Advertisement

Sandalwoodನಲ್ಲಿ ಮತ್ತೆ ‘ಸ್ಟಾರ್ ವಾರ್’? ದಚ್ಚು ಟ್ವೀಟ್ ; ಕಿಚ್ಚನ ಲೆಟರ್ ಏನಿದು ಮ್ಯಾಟರ್?

09:54 AM Sep 18, 2019 | Hari Prasad |

ಬೆಂಗಳೂರು: ಒಂದಷ್ಟು ಸಮಯ ಸ್ಟಾರ್ ವಾರ್ ವಿಷಯದಲ್ಲಿ ಸೈಲೆಂಟಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಎರಡು ಮದಗಜಗಳ ನಡುವೆ ಚಿಕ್ಕದೊಂದು ಮುನಿಸಿನ ಕಿಡಿ ಅವರ ಅಭಿಮಾನಿ ವರ್ಗದ ನಡುವೆ ಕಾಡ್ಗಿಚ್ಚಾಗಿ ಉರಿದೇಳಲು ಕಾರಣವಾಗುತ್ತಿದೆಯೇ ಎಂಬ ಸಂಶಯ ಕಳೆದ ಕೆಲವು ದಿನಗಳಿಂದ ಚಂದನವನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿರುವವರಿಗೆ ಅನ್ನಿಸತೊಡಗಿರುವ ಸಂಗತಿಯಾಗಿದೆ.

Advertisement

ಇಷ್ಟಕ್ಕೂ ಯಾರು ಈ ಇಬ್ಬರು ಸ್ಟಾರ್ ಗಳು? ಯಾಕೆ ಇವರ ಅಭಿಮಾನಿಗಳ ನಡುವೆ ಮೇಲಾಟ? ಎಂದೆಲ್ಲಾ ನೋಡುವುದಾದರೆ ವಿಷಯ ತುಂಬಾ ಸಿಲ್ಲಿ ಅನ್ನಿಸಿದರೂ ಕುತೂಹಲಕರವಾಗಿದೆ ಕೇಳಿ.

‘ಡಿ’ಬಾಸ್ ದರ್ಶನ್ ತೂಗುದೀಪ ಅಭಿಮಾನಿವರ್ಗ ಮತ್ತು ಕಿಚ್ಚ ಸುದೀಪ್ ಅವರ ಅಭಿಮಾನಿಗಳ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಇತ್ತೀಚೆಗೆ ಐದು ಭಾಷೆಗಳಲ್ಲಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿರುವ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ನಕಲಿ ವಿಡಿಯೋ ರಿಲೀಸ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದ.

ಪೈಲ್ವಾನ್ ಚಿತ್ರ ತೆರಕಂಡ ಮರುದಿನವೇ ತಮಿಳುಕಾರರ್ಸ್ ಸೇರಿದಂತೆ ಕೆಲವೊಂದು ವೆಬ್ ಸೈಟ್ ಗಳಲ್ಲಿ ಈ ಚಿತ್ರ ಸೋರಿಕೆಯಾಗಿತ್ತು ಮತ್ತು ಇದರ ಬೆನ್ನಲ್ಲೇ ಈ ಚಿತ್ರದ ಪೈರಸಿಗೆ ಅವಕಾಶ ನೀಡಬಾರದು ಎಂದು ಅಭಿಮಾನಿಗಳಲ್ಲಿ ಚಿತ್ರತಂಡ ಮನವಿ ಮಾಡಿಕೊಂಡಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ, ಫ್ಯಾನ್ ಪುಟಗಳಲ್ಲಿ ಆರೋಪ ಪ್ರತ್ಯಾರೋಪ ಮುಂದುವರೆದಿತ್ತು.

Advertisement

ಈ ನಡುವೆ ಸೋಮವಾರದಂದು ‘ಪೈಲ್ವಾನ್’ ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಅವರು ಸೈಬರ್ ಪೊಲೀಸ್ ಠಾಣೆಗೆ ದೂರನ್ನೂ ಸಹ ನೀಡಿದ್ದರು. ಮತ್ತು ಈ ಸಂದರ್ಭದಲ್ಲಿ ‘ಪೈರಸಿ ವಿಚಾರದಲ್ಲಿ ದರ್ಶನ್ ಅಭಿಮಾನಿಗಳು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ’ ಎಂದೂ ಅವರು ಹೆಳಿದ್ದರು.

