Advertisement

Starbucks CEO: ಕಚೇರಿ ತಲುಪಲು 1600 ಕಿ.ಮೀ. ಪಯಣಿಸುವ ಸ್ಟಾರ್‌ ಬಕ್ಸ್‌ ಸಿಇಒ

08:21 AM Aug 22, 2024 | Team Udayavani |

ಕ್ಯಾಲಿಫೋರ್ನಿಯಾ: ಸ್ಟಾರ್‌ಬಕ್ಸ್‌ನ ನೂತನ ಸಿಇಒ ಬ್ರಯಾನ್‌ ನಿಕೋಲ್‌ ಇನ್ನು ತಮ್ಮ ನಿವಾಸದಿಂದ 1,600 ಕಿ.ಮೀ. ದೂರದಲ್ಲಿರುವ ಕಚೇರಿಗೆ ನಿತ್ಯವೂ ಪ್ರಯಾಣಿಸಬೇಕಿದೆ.

Advertisement

ಇದಕ್ಕಾಗಿ ಸ್ಟಾರ್‌ಬಕ್ಸ್‌ ಸಂಸ್ಥೆ ನಿಕೋಲ್‌ಗೆ ಕಾರ್ಪೋರೆಟ್‌ ಜೆಟ್‌ ಅನ್ನೇ ಒದಗಿಸಿದೆ. ಸದ್ಯಕ್ಕೆ ಕ್ಯಾಲಿಫೋರ್ನಿಯಾದಲ್ಲಿ ನಿಕೋಲ್‌ ಮನೆಯಿದೆ. ಅಲ್ಲಿಂದ 1,600 ಕಿ.ಮೀ.ದೂರದ ಸಿಯಾಟಲ್‌ನಲ್ಲಿ ಸ್ಟಾರ್‌ಬಕ್ಸ್‌ ಕಚೇರಿ ಇದ್ದು, ಅಲ್ಲಿಗೇ ವಾಸಸ್ಥಳವನ್ನು ತತ್‌ಕ್ಷಣವೇ ಬದಲಾಯಿ­ಸಲು ನಿಕೋಲ್‌ ನಿರಾಕರಿಸಿದ್ದಾರೆ.

ಹೀಗಾಗಿ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ. 3 ದಿನ ಕ್ಯಾಲಿಫೋರ್ನಿಯಾದಲ್ಲಿ, 3 ದಿನ ಸಿಯಾ­ಟಲ್‌ನಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next