Advertisement

ಪೆಟ್ರೋಲ್‌, ಡೀಸಿಲ್‌ ವ್ಯಾಟ್‌ ಇಳಿಸಿ: ತ.ನಾ.ಸರಕಾರಕ್ಕೆ ಡಿಎಂಕೆ

03:52 PM Oct 11, 2017 | udayavani editorial |

ಚೆನ್ನೈ : ಮಹಾರಾಷ್ಟ್ರ ಮತ್ತು ಗುಜರಾತ್‌ ಸರಕಾರ ಮಾಡಿದಂತೆ ತಮಿಳು ನಾಡು ಸರಕಾರ ಕೂಡ ವ್ಯಾಟ್‌ ದರ ಇಳಿಸಿ ಜನರಿಗೆ ಸ್ವಲ್ಪವಾದರೂ ಕಡಿಮೆ ದರದಲ್ಲಿ ಪಟ್ರೋಲ್‌ ಹಾಗೂ ಡೀಸಿಲ್‌ ಸಿಗುವಂತೆ ಮಾಡಬೇಕು ಎಂದು ವಿರೋಧ ಪಕ್ಷ ಡಿಎಂಕೆ ಆಗ್ರಹಿಸಿದೆ.

Advertisement

ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ವಿಧಾನ ಸಭೆಯಲ್ಲಿನ ವಿಪಕ್ಷ ನಾಯಕ ಎಂ ಕೆ ಸ್ಟಾಲಿನ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಬಿಜೆಪಿ ಆಡಳಿತೆಯ ಗುಜರಾತ್‌ ಮತ್ತು ಮಹಾರಾಷ್ಟ್ರ ಸರಕಾರಗಳು ಶೇ.4ರಷ್ಟು ವ್ಯಾಟ್‌ ಇಳಿಸಿ ಜನರಿಗೆ ಪೆಟ್ರೋಲ್‌ ಮತ್ತು ಡೀಸಿಲ್‌ ಅಗ್ಗದಲ್ಲಿ ಸಿಗುವಂತೆ ಮಾಡಿವೆ; ತಮಿಳು ನಾಡು ಸರಕಾರ ಕೂಡ ಅದನ್ನು ಮಾಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next