Advertisement

Video: 10 ಹುದ್ದೆಗೆ 1800 ಅರ್ಜಿ… ಸಂದರ್ಶನಕ್ಕಾಗಿ ಯುವಕರಿಂದ ನೂಕುನುಗ್ಗಲು, ಕಾಲ್ತುಳಿತ

10:02 AM Jul 12, 2024 | Team Udayavani |

ಗುಜರಾತ್: ದೇಶದಲ್ಲಿ ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆ ಕಾಣುತ್ತಿದೆ, ವರ್ಷಕ್ಕೆ ಲಕ್ಷಗಟ್ಟಲೆ ಯುವಕ, ಯುವತಿಯರು ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕಲು ಆರಂಭಿಸುತ್ತಾರೆ ಆದರೆ ಕೆಲವರಿಗೆ ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ ಕೆಲಸ ಸಿಕ್ಕರೆ ಇನ್ನು ಕೆಲವರು ವಂಚಿತರಾಗುತ್ತಾರೆ.

Advertisement

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಘಟನೆಯೊಂದು ದೇಶದ ನಿರುದ್ಯೋಗದ ವ್ಯಾಪ್ತಿಯನ್ನು ತೋರಿಸುತ್ತದೆ. ಕೆಮಿಕಲ್ ಕಂಪನಿಯಲ್ಲಿ ಖಾಲಿ ಇರುವ 10 ಹುದ್ದೆಗೆ ಸಂದರ್ಶನ ನಡೆಸಲು ಹೋಟೆಲ್ ಒಂದರಲ್ಲಿ ವ್ಯವಸ್ಥೆ ಮಾಡಿದ್ದರು ಅದಕ್ಕಾಗಿ ಸುಮಾರು ಸಾವಿರದ ಎಂಟುನೂರು ಅರ್ಜಿಗಳು ಬಂದಿದ್ದವು ಅಲ್ಲದೆ ನೇರ ಸಂದರ್ಶನಕ್ಕೆ ಅವಕಾಶ ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಯುವಕರು ಸಂದರ್ಶನ ನೀಡಲು ನಾ ಮುಂದು ತಾ ಮುಂದು ಎಂದು ನುಗ್ಗಿದ್ದಾರೆ ಈ ವೇಳೆ ನೂಕು ನುಗ್ಗಲು ಉಂಟಾಗಿ ಹೋಟೆಲ್ ಕಟ್ಟಡ ರೇಲಿಂಗ್ಸ್ ಮುರಿದು ಹೋಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕರ ನೂಕು ನುಗ್ಗಲಿನ ವಿಡಿಯೋ ವೈರಲ್ ಆಗಿದ್ದು ದೇಶದಲ್ಲಿ ನಿರುದ್ಯೋಗ ಯಾವ ಮಟ್ಟಿಗೆ ಇದೆ ಎಂಬುದನ್ನು ತೋರಿಸುವಂತಿದೆ.

ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರ ನಗರದಲ್ಲಿ ನಡೆದ ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next