Advertisement

ಮದ್ಯ-ಹೋಟೆಲ್‌ ಪಾರ್ಸಲ್‌ ಸೇವೆ ಶುರು

05:25 PM Jun 02, 2021 | Team Udayavani |

ಧಾರವಾಡ/ಹುಬ್ಬಳ್ಳಿ: ಅವಳಿನನಗರ ಸೇರಿದಂತೆ ಜಿಲ್ಲೆಯಲ್ಲಿ ಮದ್ಯದ ಅಂಗಡಿ ಹಾಗೂ ಹೋಟೆಲ್‌ಗ‌ಳಿಂದ ಪಾರ್ಸಲ್‌ ಸೇವೆ ಮಂಗಳವಾರದಿಂದ ಮತ್ತೆ ಆರಂಭಗೊಂಡಿದೆ.

Advertisement

ಕಟ್ಟುನಿಟ್ಟಿನ ಕರ್ಫ್ಯೂ ಹಿನ್ನೆಲೆಯಲ್ಲಿ 8-10 ದಿನಗಳಿಂದ ಮದ್ಯದ ಅಂಗಡಿ ಹಾಗೂ ಹೋಟೆಲ್‌ಗ‌ಳ ಸೇವೆ ಸ್ಥಗಿತ ಮಾಡಲಾಗಿತ್ತು. ಜೂ. 1ರಿಂದ 6ರವರೆಗೆ ಬೆಳಗ್ಗೆ 6ರಿಂದ 8 ಗಂಟೆವರೆಗೆ ಮದ್ಯದ ಅಂಗಡಿ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಹೀಗಾಗಿ ಮಂಗಳವಾರ ಬೆಳಗ್ಗೆಯೇ ಮದ್ಯಪ್ರಿಯರು ಮದ್ಯದ ಅಂಗಡಿಗಳಿಗೆ ಲಗ್ಗೆ ಇಟ್ಟು ಖರೀದಿಸಿದರು. ಮತ್ತೆಲ್ಲಿ ಬಂದ್‌ ಆಗುತ್ತದೆ ಎಂಬ ಆತಂಕದಿಂದ ಅವಶ್ಯಕ್ಕಿಂತ ಹೆಚ್ಚಾಗಿ ಮದ್ಯ ಖರೀದಿ ಮಾಡಿದರು.

ಇನ್ನೂ ಹೋಟೆಲ್‌ಗ‌ಳ ಕಾರ್ಯಾರಂಭಕ್ಕೂ ಅವಕಾಶ ನೀಡಿದ್ದು, ಬೆರಳಣಿಕೆಯಷ್ಟೇ ಹೋಟೆಲ್‌ಗ‌ಳು ಪಾರ್ಸೆಲ್‌ ಸೇವೆ ನೀಡುತ್ತಿವೆ. ಬೆಳಗ್ಗೆ 6ರಿಂದ 8 ಗಂಟೆವರೆಗೆ ಅಷ್ಟೇ ಹೋಟೆಲ್‌ ಗಳಿಗೆ ಪಾರ್ಸಲ್‌ ಸೇವೆ ನೀಡಲು ಅವಕಾಶ ನೀಡಲಾಗಿದೆ. ಆದರೆ ಬಹುತೇಕ ಹೋಟೆಲ್‌ಗ‌ಳು ಸೀಮಿತ ಅವಧಿಯ ಗೋಜಿಗೆ ಹೋಗದೇ ಬಾಗಿಲು ಹಾಕಿದ್ದರು.

ಧಾರವಾಡದ ಹಳೇ ಎಪಿಎಂಸಿ ಆವರಣದಲ್ಲಿ ಮಂಗಳವಾರದ ಹೋಲ್‌ಸೇಲ್‌ ವೀಳ್ಯದೆಲೆಯ ವ್ಯಾಪಾರ-ವಹಿವಾಟು ಜೋರಾಗಿತ್ತು. ಉಳಿದಂತೆ ಜನರ ಹಾಗೂ ವಾಹನಗಳ ಸಂಚಾರ ವಿರಳವಾಗಿತ್ತು. ಪಾರ್ಸಲ್‌ ಸೇವೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಜನರು ವಿನಾಕಾರಣ ಓಡಾಡುತ್ತಾರೆ ಎನ್ನುವ ಕಾರಣಕ್ಕೆ ಬೆಳಿಗ್ಗೆ ನಗರ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗಿತ್ತು. ಸಕಾರಣವಿಲ್ಲದೆ ಓಡಾಡುತ್ತಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next