Advertisement
ಸಾಮಾನ್ಯವಾಗಿ ಕೋಲಾರ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತುಕೊಳ್ಳಲು ಹೊರಗಿನ ಜಿಲ್ಲೆಯ ಯಾವುದೇ ಮಂತ್ರಿ ಸಿದ್ಧವಿರುವುದಿಲ್ಲ, ಮುನಿರತ್ನ ಕೋಲಾರ ಜಿಲ್ಲೆಯ ಉಸ್ತುವಾರಿಯಾಗಿ ನೇಮಕಗೊಂಡಿರುವುದರಿಂದ ಈ ಜವಾಬ್ದಾರಿಯನ್ನು ನಿಬಾಯಿಸಲೇ ಬೇಕಾಗುತ್ತದೆ. ನೆರೆ ಪರಿಹಾರ ಇತ್ಯಾದಿ ಕಾರ್ಯ ಗಳನ್ನು ಚುರುಕುಗೊಳಿಸುವ ಸಲುವಾಗಿ ಸಂಪುಟ ವಿಸ್ತರಣೆ ಬೆನ್ನಲ್ಲೇ ಉಸ್ತುವಾರಿ ಮಂತ್ರಿಗಳನ್ನು ನೇಮಕ ಮಾಡಿದ್ದು, ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗ ಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದ್ದಾರೆ.ಆದರೆ, ಕೋಲಾರ ಸದಾ ಬರಗಾಲ ಪೀಡಿತ ಜಿಲ್ಲೆ. ಇಲ್ಲಿ ನೆರೆಗೆ ಅವಕಾಶವೇ ಇಲ್ಲ. ಆದರೂ, ಕೋಲಾರ ಜಿಲ್ಲೆಯಲ್ಲಿ ಸಮಸ್ಯೆಗಳು ಇಲ್ಲ ಎನ್ನಲಾಗದು.
Related Articles
Advertisement
ಯರಗೋಳ್ ಡ್ಯಾಂ ಉದ್ಘಾಟನೆ ಆಗಲಿ: ಉಸ್ತುವಾರಿ ಮಂತ್ರಿ ಹೊಸ ಸರಕಾರದ ಮೇಲೆ ಒತ್ತಡ ಹೇರಿ ಕೋಲಾರ ಜಿಲ್ಲೆಯ ಹಿತದೃಷ್ಟಿಯಿಂದ ಕೈಗಾರಿಕಾ ತ್ಯಾಜ್ಯ, ಅಪಾಯಕಾರಿ ಲೋಹ, ಭಾರದ ವಸ್ತು ಗಳು ಸೇರಿಕೊಂಡಿರುವ ಕೆ.ಸಿ. ವ್ಯಾಲಿ ನೀರನ್ನು ಮೂರು ಬಾರಿ ಶುದ್ಧೀಕರಿಸಿ ಹರಿಸಲು ಕ್ರಮ ವಹಿಸಬೇಕಾಗಿದೆ. ಎತ್ತಿನಹೊಳೆ ಚುರುಕುಗೊಂಡು ಜಿಲ್ಲೆಗೆ ನೀರು ಹರಿಸಬೇಕು. ಕಾಮಗಾರಿ ಪೂರ್ಣಗೊಂಡಿರುವಯರ ಗೋಳ್‌ಅಣೆಕಟ್ಟು ಉದ್ಘಾಟನೆಯಾಗಬೇಕು.
