ಕರಾಚಿ: ಪಾಕಿಸ್ಥಾನದ ಬಂದರು ನಗರಿ ಕರಾಚಿಯಲ್ಲಿ ರಮ್ಜಾನ್ ಆಹಾರ ವಿತರಣ ಕೇಂದ್ರದಲ್ಲಿ ಶುಕ್ರವಾರ ಸಂಭವಿಸಿದ ಕಾಲ್ತುಳಿತದಿಂದ ಮಹಿಳೆಯರು ಮತ್ತು ಮಕ್ಕಳು ಸಹಿತ 11 ಮಂದಿ ಬಲಿಯಾಗಿದ್ದಾರೆ.
Advertisement
ಆಹಾರ ವಿತರಣೆ ನಡೆಯುತ್ತಿದ್ದ ಪ್ರದೇಶದಲ್ಲಿ ವಿದ್ಯುತ್‌ಪ್ರವಾಹವಿದ್ದ ತಂತಿಯೊಂದು ಬಿದ್ದಿತ್ತು. ಕೆಲವರು ಗೊತ್ತಿಲ್ಲದೇ ಅದರ ಮೇಲೆ ಕಾಲಿಟ್ಟಿದ್ದಾರೆ.
ಅದು ಶಾಕ್ ಹೊಡೆದಾಗ ಭಯದಿಂದ ಒಬ್ಬರನ್ನೊಬ್ಬರು ನೂಕಿ ಮುಂದೆ ಓಡಲು ಆರಂಭಿಸಿದ್ದಾರೆ. ಈ ವೇಳೆ ಉಂಟಾದ ತಳ್ಳಾಟದಿಂದ ಈ ದುರಂತ ಸಂಭವಿಸಿದೆ.