Advertisement

ಶೈಕ್ಷಣಿಕ ವಲಯದಲ್ಲಿ ಹೊಸ ಪರಿವರ್ತನೆಗೆ ನಾಂದಿ

11:37 PM Oct 04, 2021 | Team Udayavani |

ಪ್ರಸಕ್ತ ಸಾಲಿ ನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಸರಕಾರ‌ ನಿರ್ಧರಿಸಿದೆ. ಈ ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಮಾಡಿ ಕೊಂಡಿ ರುವ ಸಿದ್ಧತೆ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿರುವ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು, ಪಠ್ಯಕ್ರ ಮದಲ್ಲಿನ ಹೊಸ ವಿಷಯಗಳು ಕುರಿತು “ಉದಯವಾಣಿ’ಯು ಕುಲಪತಿಗಳಲ್ಲಿ ಮುಂದಿಟ್ಟಿರುವ ಪಂಚಪ್ರಶ್ನೆಯ ಉತ್ತರ ಇಲ್ಲಿದೆ..

Advertisement

ಉದ್ಯೋಗಾರ್ಹತೆಗೆ ಆದ್ಯತೆ
01.ಎನ್‌ಇಪಿ ಪರಿಣಾಮಕಾರಿ ಜಾರಿಗೆ ಟಾಸ್ಕ್ಪೋರ್ಸ್‌ ರಚಿಸಲಾಗಿದೆ. ಇದಕ್ಕೆ ವಿವಿಧ ತಜ್ಞರನ್ನೂ ನೇಮಿಸಲಾಗಿದೆ. ಜತೆಗೆ ಹಲವು ತಿಂಗಳ ಮೊದಲೇ ವಿವಿ ವ್ಯಾಪ್ತಿಯಲ್ಲಿ 9 ಉಪಸಮಿತಿ ಮಾಡಿಕೊಂಡು ಹೊಸಶಿಕ್ಷಣ ನೀತಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ. 15 ದಿನದೊಳಗೆ ಮಾದರಿ ವಿನಿಯಮವನ್ನು ಸಿದ್ಧಪಡಿಸಿ ಸರಕಾರ‌ದ ಅನುಮೋದನೆ ಪಡೆಯಲಾಗುವುದು.

02.ಪ್ರಾಂಶುಪಾಲರ, ಉಪನ್ಯಾಸಕರ ಜತೆಗೆ ವಿಶೇಷ ತರಬೇತಿ ಶಿಬಿರ ಆಯೋಜಿಸ ಲಾಗಿದೆ. ಹೆಲ್ಪ್ಡೆಸ್ಕ್ ಮೂಲಕ ಆಯಾ ಕಾಲೇಜಿನಲ್ಲಿಯೇ ಪೂರ್ಣ ಮಾಹಿತಿ ನೀಡಲು ಸೂಚಿಸ ಲಾಗಿದೆ. ವಾರದೊಳಗೆ ಕ್ಲಸ್ಟರ್‌ ಸ್ವರೂಪದಲ್ಲಿ ನಿಯಮಿತವಾಗಿ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಆನ್‌ಲೈನ್‌ ಮೂಲಕವೂ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತಿದ್ದು, ಇದನ್ನು ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗುವುದು.

03.ಬಹಳಷ್ಟು ಬದಲಾವಣೆ ಎದುರಾಗಲಿದೆ. ಶಿಕ್ಷಣ ಪಡೆಯುವ ಸ್ವರೂಪದಲ್ಲಿ ಅಮೂಲಾಗ್ರ ಬದಲಾ ವಣೆ ಆಗಿ ಉದ್ಯೋಗಾರ್ಹತೆ, ರಾಷ್ಟ್ರಪ್ರೇಮ ಹಾಗೂ ಮೌಲ್ಯಾ ಧಾರಿತ ಶಿಕ್ಷಣಕ್ಕೆ ಆದ್ಯತೆ ದೊರೆಯಲಿದೆ. ದುಡಿದು ಬದುಕಲು ಶಕ್ತನಾಗುವ ರೀತಿಯ ಶಿಕ್ಷಣ ಮುಂದಿನ ದಿನದಲ್ಲಿ ದೊರೆಯ  ಲಿದೆ. ದ್ವಿಭಾಷಾ ಸೂತ್ರಕ್ಕೆ ಸದ್ಯ ಅನು ಮತಿ ನೀಡಿದ್ದರೂ ತುಳು, ಕೊಂಕಣಿ ಸೇರಿ ಇತರ ಭಾಷೆಗಳೂ ಇರುವುದರಿಂದ ತ್ರಿಭಾಷಾ ಸೂತ್ರದ ಬಗ್ಗೆಯೂ ಸದ್ಯ ಚರ್ಚೆ ನಡೆಯುತ್ತಿದೆ.

