Advertisement

ಶಿರಸಿ : ಯಕ್ಷಗಾನ ಬಾಲ‌ ಕಲಾವಿದೆ ತುಳಸಿಗೆ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್

02:29 PM May 12, 2022 | Team Udayavani |

ಶಿರಸಿ: ಯಕ್ಷಗಾನ ಬಾಲ‌ ಕಲಾವಿದೆ, ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳನ್ನು ಪ್ರಸ್ತುತಗೊಳಿಸುವ ಶಿರಸಿಯ ತುಳಸಿ ಹೆಗಡೆ ಅವಳಿಗೆ ಮಹಾರಾಷ್ಟ್ರದ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ್ ಎಜ್ಯುಕೆಶನ್ ನೀಡುವ ಇಂಡಿಯನ್ ಸ್ಟಾರ್ ಐಕಾನ್‌ ಕಿಡ್ ಅಚೀವರ್ಸ್ ಅವಾರ್ಡ್ ಲಭಿಸಿದೆ.

Advertisement

ಭಾರತದ ವಿವಿಧಡೆಯ‌ ಮಕ್ಕಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆ ಪರಿಗಣಿಸಿ ನೀಡಲಾಗುವ ಪ್ರಶಸ್ತಿ ಇದಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ್ ಎಜ್ಯುಕೆಶನ್ ಜೊತೆಗೆ ನವಭಾರತ ರಾಷ್ಟ್ರೀಯ ಜ್ಞಾನಪೀಠ ಸಂಸ್ಥೆ, ಸುರಭೀ ಆಲ್ ಇಂಡಿಯಾ ಚೈಲ್ಡ್ ಆರ್ಟ್ ಎಕ್ಸಿಬಿಶನ್ ಸೊಸೈಟಿ, ನ್ಯಾಶನಲ್ ಇಕನಾಮಿಕ್ಸ್ ಗ್ರೋಥ್ ಟೈಮ್ಸ್ ಕೂಡ ಸಹಕಾರ ನೀಡಿವೆ.

ತುಳಸಿ ಹೆಗಡೆ ತನ್ನ ಮೂರುವರೆ ವರ್ಷಕ್ಕೇ ಯಕ್ಷಗಾನ ವೇಷ ಮಾಡಿದ ಬಾಲೆಯಾಗಿದ್ದು, ಕಳೆದ ಏಳು ವರ್ಷಗಳಿಂದ ಏಳು ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕ ಪ್ರಸ್ತುತಗೊಳಿಸುತ್ತ ನಾಡು ಹೊರ ನಾಡುಗಳಲ್ಲಿ ವಿಶ್ವಶಾಂತಿ ಸಂದೇಶವನ್ನು ಯಕ್ಷನೃತ್ಯ ಮೂಲಕ ಸಾರುತ್ತಿದ್ದಾಳೆ ಎಂದು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ತುಳಸಿ ವಿಶ್ವಶಾಂತಿ ಸರಣಿ ರೂಪಕಗಳ ಪ್ರಸ್ತುತಿ ಕುರಿತು ಇಂಟರನ್ಯಾಶನಲ್ ಬುಕ್ ಆಪ್ ರೆಕಾರ್ಡನಲ್ಲೂ ದಾಖಲಾಗಿದೆ ಎಂಬುದು ಉಲ್ಲೇಖನೀಯ.

ಇದನ್ನೂ ಓದಿ : 26 ದಿನದಲ್ಲಿ 5.5 ಕೋಟಿ ಜನರಿಂದ KGF 2 ವೀಕ್ಷಣೆ: ಅತೀ ಹೆಚ್ಚು ವೀಕ್ಷಣೆಯ 5 ಸಿನಿಮಾ ಯಾವುದು?

Advertisement
Advertisement

Udayavani is now on Telegram. Click here to join our channel and stay updated with the latest news.

Next