ಮುಂಬಯಿ: ಎಲ್ಗಾರ್ ಪರಿಷದ್ ಮಾವೋವಾದಿಗಳ ಸಂಪರ್ಕ ಪ್ರಕರಣದ ಆರೋಪಿ, ಭಯೋತ್ಪಾದನಾ ವಿರೋಧಿ ಕಾನೂನಿನಡಿ ಬಂಧಿಸಲ್ಪಟ್ಟಿದ್ದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ (84) ಸೋಮವಾರ (ಜುಲೈ05) ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಾಯಿ ಸಿಂಹವನ್ನೂ ನಾಯಿ ಎಂದೆ ಭಾವಿಸುತ್ತದೆ: ಸಿದ್ದರಾಮಯ್ಯ ಹೇಳಿಕೆಗೆ ರವಿ ಕುಮಾರ್ ತಿರುಗೇಟು
ಇಂದು ಬಾಂಬೆ ಹೈಕೋರ್ಟ್ ನಲ್ಲಿ ಸ್ಟಾನ್ ಸ್ವಾಮಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುವ ಮೊದಲೇ ನಿಧನರಾಗಿದ್ದಾರೆ. 84 ವರ್ಷದ ಸ್ಟಾನ್ ಸ್ವಾಮಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ವೆಂಟಿಲೇರ್ ನಲ್ಲಿದ್ದರು.
ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ 1.30ಕ್ಕೆ ನಿಧನರಾಗಿರುವುದಾಗಿ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ನಿರ್ದೇಶಕ ಡಾ.ಐಯಾನ್ ಡಿಸೋಜಾ ಅವರು ಬಾಂಬೆ ಹೈಕೋರ್ಟ್ ನ ಜಸ್ಟೀಸ್ ಎಸ್ ಎಸ್ ಶಿಂಧೆ ಮತ್ತು ಜಸ್ಟೀಸ್ ಎನ್ ಜೆ ಜಾಮಾದಾರ್ ನೇತೃತ್ವದ ಪೀಠಕ್ಕೆ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಭಾನುವಾರ ಮುಂಜಾನೆ ಸ್ವಾಮಿ ಅವರು ಹೃದಯ ಸ್ತಂಭನಕ್ಕೊಳಗಾಗಿದ್ದರು, ನಂತರ ಅವರನ್ನು ವೆಂಟಿಲೇಟರ್ ಸಪೋರ್ಟ್ ನಲ್ಲಿ ಇರಿಸಲಾಗಿತ್ತು ಎಂದು ಡಾ.ಐಯಾನ್ ಡಿಸೋಜಾ ಕೋರ್ಟ್ ಗೆ ವಿವರ ನೀಡಿದ್ದಾರೆ. ಅವರು ಹೃದಯ ಸ್ತಂಭನದಿಂದ ಚೇತರಿಸಿಕೊಳ್ಳದೆ, ನಿಧನರಾಗಿರುವುದಾಗಿ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.