04.ಹೊಸ ಶಿಕ್ಷಣ ನೀತಿಯ ಮೂಲಕ ಶೈಕ್ಷಣಿಕ ವಲಯದಲ್ಲಿ ಹೊಸ ಪರಿವರ್ತನೆ ಸೃಷ್ಟಿ  ಯಾಗಲಿದೆ. ವಿದ್ಯಾರ್ಥಿ ಸ್ನೇಹಿ ಶೈಕ್ಷಣಿಕ ಕ್ರಮ ಜಾರಿಯಾಗಲಿದೆ. ಯಾರೂ ಊಹಿಸ  ದಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿ ಕಳಕಳಿಯ ನೀತಿ ಜಾರಿಗೊಳ್ಳಲಿದೆ. ಉಪನ್ಯಾಸಕರ ಕೊರತೆ ಇದ್ದರೂ ಸರಕಾರ‌ ಈಗಾಗಲೇ ತಿಳಿಸಿದಂತೆ ಮುಂದಿನ 2 ತಿಂಗಳೊಳಗೆ ಹುದ್ದೆ ಭರ್ತಿ ಮಾಡಲಿದೆ.

Advertisement

05.ಇಂತಹ ಪ್ರಮೇಯವೇ ಇರುವುದಿಲ್ಲ. ಎಕ್ಸಿಟ್‌ ಆಗಲೇ  ಬೇಕೆಂಬ ನಿಯಮ ಇಲ್ಲ. ಬದಲಾಗಿ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವಿದ್ಯಾರ್ಥಿ ಬಿಟ್ಟು ಹೋಗಲು ಅವಕಾಶವಿದೆ. ಈ ಹಿಂದೆ ಖಾಲಿ ಕೈಯಲ್ಲಿ ಆ ವಿದ್ಯಾರ್ಥಿ ಎಕ್ಸಿಟ್‌ ಆಗಬೇಕಿತ್ತು. ಆದರೆ ಇನ್ನು ಮುಂದೆ ಅಲ್ಲಿಯವರೆಗಿನ ಆ ವಿದ್ಯಾರ್ಥಿಯ ಶ್ರಮಕ್ಕೆ ಸೂಕ್ತ ಸರ್ಟಿಫಿಕೇಟ್‌ ನೀಡಿ ಕಳುಹಿ ಸುವ ಮೂಲಕ ವಿದ್ಯಾರ್ಥಿಯ ಭವಿಷ್ಯಕ್ಕೆ ಇದು ಆಧಾರವಾಗಲಿದೆ.

ಇದನ್ನೂ ಓದಿ:ಐವಿಎಫ್ ಮೂಲಕ 6 ಕರು ಸೃಷ್ಟಿ! ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ವೈಜ್ಞಾನಿಕ ಪ್ರಯೋಗ ಯಶಸ್ವಿ

ಗುಣಮಟ್ಟ ಶೇ.100 ಸುಧಾರಣೆ
01.ಉನ್ನತ ಶಿಕ್ಷಣದಲ್ಲಿ ನೂತನ ಶಿಕ್ಷಣ ನೀತಿಯ ಅನ್ವಯವೇ ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಕ್ರಮ ರಚಿಸಿದ್ದೇವೆ. ಅದನ್ನು ಅನುಷ್ಠಾನಗೊಳಿಸಲು ಬೋಧಕರಿಗೆ ತರಬೇತಿ ನೀಡಿ ಸಜ್ಜುಗೊಳಿಸಿದ್ದೇವೆ. ನೀತಿ ಜಾರಿಗೆ ಅಗತ್ಯವಾದ ಎಲ್ಲಾ ಕಾನೂನು ನಿಯಮಗಳನ್ನು ಪಾಲಿಸಿ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

