Advertisement

ರೆಡ್‌ಕ್ರಾಸ್‌ ಭವನದಲ್ಲಿ ಕಣ್ಣಿನ ಆಸ್ಪತ್ರೆ ಆರಂಭಿಸಿ

06:50 PM Nov 13, 2020 | Suhan S |

ಚಾಮರಾಜನಗರ: ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ರೆಡ್‌ಕ್ರಾಸ್‌ ಸಂಸ್ಥೆಯ ಶತಮಾನೋತ್ಸವ ಭವನದಲ್ಲಿ ಕಣ್ಣಿನ ಆಸ್ಪತ್ರೆಯನ್ನು ತೆರೆಯುವ ಮೂಲಕ ಜಿಲ್ಲೆಯ ಜನರಿಗೆ ನೆರವಾಗಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌ ರವಿ ಸಲಹೆ ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯ ಕಾರಿಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ತನ್ನ ಕಾರ್ಯಚಟುವಟಿಕೆಗಳಿಗೆ ಅನುವಾಗುವಂತೆ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಅನುದಾನ ನಿಗದಿಯಾಗಿದೆ. ಈ ಶತಮಾನೋತ್ಸವ ಭವನವು ರೆಡ್‌ಕ್ರಾಸ್‌ನ ನಿಗದಿತ ಕಾರ್ಯ ಚಟುವಟಿಕೆಗಳ ಜೊತೆ ಕಣ್ಣಿನ ಆಸ್ಪತ್ರೆಗೂ ಅವಕಾಶ ಮಾಡಿಕೊಡು ವುದರಿಂದ ಜಿಲ್ಲಾ ಜನರಿಗೆ ಆರೋಗ್ಯ ಸಂಬಂಧಿ ಸಹಾಯ ಮಾಡಿದಂತಾಗುತ್ತದೆ ಎಂದರು. ಜಿಲ್ಲೆಯಲ್ಲಿ ಪ್ರತ್ಯೇಕ ಕಣ್ಣಿನ ಆಸ್ಪತ್ರೆ ಇಲ್ಲ. ಕಣ್ಣಿನ ಚಿಕಿತ್ಸೆಗೆ ಜಿಲ್ಲೆಯ ಜನರು ಬೇರೆ ಜಿಲ್ಲೆಗಳನ್ನು ಅವಲಂಭಿಸಿದ್ದಾರೆ. ಹೀಗಾಗಿ ನಿರ್ಮಾಣಗೊಳ್ಳಲಿರುವ ರೆಡ್‌ಕ್ರಾಸ್‌ ಸಂಸ್ಥೆಯ ಶತಮಾನೋತ್ಸವ ಭವನದ ಒಂದು ಭಾಗದಲ್ಲಿ ಕಣ್ಣಿನ ಆಸ್ಪತ್ರೆ ತೆರೆಯ  ಬೇಕಿದೆ. ಇದು ಮಹತ್ಕಾರ್ಯವು ಆಗಿರುವುದರಿಂದಭವನ ಕಟ್ಟಡದ ನಕ್ಷೆ ಹಾಗೂ ಅಂದಾಜು ಪಟ್ಟಿ ಪ್ರಸ್ತಾವನೆಯಲ್ಲಿ ಮಾರ್ಪಾಡುಗಳೊಂದಿಗೆ ಮುಂದಿನ ಅಗತ್ಯ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶತಮಾನೋತ್ಸವ ಭವನದಲ್ಲಿ ಆರೋಗ್ಯ ಸಂಬಂಧಿ ಸಹಾಯ ಚಟುವಟಿಕೆಗಳಿಗೂ ಹೆಚ್ಚು ಅವಕಾಶಇರಬೇಕು. ಸಮಾಜಮುಖೀ ಸೇವಾ ಕಾರ್ಯಗಳುನಿರಂತರವಾಗಿ ಮುಂದುವರಿಯ ಬೇಕು. ಪ್ರಥಮಚಿಕಿತ್ಸೆ ಸೇರಿದಂತೆ ಹಲವಾರು ತರಬೇತಿಕಾರ್ಯಕ್ರಮಗಳು ಆಯೋಜನೆ ಮಾಡ ಬೇಕು ಎಂದರು. ರಕ್ತ ಸಂಗ್ರಹಣಾದಂತಹ ಅಮೂಲ್ಯ ಕಾರ್ಯಕ್ಕಾಗಿ ಶಿಬಿರಗಳನ್ನು ಆಯೋಜನೆ ಮಾಡಬೇಕು. ವಿವಿಧ ಇಲಾಖೆಗಳ ಸಹಕಾರ ಪಡೆದು ಅಶಕ್ತರಿಗೆ ಅಗತ್ಯವಾದ ನೆರವು ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಡಾ.ಮಹೇಶ್‌, ಆರ್‌ಸಿಎಚ್‌. ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಸರ್ಜನ್‌ ಡಾ. ಮುರಳಿ ಕೃಷ್ಣ, ರೆಡ್‌ ಕ್ರಾಸ್‌ ಸಂಸ್ಥೆಯಪದಾಧಿಕಾರಿಗಳಾದ ಡಾ. ಗಿರೀಶ್‌ ಪಟೇಲ್‌, ಡಾ. ಗಾಯತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಬಸವರಾಜು ಇತರರು ಸಭೆಯಲ್ಲಿ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next