ಕೋವಿಡ್ ಮೂರನೇ ಅಲೆ: ಕೋಲಾರ ಜಿಲ್ಲೆಯಲ್ಲಿ ಎರಡನೇ ಅಲೆಯ ಕೋವಿಡ್ ಚಿಕಿತ್ಸೆಗಾಗಿ 2620 ಬೆಡ್‌ಗಳು ಲಭ್ಯವಿತ್ತು ಎಂಬ ಮಾಹಿತಿಯನ್ನು ಅಂದಿನ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಘೋಷಿಸಿದ್ದರು. ಈ ಪೈಕಿ 1080 ಬೆಡ್‌ಗಳು ಸರಕಾರಿ ಆಸ್ಪತ್ರೆಗಳಲ್ಲೂ, 1540 ಬೆಡ್‌ಗಳು ಖಾಸಗಿ ಆಸ್ಪತ್ರೆ ಗಳಲ್ಲಿಯೂ ಲಭ್ಯವಿದೆ. ಹಾಗೆಯೇ ಸರಕಾರಿ ಆಸ್ಪತ್ರೆ ಗಳಲ್ಲಿ 205 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 60 ಆಮ್ಲಜನಕ ಸಹಿತ ಬೆಡ್ ಸೇರಿ 265 ಆಮ್ಲಜನಕ ಸಹಿತ ಬೆಡ್, ಸರ್ಕಾರದ ಆಸ್ಪತ್ರೆಯಲ್ಲಿ 110 ಮತ್ತು ಖಾಸಗಿ ಆಸ್ಪತ್ರೆಯಲ್ಲಿ 59 ಸೇರಿ 169 ವೆಂಟಿಲೇಟರ್ ಗಳು ಕೋಲಾರ ಜಿಲ್ಲೆಯಲ್ಲಿವೆ. ಆದರೆ, ಇವುಗಳಲ್ಲಿ ಸಿಬ್ಬಂದಿ ಕೊರತೆ, ತಾಂತ್ರಿಕ ಮಾಹಿತಿ ಕೊರತೆ ಇತ್ಯಾದಿ ಸಮಸ್ಯೆಗಳಿಂದ ಲಭ್ಯ ಸಲಕರಣೆಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಕೋವಿಡ್ ಸೋಂಕಿತರಿಗೆ ಸಮರ್ಪಕವಾಗಿ ಎಟುಕು ತ್ತಿಲ್ಲವೆಂಬ ದೂರುಗಳು ಕೇಳಿ ಬಂದಿದ್ದವು. 3ನೇ ಅಲೆ ಎದುರಿಸಲು ಎಲ್ಲಾ ಬೆಡ್‌ಗಳನ್ನು ಆಮ್ಲಜನಕ ಸಹಿತ ಬೆಡ್‌ಗಳಾಗಿಸಲು ಡೀಸಿ ಸೂಚಿಸಿದ್ದಾರೆ.
ಎಲ್ಲಾ ಸರಕಾರಿ ಆಸ್ಪತ್ರೆಗಳಿಗೂ ಆಮ್ಲಜನಕ ಉತ್ಪಾದನಾ ಘಟಕ ಅಳವಡಿಸುತ್ತಿದ್ದಾರೆ. ಇದರ ಹೊರತಾಗಿಯೂ 3ನೇ ಅಲೆಯಲ್ಲಿ ಹೆಚ್ಚು ಸಾವು ನೋವು ಸಂಭವಿಸದಂತೆ ಉಸ್ತುವಾರಿ ಮಂತ್ರಿಗಳು ಎಚ್ಚರವಹಿಸಬೇಕಾಗಿದೆ.
ರೈಲ್ವೆ ಬೇಡಿಕೆ ಕೋಲಾರ ಜಿಲ್ಲೆಯ ಬಹುತೇಕ ರೈಲ್ವೆ ಬೇಡಿಕೆಗಳು ಸಂಸದರಾಗಿದ್ದ ಕೆ.ಎಚ್. ಮುನಿಯಪ್ಪ ರೈಲ್ವೆ ಸಹಾಯಕ ಸಚಿವರಾಗಿದ್ದಾಗ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಬಹುತೇಕ ಯೋಜನೆಗಳು ಕೇಂದ್ರ, ರಾಜ್ಯ ಹಾಗೂಖಾಸಗಿ ಸಹ ಭಾಗಿತ್ವದಲ್ಲಿ ಮುನ್ನಡೆಸಬೇಕಾಗಿದೆ. ಆದರೆ, ಈವರೆಗೂ ಯಾವುದೇ ಸರಕಾರ ಕೋಲಾರ ಜಿಲ್ಲೆಯ ಬಜೆಟ್ ಘೋಷಿತ ರೈಲ್ವೆ ಬೇಡಿಕೆ ಈಡೇರಿ ಸಲು ಮುಂದಾಗಿಲ್ಲ. ಉಸ್ತುವಾರಿ ಸಚಿವರು ಕೋಲಾರ ಜಿಲ್ಲೆಯ ಎಲ್ಲಾಘೋಷಿತ ರೈಲ್ವೆ ಬೇಡಿಕೆ ಗಳನ್ನು ಈಡೇರಿಸುವ ಪ್ರಯತ್ನ ಆರಂಭಿಸಿದರೆ ಅಭಿವೃದ್ಧಿ ಮತ್ತಷ್ಟು ವೇಗಗೊಳ್ಳುತ್ತದೆ. ಕೈಗಾರಿಕೆ ಅಭಿವೃದ್ಧಿ
