Advertisement
ದೂರುದಾರರ ವಾಟ್ಸ್‌ಆ್ಯಪ್ ಸಂಖ್ಯೆಗೆ ನ. 4ರಂದು +84334590184 ಸಂಖ್ಯೆಯಿಂದ ಬಂದ ಸಂದೇಶದಲ್ಲಿ ಒಂದು ಲಿಂಕ್ ಇತ್ತು. ಅದನ್ನು ತೆರೆದಾಗ ಅವರ ಸಂಖ್ಯೆ ಟೆಲಿಗ್ರಾಂ ಆ್ಯಪ್‌ಗೆ ಸೇರ್ಪಡೆಗೊಂಡಿತು.
ಅನಂತರ ಅವರಿಗೆ ಸ್ಟಾರ್ ರೇಟಿಂಗ್ ಆ್ಯಪ್ ಮೂಲಕ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವ ಆಮಿಷ ನೀಡಲಾಯಿತು. ಅದನ್ನು ನಂಬಿದ ದೂರುದಾರರು ಮೊದಲು 5,000 ರೂ. ಸಂದಾಯ ಮಾಡಿದರು. ಅದಕ್ಕೆ ಪ್ರತಿಯಾಗಿ ಅವರ ಖಾತೆಗೆ 6,500 ರೂ. ಹಣ ಜಮೆಯಾಗಿತ್ತು. ಅನಂತರ ಅವರಿಗೆ ಗ್ರೂಪ್ ಮರ್ಚೆಂಟ್ ಟಾಸ್ಕ್ ಪೂರ್ಣಗೊಳಿಸಲು ಸೂಚಿಸಲಾಯಿತು. ಅದಕ್ಕೆ ಹಣ ಪಾವತಿಸಿದರೆ ಹೆಚ್ಚು ಹಣ ವಾಪಸ್ ನೀಡುವುದಾಗಿ ತಿಳಿಸಲಾಯಿತು. ಅದನ್ನು ನಂಬಿದ ದೂರುದಾರರು ಮತ್ತಷ್ಟು ಹಣ ಪಾವತಿಸಿದರು. ಅನಂತರ ಅವರ ಖಾತೆಯಿಂದ ಇದೇ ರೀತಿ ಹಂತ ಹಂತವಾಗಿ ನ. 4ರಿಂದ ನ.7ರ ವರೆಗೆ ಒಟ್ಟು 21.51 ಲ.ರೂ. ಹಣ ವರ್ಗಾಯಿಸಿಕೊಳ್ಳಲಾಯಿತು. ಆದರೆ ಅವರಿಗೆ ಹೂಡಿಕೆ ಮಾಡಿದ ಹಣ ಕೂಡ ವಾಪಸ್ ನೀಡದೆ ವಂಚಿಸಲಾಗಿದೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.