Advertisement
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರವು ರಾಜ್ಯ, ರಾಷ್ಟ್ರ ಮಟ್ಟದ ಸ್ಟಾರ್ ಪ್ರಚಾರಕರನ್ನು ನಿರೀಕ್ಷಿಸುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಿಂದಲೂ ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ನಡೆಯುತ್ತಿದ್ದರೂ ದೊಡ್ಡ ಮಟ್ಟದ ನಾಯಕರ ಆಗಮನ ಇನ್ನೂ ಆಗಿಲ್ಲ.ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ ಈಗಾಗಲೇ ಹಲವು ಸಭೆಗಳನ್ನು ಆಯೋಜಿಸಿ ಮತ ಬೇಟೆಗೆ ಕಾರ್ಯ ಕರ್ತರನ್ನು ಸಿದ್ಧಗೊಳಿಸಿವೆ. ದೊಡ್ಡ ಮಟ್ಟದ ಸಮಾವೇಶ, ರೋಡ್‌ಶೋಗಳಿಗೆ ಮಾತುಕತೆ ನಡೆಯುತ್ತಿದೆಯೇ ವಿನಾ ಯಾವುದೂ ಅಂತಿಮಗೊಂಡಿಲ್ಲ.
ಬಂಟ್ವಾಳ ಬಿಜೆಪಿಯು ಸಮಾವೇಶಕ್ಕಿಂತಲೂ ರೋಡ್‌ಶೋ ನಡೆಸುವ ಯೋಚನೆಯಲ್ಲಿದೆ. ಆ ಸಂದರ್ಭದಲ್ಲಿ ಯಾವ ಸ್ಟಾರ್ ಪ್ರಚಾರಕರು ಸಿಗುತ್ತಾರೋ ಅವರನ್ನು ಕರೆತರಲಾಗುವುದು. ಶಾಸಕ ರಾಜೇಶ್ ನಾಯ್ಕ, ಅಭ್ಯರ್ಥಿ ನಳಿನ್ ಸೇರಿದಂತೆ ಜಿಲ್ಲಾ ಮಟ್ಟದ ನಾಯಕರು ಬಂಟ್ವಾಳದಲ್ಲಿ ಪ್ರಚಾರ ನಡೆಸು ವರು. ಸಮಾವೇಶ ಯಾ ರೋಡ್‌ಶೋ ಕುರಿತು ತೀರ್ಮಾನ ಕೈಗೊಂಡಿಲ್ಲ. ಮನೆ ಪ್ರಚಾರಕ್ಕೆ ಪ್ರಾಶಸ್ತÂ ನೀಡಲಿದ್ದೇವೆ ಎಂದು ಬಿ. ದೇವದಾಸ್ ಶೆಟ್ಟಿ ತಿಳಿಸಿದ್ದಾರೆ. ಕಾಂಗ್ರೆಸ್: ಡಿಕೆಶಿ ನಿರೀಕ್ಷೆ
ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಯುವ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಅವರನ್ನು ಕರೆತಂದು ಸಮಾವೇಶಕ್ಕೆ ಸಿದ್ಧತೆ ನಡೆಸಿದೆ. ಜತೆಗೆ ರಾಜ್ಯ ರಾಜಕಾರಣದಲ್ಲಿ ಟ್ರಬಲ್ ಶೂಟರ್ ಎಂದೇ ಗುರುತಿಸಲ್ಪಟ್ಟಿರುವ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕರೆತರಲು ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಬಿ. ರಮಾನಾಥ ರೈ ಕ್ಷೇತ್ರದ ಮಾಜಿ ಶಾಸಕರಲ್ಲದೆ ಮಾಜಿ ಸಚಿವರೂ ಆಗಿರುವುದರಿಂದ ಸದ್ಯ ಅವರೇ ಸ್ಟಾರ್. ಉಳಿದಂತೆ ರಾಜ್ಯ ಮಟ್ಟದ ನಾಯಕರು ದ.ಕ. ಕ್ಷೇತ್ರಕ್ಕೆ ಆಗಮಿಸಿದ್ದರೆ ಅವರನ್ನು ಬಂಟ್ವಾಳಕ್ಕೆ ಕರೆತರುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.
Related Articles
Advertisement