ಕೋಲಾರ ಜಿಲ್ಲೆಯ ಚಿನ್ನದ ಗಣಿ ಪ್ರದೇಶದ ಸಾವಿರಾರು ಎಕರೆ ಪ್ರದೇಶದಲ್ಲಿ ವಿಶೇಷಕೈಗಾರಿಕಾ ವಲಯಗಳನ್ನು ಸ್ಥಾಪಿಸುವ ಅವಕಾಶವಿದೆ. ಆದರೆ,ಕೇಂದ್ರ ಮತ್ತು ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.ಕೆಜಿಎಫ್ ಭಾಗದಲ್ಲಿಕೈಗಾರಿಕಾ ವಲಯಗಳನ್ನು ಸೃಷ್ಟಿಸಿ ಸಾವಿರಾರು ಮಂದಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬೇಕಾಗಿದೆ. ವೇಮಗಲ್, ನರಸಾಪುರ, ಮಾಲೂರಲ್ಲಿ ಕೈಗಾರಿಕೆಗಳು ಆರಂಭವಾಗಿವೆ. ಆದರೂ, ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುತ್ತಿಲ್ಲವೆಂಬ ದೂರುಗಳಿವೆ. ಇದನ್ನು ನಿವಾರಿಸಬೇಕಾಗಿದೆ. ಮಾರುಕಟ್ಟೆ ಗಳ ವಿಸ್ತರಣೆ
ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೋ, ಮಾವು, ಇತ್ಯಾದಿ ತರಕಾರಿ, ರೇಷ್ಮೆಯನ್ನು ಸರ್ಕಾರಿ ವಲಯದ ಮಾರುಕಟ್ಟೆಗಳ ಮೂಲಕವೇ ಹರಾಜು ಪದ್ಧತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ಇತ್ತೀಚಿನ ಸರಕಾರಿ ನೀತಿಗಳು ಮಾರುಕಟ್ಟೆಗಳ ಅಸ್ತಿತ್ವವನ್ನು ಅಲುಗಾಡಿಸುತ್ತಿವೆ. ಇದರ ನಡುವೆಯೂ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಗಳ ವಿಸ್ತರಣೆ, ಅಭಿವೃದ್ಧಿಗೆ ಬೇಡಿಕೆ ಇದೆ. ಇದಕ್ಕಾಗಿ ಹಲವು ವರ್ಷಗಳಿಂದಲೂ ರೈತರ ವಲಯದಕೂಗು ಎದ್ದಿದೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ಉಸ್ತುವಾರಿ ಮಂತ್ರಿ ಇತ್ತಕಡೆಯೂ ಗಮನ ಹರಿಸಬೇಕಾಗಿದೆ. ಪೋಡಿ ಅದಾಲತ್
ಹಿಂದೆ ಡೀಸಿ ಆಗಿದ್ದ ಡಿ.ಕೆ.ರವಿ ಆರಂಭಿಸಿದ್ದ ಪೋಡಿ ಮತ್ತುಕಂದಾಯ ಅದಾಲತ್ ಇಂದಿಗೂ ಪೂರ್ಣಗೊಂಡಿಲ್ಲ. ರೈತರು ತಮ್ಮ ಜಮೀನು ಪಿ.ನಂಬರ್ ತೆಗೆಯಲು ಇನ್ನಿಲ್ಲದಂತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿದೆ. ಇದಕ್ಕಾಗಿ ಪ್ರತ್ಯೇಕ ವಿಶೇಷ ಅದಾಲತ್‌ಗಳನ್ನು ಆಯೋಜಿಸಬೇಕಾಗಿದೆ. ಬಹುತೇಕ ಹಾಳಾಗಿರುವ ಗ್ರಾಮೀಣ ಮತ್ತು ನಗರ ರಸ್ತೆಗಳ ಪರಿಸ್ಥಿತಿ ಸುಧಾರಿಸಬೇಕಾಗಿದೆ. ಆಡಳಿತವನ್ನು ಚುರುಕುಗೊಳಿಸಲು ಅಗತ್ಯಕ್ರಮಕೈಗೊಳ್ಳಬೇಕಾಗುತ್ತದೆ. -ಕೆ.ಎಸ್.ಗಣೇಶ್