ಬಾರ್ಬಡೋಸ್: ಟಿ 20 ಸರಣಿಯಲ್ಲಿ ಹೀನಾಯವಾಗಿ ಸೋಲನುಭವಿಸಿದ್ದ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಇಲ್ಲಿನ ಕೆನ್ನಿಂಗ್ಸ್ಟನ್ ಓವಲ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 133 ರನ್ ಗಳ ಅಂತರದಿಂದ ಆಸೀಸ್ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸೀಸ್ 9 ವಿಕೆಟ್ ನಷ್ಟದಲ್ಲಿ 252 ರನ್ ಗಳಿಸಿತು. ಆರಂಭಿಕ ಆಟಗಾರರಾದ ಫಿಲಿಪ್ಪಿ 39 ರನ್, ಬೆನ್ ಮೆಕ್ ಡೆಮ್ರಾಟ್ 28 ರನ್ ಗಳಿಸಿದರು. ನೂತನ ನಾಯಕ ಅಲೆಕ್ಸ್ ಕ್ಯಾರಿ 67 ರನ್, ಆಸ್ಟನ್ ಟರ್ನರ್ 49 ರನ್ ಮಾಡಿದರು. ವಿಂಡೀಸ್ ಪರ ಹೇಯ್ಡನ್ ವಾಲ್ಶ್ ಐದು ವಿಕೆಟ್ ಪಡೆದರೆ, ಹೊಸೈನ್ ಮತ್ತು ಅಲ್ಜಾರಿ ಜೋಸೆಫ್ ತಲಾ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ : ಸ್ಪರ್ಧೆಗಳಿಗಾಗಿ ಕಾತರಿಸುತ್ತಿವೆ ಸುಂದರ ಒಲಿಂಪಿಕ್ಸ್ ಮೈದಾನಗಳು
ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಗೆ ಸ್ಟಾರ್ಕ್ ಮತ್ತು ಹ್ಯಾಜಲ್ ವುಡ್ ಮಾರಕ ದಾಳಿ ನಡೆಸಿದರು. ಹೆಟ್ಮೈರ್ ಹೊರತು ಆರಂಭಿಕ ಐವರು ಎರಡಂಕಿ ಗುರಿ ದಾಟಲಿಲ್ಲ. ನಾಯಕ ಕೈರನ್ ಪೊಲಾರ್ಡ್ ಅವರು 56 ರನ್ ಗಳಿಸಿದರು. ವಿಂಡೀಸ್ ತಂಡ ಕೇವಲ 26.2 ಓವರ್ ಗಳಲ್ಲಿ 123 ರನ್ ಗೆ ಆಲ್ ಔಟ್ ಆದರು.
ಆಸೀಸ್ ಪರ ಮಿಚೆಲ್ ಸ್ಟಾರ್ಕ್ ಐದು ವಿಕೆಟ್ ಪಡೆದರೆ, ಹ್ಯಾಜಲ್ ವುಡ್ ಕೇವಲ 11 ರನ್ ನೀಡಿ ಮೂರು ವಿಕೆಟ್ ಕಬಳಸಿದರು.