ಇದಾದ ಬಳಿಕ ಮಧ್ಯಾಹ್ನದ ಹೊತ್ತಿಗೆ ಟ್ವೀಟ್ ಒಂದನ್ನು ಮಾಡಿದ ನಟ ದರ್ಶನ್ ‘ನನ್ನ ಅನ್ನದಾತರು, ಸೆಲೆಬ್ರೆಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ’ ಎಂದು ಟ್ವೀಟ್ ಮಾಡುವ ಮೂಲಕ ತನ್ನ ಅಭಿಮಾನಿಗಳ ಬೆಂಬಲಕ್ಕೆ ದಚ್ಚು ನಿಂತುಬಿಟ್ಟಿದ್ದರು. ಇದು ಪರೋಕ್ಷವಾಗಿ ಪೈಲ್ವಾನ್ ಚಿತ್ರದ ಪೈರಸಿ ವಿಚಾರದಲ್ಲಿ ತನ್ನ ಅಭಿಮಾನಿಗಳನ್ನು ಎಳೆದು ತರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿ ದಚ್ಚು ನೀಡಿದ ರಿಯಾಕ್ಷನ್ ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ದರ್ಶನ್ ತನ್ನ ಅಭಿಮಾನಿಗಳನ್ನು ‘ಸೆಲೆಬ್ರೆಟಿಗಳು’ ಎಂದೂ ಸಹ ಕರೆಯುತ್ತಾರೆ.

ಇನ್ನು ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಅವರೂ ಒಂದು ಟ್ವೀಟ್ ಮಾಡಿದ್ದಾರೆ ಮಾತ್ರವಲ್ಲದೇ ಬಹಳ ಅರ್ಥಗರ್ಭಿತವಾಗಿರುವ ಸುದೀರ್ಘ ಪತ್ರವೊಂದನ್ನೂ ಸಹ ಬರೆದು ಅದರ ಲಿಂಕ್ ಅನ್ನು ಈ ಟ್ವೀಟ್ ನಲ್ಲಿ ಅಟ್ಯಾಚ್ ಮಾಡಿದ್ದಾರೆ.

‘ಎಚ್ಚರಿಕೆಯನ್ನು ನಾನು ಪಡೆದುಕೊಳ್ಳುವುದೂ ಇಲ್ಲ ನೀಡುವುದೂ ಇಲ್ಲ. ಇನ್ನು ಮಾತಿನಿಂದಲೇ ಯುದ್ಧ ಗೆಲ್ಲುವುದು ಸಾಧ್ಯ ಎನ್ನುವುದಾದರೆ ಇವತ್ತು ಈ ಜಗತ್ತಿನಲ್ಲಿ ಹಲವರು ರಾಜರಾಗಿರುತ್ತಿದ್ದರು. ನಾನು ಆರಿಸಿಕೊಳ್ಳುವ ಮಾರ್ಗ ಮನುಷ್ಯ ಮಾರ್ಗ’ ಎಂದು ಮಾರ್ಮಿಕ ಟ್ವೀಟ್ ಒಂದನ್ನು ಮಾಡಿದ್ದಾರೆ.


ಇನ್ನು ತನ್ನ ಟಂಬ್ಲರ್ ಖಾತೆಯಲ್ಲಿ ಸುದೀರ್ಘ ಪತ್ರವೊಂದನ್ನು ಬರೆದುಕೊಂಡಿರುವ ಕಿಚ್ಚ ಸುದೀಪ್ ಅವರು ಇದರಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ…