02.ನನ್ನ ಪ್ರಕಾರ ಬೋಧಕರು ಮತ್ತು ವಿದ್ಯಾರ್ಥಿಗಳಿಬ್ಬರೂ ಈಗಾಗಲೇ ಎನ್‌ಇಪಿ ಬಗ್ಗೆ ಮಾಧ್ಯಮಗಳ ಮೂಲಕ ಸಾಕಷ್ಟು ತಿಳಿದುಕೊಂಡಿದ್ದಾರೆ. ಆದರೂ ನಾವು ಅವರಲ್ಲಿ ಅನುಮಾನಗಳಿದ್ದರೆ ಅವುಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುತ್ತೇವೆ. ಅದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದೇವೆ. ಜಿಲ್ಲಾಮಟ್ಟದ ಸಮಿತಿ ರಚಿಸಿದ್ದೇವೆ. ಮೇಲಿಂದ ಮೇಲೆ ಈ ಕುರಿತು ಅವರ ಗಮನ ಸೆಳೆಯುತ್ತಿದ್ದೇವೆ.

03.ಎನ್‌ಇಪಿಯಿಂದ ಬಹಳಷ್ಟು ಬದಲಾವಣೆಗಳಾಗಿವೆ. ಈ ಹಿಂದಿನ ಪಠ್ಯದ ಕಲಿಕೆಗೂ ಕಲಿಕೆ ನಂತರ ಅವರು ಮಾಡುವ ಕೆಲಸಕ್ಕೂ ಬಹಳ ವ್ಯತ್ಯಾಸವಿತ್ತು. ಆದರೆ ಈಗ ಅಳವಡಿಸಿರುವ ಪಠ್ಯ, ಮುಂದೆ ಅವರು ಏನು ಮಾಡಬೇಕೋ ಅದೇ ಕೆಲಸಕ್ಕೆ ಅವರನ್ನು ಸಿದ್ಧರಾಗುವಂತೆ ಮಾಡುತ್ತದೆ. ಕಲಿಕೆಯ ಅನಂತರದ ಉದ್ಯೋಗಕ್ಕೂ ಇದು ಪೂರಕವಾಗುತ್ತದೆ.

04. ಎನ್‌ಇಪಿ ಅನುಷ್ಠಾನದಿಂದ ಉನ್ನತ ಶಿಕ್ಷಣದ ಗುಣಮಟ್ಟ ಶೇ.100 ಸುಧಾರಿಸುತ್ತದೆ. ಕಾರಣ ಅದರಲ್ಲಿ ಅಂತಹ ಅಂಶಗಳು ಅಡಕವಾಗಿವೆ. ಇನ್ನು ಉಪನ್ಯಾಸಕರ ಕೊರತೆ ಆಗಲ್ಲ. ಕೆಲವು ಕಡೆ ಕೊರತೆ ಬಂದರೂ ಅದನ್ನು ನೀಗಿಸು ತ್ತೇವೆ. ಉತ್ತಮ ಬೋಧಕರಿಗೆ ಬೇಡಿಕೆ ಬರುತ್ತದೆ. ಅಷ್ಟೇಯಲ್ಲ, ಅವರ ಕಲಿಕಾ ಸಾಮರ್ಥ್ಯ ಮತ್ತು ಬೋಧನಾ ಗುಣಮಟ್ಟ ಹೆಚ್ಚುತ್ತದೆ.

