ಕೋವಿಡ್ 19 ಸಮಯದಲ್ಲಂತೂ ಎಲ್ಲರೂ ಒಂದಿಲ್ಲೊಂದು ಜಾಗೃತಿ ಮೂಡಿಸಲು ಹೊರಟಿದ್ದು ಗೊತ್ತೇ ಇದೆ. ಅದರಲ್ಲೂ ಪೊಲೀಸ್ ಇಲಾಖೆಯಂತೂ ತಮ್ಮದೇ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದರು. ಈಗ ಹೊಸ ಸುದ್ದಿಯೆಂದರೆ, ಕನ್ನಡದ ಜನಪ್ರಿಯ ಚಿತ್ರಗಳ ಪೋಸ್ಟರ್‌ಗಳನ್ನೇ ಬಳಸಿಕೊಂಡು ಜಾಗೃತಿಗೆ ಮುಂದಾಗಿದ್ದಾರೆ ಎಂಬುದು ವಿಶೇಷ.
ಸುದೀಪ್ ನಟಿಸಿರುವ “ಪೈಲ್ವಾನ್’ ಚಿತ್ರದ ಪೋಸ್ಟರ್ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಸುದೀಪ್ ಅವರ ಮುಖಕ್ಕೆ ಮಾಸ್ಕ್ ಹಾಕಲಾಗಿದೆ ಈ ಮೂಲಕ ಮಾಸ್ಕ್ನ ಅಗತ್ಯ ಎಷ್ಟಿದೆ ಎಂದು ಹೇಳುವ ಪ್ರಯತ್ನ ಮಾಡಿರುವುದು ಗಮನಸೆಳೆಯುತ್ತಿದೆ.
ಸುದೀಪ್ ಅವರ ಫೋಟೋದೊಂದಿಗೆ ಕೋವಿಡ್ 19 ಸೋಂಕು ತಡೆಯಲು ನಮಗೆ ಜಾಣ್ಮೆ ಹಾಗೂ ಶಕ್ತಿ ಯ ಅಗತ್ಯತೆ ಇದೆ. ಮಾಸ್ಕಪ್ ಬೆಂಗಳೂರು, ಕೋವಿಡ್ 19 ಬಂಧಿಸಿ ಎಂದು ಹೇಳಲಾಗಿದೆ.
ಇದಷ್ಟೇ ಅಲ್ಲ, ಉಪೇಂದ್ರ ಅವರ “ಬುದ್ಧಿವಂತ ‘ ಚಿತ್ರದ ಪೋಸ್ಟರ್ ಕೂಡ ಈ ನಿಟ್ಟಿನಲ್ಲಿ ರಾರಾಜಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡಿದ ವೇಳೆ ನಕಲಿ ಸುದ್ದಿಗಳು ಕೂಡ ಇದರಷ್ಟೇ ಮಾರಕವಾಗುತ್ತವೆ. ಜಾಣ್ಮೆ ತೋರಿಸಿ, ಕೋವಿಡ್ 19 ಬಂಧಿಸಿ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಕೋವಿಡ್ 19 ವಿರುದ್ಧ ಜಾಗೃತಿ ಮೂಡಿಸುವಲ್ಲಿ ಬೆಂಗಳೂರು ನಗರ ಪೊಲೀಸ್ ಸಾಕಷ್ಟು ಶ್ರಮಿಸುತ್ತಿದೆ. ಎಲ್ಲರೂ ಅದರ ಶ್ರಮಕ್ಕೆ ಸ್ಪಂದಿಸಿದರೆ ನಿಜಕ್ಕೂ ಅವರ ಕಾರ್ಯಕ್ಕೆ ಗೌರವ ಕೊಟ್ಟಂತಾಗುತ್ತದೆ.