥಾನಯಾವುದಕ್ಕೆ ಮೀಸಲಾಗಿತ್ತು, ಈ ಬಾರಿ ಯಾವುದಕ್ಕೆ ಬರಲಿದೆ. ಮೀಸಲಾತಿ ಅಭ್ಯರ್ಥಿ ಜಯಗಳಿಸಿ ದ್ದಾನೆಯೇ ನಮಗೆ ಸಿಗಬೇಕಾದರೆ ಏನೆಲ್ಲಾ ಮಾಡಬೇಕು, ಯಾವ ಜನಪ್ರತಿನಿಧಿಯಿಂದ ಪ್ರಭಾವತರಬೇಕು, ಅಧಿಕಾರಿಗಳ ಮೇಲೆ ಹೇಗೆಲ್ಲಾ ಒತ್ತಡ ಹಾಕಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ.

ರಾಜ್ಯಮಟ್ಟದ ಮುಖಂಡರವರೆಗೂ ಲಾಬಿ:ಜಿಲ್ಲೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಬೆಂಬಲಿತರುಜಯಗಳಿಸಿದ್ದು, ಆಯಾ ಪಕ್ಷದ ಮುಖಂಡರು ಪಂಚಾ ಯಿತಿಗಳಲ್ಲಿ ತಮ್ಮದೇ ಪಕ್ಷದ ಬೆಂಬಲಿಗರಿಗೆಅಧ್ಯಕ್ಷ ಮತ್ತು ಉಪಾಧ್ಯಕ್ಷಗಿರಿ ಲಭಿಸಬೇಕೆಂಬ ಕಸರತ್ತು ಮಾಡುತ್ತಿದ್ದಾರೆ. ಒಂದು ಪಕ್ಷದಿಂದ ಮತ್ತೂಂದು ಪಕ್ಷಕ್ಕೆ ಸೆಳೆಯಲು ಮುಖಂಡರಿಂದ ರಾಜ್ಯ ಮಟ್ಟದ ಮುಖಂಡರವರೆಗೆ ಲಾಬಿ ನಡೆಯುತ್ತಿದೆ.

ಪಕ್ಷೇತರ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ:

Advertisement

ಗ್ರಾಪಂಗಳಲ್ಲಿ ಫ‌ಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಯಾವ ಮೀಸಲಾತಿ ಗ್ರಾಪಂಗೆ ದೊರೆಯಲಿದೆ. ಸದಸ್ಯ ಬಲ ಕ್ರೋಢೀಕರಿಸಲು ಪಕ್ಷಗಳನಾಯಕರು ತಂತ್ರಗಳ ಮೊರೆ ಹೋಗಿದ್ದಾರೆ. ಮುಂದಿನ ತಾಪಂ, ಜಿಪಂ, ವಿಧಾನಸಭ ಚುನಾವಣೆಗಳಿಗೆದಿಕ್ಸೂಚಿಯಂತೆ ಬಿಂಬಿತವಾಗಿತ್ತು. ಈಗಾಗಲೇ ಚುನಾವಣೆ ಆಯೋಗ ಜಿಲ್ಲಾಧಿಕಾರಿಗಳು ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಮಾಡಲುಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಯಾವ ಗ್ರಾಪಂನಲ್ಲಿ ಯಾವ ಮೀಸಲಾತಿ ಬಂದಿಲ್ಲ. ಅಂತಹ ಮೀಸಲಾತಿ ತರಲು ಮುಖಂಡರು ಕಸರತ್ತು ನಡೆಸಿದ್ದಾರೆ.

ವಿವಿಧ ಪಕ್ಷದ ಸದಸ್ಯರು ಸದಸ್ಯ ಬಲ ಹೆಚ್ಚಿಸಿಕೊಳ್ಳಲು ಪಕ್ಷೇತರ ಅವಶ್ಯವಿರುವ ಕಡೆ ದೊಡ್ಡಮಟ್ಟದ ಲಾಬಿ ನಡೆಯುತ್ತಿದೆ. ಜೊತೆಗೆ ಪಕ್ಷೇತರ ಅಭ್ಯರ್ಥಿಗಳಿಗೆ ಪ್ರಮುಖ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶವಾಗಿದೆ. ಇಂತಹ ಅಭ್ಯರ್ಥಿಗಳು ಈ ವಿಷಯದಲ್ಲಿ ಎಚ್ಚರಿಕೆಯಿಂದಿದ್ದಾರೆ.

50-80 ಲಕ್ಷ ರೂ. ಆಮಿಷ: ದೇವನಹಳ್ಳಿ ತಾಲೂಕಿನಲ್ಲಿ ಮೊದಲ ಹೆಜ್ಜೆಯಾಗಿ ಅತಿ ಹೆಚ್ಚಿನಸಂಪನ್ಮೂಲ ಕ್ರೋಢೀಕರಿಸಿಕೊಳ್ಳುವ ಅಣ್ಣೇಶ್ವರ ಗ್ರಾಪಂಗೆ 10 ಮಂದಿ ಜೆಡಿಎಸ್‌ ಬೆಂಬಲಿತರು, 9ಮಂದಿ ಕಾಂಗ್ರೆಸ್‌ ಬೆಂಬಲಿತರು ಆಯ್ಕೆಗೊಂಡಿದ್ದು,ಕನಿಷ್ಠ ಒಬ್ಬ ಸದಸ್ಯ ಕಾಂಗ್ರೆಸ್‌ ಪರವಾಗಿ ಬೆಂಬಲಿಸಿದರೆಕನಿಷ್ಠ 50-80 ಲಕ್ಷ ರೂ. ಆಮಿಷ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ 10 ಮಂದಿ ಜೆಡಿಎಸ್‌ ಸದಸ್ಯರು ಗೋವಾ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ವರ್ಗವಾರು ಪ್ರಕಟವಾಗಿರುವುದರಿಂದ ತಾಲೂಕಿನಲ್ಲಿ ಬಿಜೆಪಿ ಖಾತೆ ತೆರೆದರೂ ಪಂಚಾಯಿತಿಯಲ್ಲಿ ಅಧಿಕಾರದ ಗದ್ದುಗೆ ಏರುವಷ್ಟು ಬೆಂಬಲಿತ ಸದಸ್ಯರು ಆಯ್ಕೆಗೊಂಡಿಲ್ಲ.

 

ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next