05. ವಿದ್ಯಾರ್ಥಿಗಳು ಈ ಮೊದಲು ಹೆಚ್ಚಿಗೆ ಓದಿ ಕಡಿಮೆ ಓದಿದವರ ಜತೆಗೆ ಕೆಲಸ ಮಾಡುವ ಅನಿವಾರ್ಯತೆಯಿತ್ತು. ಆದರೆ ಈಗ ಎನ್‌ಇಪಿಯಲ್ಲಿ ಓದುವ ಪಠ್ಯ ಮತ್ತು ಮಾಡುವ ಕೆಲಸದ ಮಿತಿ ಗೊತ್ತಾಗುತ್ತದೆ. ಹೀಗಾಗಿ ಡ್ರಾಪ್‌ಔಟ್‌ ಹೆಚ್ಚಾಗಿ ಆಗಲ್ಲ ಎನ್ನುವ ಭರವಸೆಯಿದೆ. ಒಟ್ಟಿನಲ್ಲಿ ಎನ್‌ಇಪಿ ಬೋಧಕರಿಗೆ ಒಂದು ಹೊಸ ನೀತಿ ಜಾರಿ ಮಾಡಿದ ಹೆಮ್ಮೆ ತಂದರೆ ಬಲಿಷ್ಠ ಭಾರತ ಕಟ್ಟಲು ಖಂಡಿತಾ ನೆರವಾ ಗುತ್ತದೆ ಎನ್ನುವ ವಿಶ್ವಾಸವಿದೆ.

ಡ್ರಾಪ್‌ಔಟ್‌ ಆತಂಕ ಇಲ್ಲವೇ ಇಲ್ಲ
01.ರಾಣಿ ಚನ್ನಮ್ಮ ವಿವಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಎನ್‌ ಇಪಿ ಅನುಷ್ಠಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊಸ ನೀತಿ ಅನುಷ್ಠಾನಕ್ಕೆ ಅನುಮೋದನೆ ಪಡೆಯಲಾಗಿದೆ. ಅ.4ರಿಂದ ಹೊಸ ಸೆಮಿಸ್ಟರ್‌ ತರಗತಿಗಳು ಆರಂಭವಾಗಿದ್ದು, ಎನ್‌ಇಪಿ ಆಧಾರದ ಮೇಲೆಯೇ ಪಠ್ಯಕ್ರಮ ಜಾರಿ ಮಾಡಲಾಗುತ್ತಿದೆ.

02.ಯಾವುದೇ ರೀತಿಯ ಗೊಂದಲ ಇಲ್ಲ. ಆದರೆ ಹೊಸ ಶಿಕ್ಷಣ ನೀತಿ ಮತ್ತು ಹೊಸ ಪಠ್ಯಕ್ರಮವಾಗುವುದರಿಂದ ಆಯಾ ವಿಭಾಗದ ಮುಖ್ಯಸ್ಥರು ಇದನ್ನು ನೋಡಿಕೊಳ್ಳಬೇಕು. ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ವಿವಿಧ ವಿಭಾಗಗಳ ಮುಖ್ಯಸ್ಥರು ತಮ್ಮ ವಿಷಯಗಳ ಉಪನ್ಯಾಸಕರನ್ನು ತರಬೇತಿಗೊಳಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ನಿರ್ದೇಶಿಸಲಾಗಿದೆ.

03.ಖಂಡಿತಾ ಬದಲಾವಣೆ ಆಗುತ್ತದೆ. ಮೂಲ ವಿಷಯ ಬದಲಾಗಲ್ಲ. ಆದರೆ ಇಂದಿನ ಬದ ಲಾವಣೆಗೆ ತಕ್ಕಂತೆ ಸಂಶೋಧನೆ, ಇತ್ತೀಚಿನ ವಿದ್ಯಮಾನಗಳು ಸೇರಿ ಹೊಸದನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಇದು ಅನಿವಾರ್ಯವೂ ಹೌದು.

