ನವದೆಹಲಿ: ಸುಪ್ರೀಂಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಸುಪ್ರೀಂಕೋರ್ಟ್‌ನ ಶೇ.50ರಷ್ಟು ತೆರವಾಗಿರುವ ನ್ಯಾಯಮೂರ್ತಿಗಳ ಹುದ್ದೆಯನ್ನು ಭರ್ತಿ ಮಾಡಲಿದೆ. ಅವರ ಅಧಿಕಾರದ ಅವಧಿ 2024 ನ.10ರ ವರೆಗೆ ಇದೆ. ಈ ಅವಧಿಯಲ್ಲಿ ಅವರು 19 ಮಂದಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಿದ್ದಾರೆ.
ಅವರ ತಂದೆ ನಿವೃತ್ತ ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್ 1978 ಫೆ.22 ರಿಂದ 1985 ಜು.11ರ ವರೆಗೆ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ 14 ಮಂದಿಯನ್ನು ನೇಮಕ ಮಾಡಿದ್ದರು.
ಜ.4ರಂದು ನ್ಯಾ.ಎಸ್.ಅಬ್ದುಲ್ ನಜೀರ್ ಅವರು ನಿವೃತ್ತರಾಗಲಿದ್ದಾರೆ. ಅವರ ಸ್ಥಾನಕ್ಕೆ ಮತ್ತು 2023ರ ಮೇ, ಜೂನ್‌ನಲ್ಲಿ ಇನ್ನೂ ಐವರು ನ್ಯಾಯಮೂರ್ತಿಗಳು ನಿವೃತ್ತಿಯಾಗಲಿದ್ದಾರೆ.
ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ.ಬಾಲಕೃಷ್ಣನ್ ಅವಧಿಯಲ್ಲಿ 15 ಮಂದಿಯನ್ನು ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡಲಾಗಿತ್ತು.