‘ಕ್ಷುಲ್ಲಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ನಮ್ಮ ಜೀವನದ ಕಡೆಗೆ ಮತ್ತು ಉತ್ತಮ ವಿಷಯಗಳ ಕಡೆಗೆ ಗಮನ ಕೊಡುವಂತೆ’ ಸುದೀಪ್ ತನ್ನ ಅಭಿಮಾನಿಗಳಲ್ಲಿ ಪ್ರಾರಂಭದಲ್ಲೇ ಮನವಿ ಮಾಡಿಕೊಂಡಿದ್ದಾರೆ. ‘ಸತ್ಯ ಯಾವತ್ತಿದ್ದರೂ ಸತ್ಯವೆ ಆಗಿರುತ್ತದೆ ಮತ್ತು ಇದನ್ನು ಒಪ್ಪಿಕೊಳ್ಳುವ ಮೂಲಕ ನಾವ್ಯಾರೂ ಯಾರ ಮುಂದೆಯೂ ಸಣ್ಣವರಾಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಹಲವಾರು ವಿಚಾರಗಳು ಘಟಿಸುತ್ತಿವೆ ಮತ್ತು ಇದು ಒಳ್ಳೆಯ ಸಂದೇಶಗಳನ್ನು ಕೊಡುತ್ತಿಲ್ಲ. ಪೈರಸಿಗೆ ಸಂಬಂಧಿಸಿದಂತೆ ಯಾವುದೇ ನಟರನ್ನು ಗುರಿಯಾಗಿಸಿ ಯಾರೂ ಸಹ ಆರೋಪವನ್ನು ಮಾಡಿಲ್ಲ. ಇನ್ನು ನಿರ್ಮಾಪಕರಾಗಲೀ ಅಥವಾ ನಾನಾಗಲೀ ಯಾವುದೇ ನಟರ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೆ ಈ ಪೈರಸಿ ವಿಚಾರದಲ್ಲಿ ಹಲವರು ಭಾಗಿಯಾಗಿರುವುದಂತೂ ಸತ್ಯ! ಮತ್ತು ಅಂತವರ ಹೆಸರನ್ನು ಸೈಬರ್ ಪೊಲೀಸರಿಗೆ ಈಗಾಗಲೇ ನೀಡಲಾಗಿದೆ. ಮುಂದಿನ ಕಾನೂನು ಕ್ರಮವನ್ನು ಪೊಲೀಸರೇ ತೆಗೆದುಕೊಳ್ಳಲಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಈಗ ಎದ್ದಿರುವ ವಿವಾದಗಳಿಗೆ ನಾವೊಂದು ಪೂರ್ಣ ವಿರಾಮವನ್ನು ಹಾಕಲೇಬೇಕಾಗಿದೆ. ಈ ವಿಚಾರಕ್ಕೆ ಸಂಬಂಧಿಸಿಂತೆ ಕೆಲವರು ಅನಾಮಿಕ ಪತ್ರದ ಮೂಲಕ ನನ್ನ ಹೆಸರನ್ನು ಸುಮ್ಮನೆ ಎಳೆದು ತರುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಈ ಎಲ್ಲಾ ವಿಚಾರಗಳು ನಿಮಗೆ ಬೇಸರ ತರುತ್ತದೆ ಎಂದು ನನಗೆ ಗೊತ್ತು. ಆದರೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ ಈ ಎಲ್ಲಾ ಕುತಂತ್ರಗಳಿಗೆ ನಾನು ಕುಗ್ಗಿ ಹೋಗುವುದಿಲ್ಲ!

ಇನ್ನು ನನ್ನ ಚಿತ್ರವನ್ನು ಮತ್ತು ನನ್ನ ನಿರ್ಮಾಪಕರನ್ನು ರಕ್ಷಿಸಿಕೊಳ್ಳಬೇಕಾಗಿರುವುದು ನನ್ನ ಜವಾಬ್ದಾರಿ ಇದಕ್ಕೆ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ನಾನು ಈಗಾಗಲೇ ಮಾಡುತ್ತಿದ್ದೇನೆ. ಚಿತ್ರರಂಗದ ಗೆಳೆಯರಿಂದ ಮತ್ತು ಹಿತೈಷಿಗಳಿಂದ ನನಗೆ ಸಿಕ್ಕಿರುವ ಬೆಂಬಲ ಅವರಲ್ಲಿರುವ ಒಳ್ಳೆಯ ಗುಣಕ್ಕೆ ಮಾದರಿಯಾಗಿದೆ ಮತ್ತು ನನ್ನ ಬಗ್ಗೆ ಅವರಿಗಿರುವ ಪ್ರೀತಿ ಹಾಗೂ ನಾನು ಅವರೊಂದಿಗೆ ಇರಿಸಿಕೊಂಡಿರುವ ಸಂಬಂಧಗಳಿಗೆ ಒಂದು ನಿದರ್ಶನವೂ ಆಗಿದೆ. ಎಲ್ಲಾ ಕಡೆಯಿಂದಲೂ ನನಗೆ ಬೆಂಬಲ, ಹಾರೈಕೆಗಳು ಬರುತ್ತಿರಬೇಕಾದರೆ ಇನ್ನು ನಾನು ಯಾರಿಗಾದರೂ ಏನನ್ನಾದರೂ ಸಾಬೀತುಪಡಿಸುವ ಅಗತ್ಯವಿದೆಯೇ?’

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next