04.ಹೊಸ ಶಿಕ್ಷಣ ನೀತಿ ಅನುಷ್ಠಾನದಿಂದ ಖಂಡಿತಾ ಉನ್ನತ ಶಿಕ್ಷಣದ ಗುಣ ಮಟ್ಟದಲ್ಲಿ ಸುಧಾರಣೆ ಕಂಡು ಬರಲಿದೆ. ಮುಖ್ಯವಾಗಿ ಬಹು ಕೌಶಲ್ಯದ ಅಭಿವೃದ್ಧಿಯಾಗಲಿದೆ. ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಬುದ್ಧಿಮತ್ತೆ, ಪ್ರಾವಿಣ್ಯತೆ ಗಣನೀಯವಾಗಿ ಸುಧಾರಣೆ ಕಾಣಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಇದು ನೆರವಾಗಲಿದೆ. ಉಪನ್ಯಾಸಕರ ಕೊರತೆ ಕಾಡ ಬಹುದು. ಈ ಹಿನ್ನೆಲೆಯಲ್ಲಿ ಅಗತ್ಯ ಉಪನ್ಯಾಸಕರ ನೇಮಕಕ್ಕೆ ಆಯಾ ಕಾಲೇಜುಗಳು ಮುಂದಾಗಬೇಕು.

05.ಎನ್‌ಇಪಿ ಪದ್ಧತಿಯಲ್ಲಿ ಡ್ರಾಪ್‌ಔಟ್‌ ಆಗುವ ಸಾಧ್ಯತೆ ಬಹಳಕಡಿಮೆ. ಈ ಮೊದಲು ಸಹ ಡ್ರಾಪ್‌ಔಟ್‌ ಇದ್ದರೂ ಅದು ಕೇವಲಶೇ.1ರಿಂದ 2ರಷ್ಟು ಮಾತ್ರ. ಈಗ ಎನ್‌ಇಪಿಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಇದೆ. ಮುಖ್ಯವಾಗಿ ಇದರಿಂದ ಸೈನ್ಯ ಹಾಗೂ ಪೊಲೀಸ್‌ ಇಲಾಖೆಗಳಲ್ಲಿ ಇರುವವರಿಗೆ ತುಂಬಾ ಅನುಕೂಲ ಇದೆ. ಹೀಗಾಗಿ ಡ್ರಾಪ್‌ಔಟ್‌ ಆತಂಕ ಇಲ್ಲವೇ ಇಲ್ಲ.

ನೀತಿ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ
01. ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಪರಿಷ್ಕೃತ ಪಠ್ಯಕ್ರಮಕ್ಕೂ ಅನುಮೋದನೆ ದೊರೆತಿದೆ. ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ. ಮುಂದಿನ ವರ್ಷದಿಂದ ಪೂರ್ಣಪ್ರಮಾಣವಾಗಿ ಅನುಷ್ಠಾನಗೊಳ್ಳಲಿದೆ.

02. ಎನ್‌ಇಪಿ ಕುರಿತ ಗೊಂದಲಗಳ ನಿವಾರಣೆಗಾಗಿಯೇ ವಿಶೇಷ ಕಾರ್ಯ ಕ್ರಮ ಹಾಕಿಕೊಳ್ಳಲಾಗುತ್ತದೆ. ಮುಂದಿನ ತಿಂಗಳು ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಈ ಕಾರ್ಯಾಗಾರಕ್ಕೆ ಹೊಸ ಶಿಕ್ಷಣ ನೀತಿಯ ರಚನಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರೊ|ಎಂ.ಕೆ.ಶ್ರೀಧರ ಅವರನ್ನು ಆಹ್ವಾನಿಸಲಾಗುತ್ತಿದೆ.

03.ಖಂಡಿತವಾಗಿಯೂ ಪಠ್ಯಕ್ರಮದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಈ ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸ್ನೇಹಿ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನೀತಿ ಯಾಗಿದೆ. ವಿದ್ಯಾಭ್ಯಾಸ ನಂತರ ತಮ್ಮ ಸ್ವಂತ ಬುದ್ಧಿ ಮತ್ತು ಕಾಲಿನ ಮೇಲೆ ನಿಲ್ಲುವಂತೆ ಮಾಡುವ ಪಠ್ಯಕ್ರಮ ರಚನೆ ಮಾಡಬೇಕಾಗುತ್ತದೆ.

