Advertisement

ವಿವಿಧ ಕಾಮಗಾರಿಗೆ ಚಾಲನೆ

11:26 AM Jan 03, 2020 | Suhan S |

ಹೊನ್ನಾಳಿ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಹೊನ್ನಾಳಿ ನ್ಯಾಮತಿ ತಾಲೂಕುಗಳ ಅಭಿವೃದ್ಧಿಗೆ ಕ್ಷೇತ್ರದ ಶಾಸಕರ ಜತೆಗೂಡಿ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಸಂಸದ ಜಿ.ಎಂ ಸಿದ್ದೇಶ್ವರ ಭರವಸೆ ನೀಡಿದರು.

Advertisement

ನ್ಯಾಮತಿ ತಾಲೂಕು ಸುರಹೊನ್ನೆ, ಕುದುರೆಕೊಂಡ, ಯರಗನಾಳು, ಮಲ್ಲಿಗೇನಹಳ್ಳಿ, ಬೆಳಗುತ್ತಿ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿ ಮಂಜೂರು ಮಾಡಿಸಿದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಬೆಳಗುತ್ತಿ ಗ್ರಾಮದಲ್ಲಿ ಮಾತನಾಡಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಸುರಹೊನ್ನೆಯಿಂದ ಯರಗನಾಳು, ಬೆಳಗುತ್ತಿ, ತೀರ್ಥರಾಮೇಶ್ವರ ಮುಖ್ಯ ರಸ್ತೆಯನ್ನು ರೂ.7.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಆಧುನಿಕ ರಸ್ತೆಯನ್ನಾಗಿ ಮಾರ್ಪಡಿಸಲು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.

ಬೆಳಗುತ್ತಿಯಿಂದ ಹರಳಹಳ್ಳಿ ರಸ್ತೆಯನ್ನು ರೂ.90 ಲಕ್ಷ ವೆಚ್ಚದಲ್ಲಿ ಮರು ಡಾಂಬರೀಕರಣ ಗೊಳಿಸಲಾಗುತ್ತಿದ್ದು, ಕಂಚಿನಹಳ್ಳಿಯಿಂದ ಗಂಜೀನಹಳ್ಳಿ ಮುಖ್ಯ ರಸ್ತೆಯನ್ನು 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಸುರಹೊನ್ನೆ ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರೂ.1.16ಕೋಟಿ, ಯರಗನಳ್‌ ಗ್ರಾಮಕ್ಕೆ ರೂ.76 ಲಕ್ಷ, ಕುದುರೆಕೊಂಡ ರೂ.53ಲಕ್ಷ, ರಾಮೇಶ್ವರ ರೂ.55ಲಕ್ಷ, ಬೆಳಗುತ್ತಿ ರೂ.98ಲಕ್ಷ, ಮಲ್ಲಿಗೇನಹಳ್ಳಿ ರೂ.79ಲಕ್ಷ ಮಂಜೂರು ಮಾಡಲಾಗಿದೆ ಎಂದರು. ಬೆಳಗುತ್ತಿ ಗ್ರಾ.ಪಂ ಅಧ್ಯಕ್ಷೆ ರೇಖಾ, ಜಿ.ಪಂ ಸದಸ್ಯರಾದ ಎಂ.ಆರ್‌. ಮಹೇಶ್‌, ನ್ಯಾಮತಿ ಜಿ.ಪಂ ಸದಸ್ಯೆ ಉಮಾ ರಮೇಶ್‌, ತಾ.ಪಂ ಪ್ರಭಾರಿ ಅಧ್ಯಕ್ಷ ಎಸ್‌.ಪಿ. ರವಿಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next