ಬೈಲೂರು ಪೇಟೆಯಿಂದ ಬೈಲೂರು ಪ್ರಾಥಮಿಕ ಶಾಲೆ, ಅಂಗನವಾಡಿ, ಪಂಚಾಯತ್ ಕಚೇರಿ, ಗ್ರಾಮ ಕರಣಿಕರ ಕಚೇರಿಯನ್ನು ಸಂಪರ್ಕಿಸಲು ಇರುವ ಕಾಲು ದಾರಿಯಲ್ಲಿಯೇ ಕೊಳಚೆ ನೀರು ನಿಂತ ಕಾರಣ ಗ್ರಾಮಸ್ಥರು ಸಂಕಷ್ಟ ಪಡುವಂತಾಗಿದೆ. ಮಳೆ ಸಂದರ್ಭ ಕಾಲು ದಾರಿಯಲ್ಲಿಯೇ ಸುಮಾರು ಒಂದು ಅಡಿ ನೀರು ನಿಲ್ಲುವ ಜತೆಗೆ ಚರಂಡಿಯ ಕೊಳಚೆ ನೀರು ಇದರೊಂದಿಗೆ ಸೇರುತ್ತಿದೆ. ಪ್ರತೀನಿತ್ಯ ಅಂಗನವಾಡಿ ಹಾಗೂ ಶಾಲೆಯ ಮಕ್ಕಳು ಇದೇ ಕೊಳಚೆ ನೀರಿನಲ್ಲಿ ನಡೆದುಕೊಂಡು ಹೋಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
Advertisement
ಬೈಲೂರಿನ ಕೆಲ ಹೊಟೇಲ್‌ಗಳ ತ್ಯಾಜ್ಯವನ್ನು ಇದಕ್ಕೆ ಹರಿಯಬಿಡಲಾಗುತ್ತಿದೆ. ಮಳೆ ನೀರು ಹಾಗೂ ಕೊಳಚೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.