04.ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಇದು ಸಹಕಾರಿ ಆಗಲಿದೆ. ಪಠ್ಯದ ವಿಷಯ ದೊಂದಿಗೆ ಕೌಶಲ್ಯಕ್ಕೆ ಸಂಬಂಧಿಸಿದಂತೆ ಆಳವಾದ ಅಧ್ಯಯನ ಮಾಡುವುದ ರಿಂದ ಗುಣಮಟ್ಟ ಹೆಚ್ಚಲಿದೆ. ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ಸಹಾಯಕ ಪಾಧ್ಯಾಪಕರು ಸೇರಿ 91 ಹುದ್ದೆಗಳು ಖಾಲಿ ಇವೆ. ಶೀಘ್ರವೇ ಇವುಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ.

05.ಹಾಗೇನಿಲ್ಲ. ಯಾಕೆಂದರೆ, ಇದರಲ್ಲಿ ಮಲ್ಟಿಪಲ್‌ ಎಕ್ಸಿಟ್‌ ಮತ್ತು ಮಲ್ಟಿಪಲ್‌ ಎಂಟ್ರಿ ಎರಡೂ ಇವೆ. ವಿದ್ಯಾರ್ಥಿಗಳು ತಮಗೆ ಅನುಕೂಲವಾಗುವಂತೆ ವಿದ್ಯಾಭ್ಯಾಸ ಮುಂದುವರಿಸುವ ಅವಕಾಶ ನೀಡಲಾಗಿದೆ. ಒಂದೇ ವರ್ಷಕ್ಕೆ ಓದು ನಿಲ್ಲಿಸಿದರೂ ಆ ವಿದ್ಯಾರ್ಥಿಗೆ ಓದಿನ ಪ್ರಮಾಣಪತ್ರ ನೀಡಲಾಗುತ್ತದೆ. ಎರಡನೇ ವರ್ಷಕ್ಕೆ ಓದಿನಿಂದ ಹೊರಗುಳಿಯುವವರೆಗೆ ಡಿಪ್ಲೊಮಾ ಪ್ರಮಾಣ ಪತ್ರ ಕೊಡ ಲಾಗುತ್ತದೆ. ಮೂರನೇ ವರ್ಷಕ್ಕೆ ಪದವಿ ಪ್ರಮಾಣಪತ್ರ ಸಿಗಲಿದೆ. ಮಧ್ಯದಲ್ಲಿ ಶಿಕ್ಷಣ ಬಿಟ್ಟರೂ ಎರಡು ವರ್ಷದ ನಂತರವೂ ತನ್ನ ಶಿಕ್ಷಣ ಮುಂದುವರಿಸಬಹುದಾಗಿದೆ.

ಪಂಚ ಪ್ರಶ್ನೆಗಳು
1. ಎನ್‌ಇಪಿ ಅನುಷ್ಠಾನಕ್ಕೆ ಸಿದ್ಧತೆ ಹೇಗಿದೆ?
2. ಎನ್‌ಇಪಿ ಅನುಷ್ಠಾನಕ್ಕೆ ಸಂಬಂ ಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ
ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಯಾವುವು?
3.ಎನ್‌ಇಪಿ ಅನುಷ್ಠಾ ನದ ಅನಂತರ ಪಠ್ಯಕ್ರಮ ದಲ್ಲಿ ಆಗಬಹುದಾದ ಬದಲಾವಣೆ ಏನು?
4.ಎನ್‌ಇಪಿ ಅನುಷ್ಠಾನದ ಬಳಿಕ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೇಗೆ ಸುಧಾರಿಸ ಲಿದೆ ಮತ್ತು ಉಪನ್ಯಾಸಕರ ಕೊರತೆ ಅನುಷ್ಠಾನಕ್ಕೆ ಅಡ್ಡಿಯಾಗಲಿದೆಯೇ?
5.ಎನ್‌ಇಪಿಯಿಂದ ಮೂರು ವರ್ಷವೂ ಎಕ್ಸಿಟ್‌ ಇರುವುದರಿಂದ ಉನ್ನತ ಶಿಕ್ಷಣದಲ್ಲಿ ಡ್ರಾಪ್‌ಔಟ್‌ ಹೆಚ್ಚಾಗುವ ಆತಂಕ ಇದೆಯೇ?

Advertisement

Udayavani is now on Telegram. Click here to join our channel and stay updated with the latest news.

Next