ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ದೂರಸಂಪರ್ಕ ಕಂಪೆನಿಗಳಾಗಿರುವ ಭಾರತ್ ಸಂಚಾರ್ ನಿಗಮ ನಿಯಮಿತ, ಮಹಾನಗರ ಟೆಲಿಫೋನ್ ನಿಗಮ ನಿಯಮಿತಗಳಿಗೆ ಈಗ ಸಿಬಂದಿ ಕೊರತೆ ಎದುರಾಗಿದೆ. ಸರಿ ಸುಮಾರು ಒಂದೂವರೆ ವರ್ಷಗಳ ಹಿಂದೆ 2 ಸಂಸ್ಥೆಗಳಿಂದ 93 ಸಾವಿರ ಮಂದಿ ವಿವಿಧ ದರ್ಜೆಯ ಅಧಿಕಾರಿಗಳು, ಸಿಬಂದಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಸದ್ಯ 2 ಸಂಸ್ಥೆಗಳಿಗೆ ಸಿಬಂದಿ ಕೊರತೆ ಎದುರಾಗಿದೆ. ಅನ್ನು ನಿವಾರಿಸಲು ನಿವೃತ್ತಿಯಾಗಿರುವವರನ್ನು ನೇಮಿಸುವ ಬಗ್ಗೆ ದೂರಸಂಪರ್ಕ ಸಚಿವಾಲಯಕ್ಕೆ ಲಿಖೀತ ಮನವಿ ಸಲ್ಲಿಸಲಾಗಿದೆ. ನಿವೃತ್ತಿಯಾದವರನ್ನು “ಸಲಹೆಗಾರರು’ ಎಂದು ಮರು ನೇಮಕಗೊಳಿಸಲು ಅವಕಾಶ ಇದೆಯೇ ಎಂದು ಕೋರಿಕೆ ಸಲ್ಲಿಸಲಾಗಿದೆ.
ಅದನ್ನು ಪರಿಶೀಲಿಸಿರುವ ಸಚಿವಾಲಯ ಸದ್ಯಕ್ಕೆ ಯಾವುದೇ ನೇಮಕ ಮಾಡಿಕೊಳ್ಳುವುದು ಬೇಡ. ಕೋರಿಕೆಯಲ್ಲಿ ಉಲ್ಲೇಖೀಸಿರುವಂತೆ ನೇಮಕ ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಂಡಿಯನ್
ಎಕ್ಸ್‌ಪ್ರೆಸ್’ ವರದಿ ಮಾಡಿದೆ.
2 ಸಂಸ್ಥೆಗಳನ್ನು ಪುನಃಶ್ಚೇತನ ಗೊಳಿಸುವ ನಿಟ್ಟಿನಲ್ಲಿ 2029ರಲ್ಲಿ ಕೇಂದ್ರ ಸರಕಾರ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಗೆ ಅನುಮೋದನೆ ನೀಡಿತ್ತು. ಅದರ ಅನುಷ್ಠಾನದ ಮೊದಲು ಬಿಎಸ್‌ಎನ್‌ಎಲ್‌ನಲ್ಲಿ 1,53,000, ಎಂಟಿಎನ್‌ಎಲ್‌ನಲ್ಲಿ 14,400 ಮಂದಿ ಉದ್ಯೋಗಿಗಳಿದ್ದರು. 2 ಸಂಸ್ಥೆಗಳಲ್ಲಿರುವ 55-60 ವಯೋಮಿತಿಯವರು ಸ್ವಯಂ ನಿವೃತ್ತಿ ಯೋಜನೆ ಆಯ್ಕೆ ಮಾಡಿದ್ದರು. 2020-21ರ ಬಜೆಟ್‌ನಲ್ಲಿ ವಿಆರ್‌ಎಸ್‌ಗಾಗಿ 37,278 ಕೋಟಿ ರೂ. ಮೀಸಲಾಗಿ ಇರಿಸಲಾಗಿತ್ತು.