Advertisement

SSCಗೆ “ಯೆಸ್‌’ಎನ್ನಿ!

11:45 AM Dec 12, 2017 | Team Udayavani |

ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆ ಮತ್ತು ಯೋಚನೆ ಎಲ್ಲರಿಗೂ ಇರುತ್ತದೆ. ಆದರೆ ಬದುಕಿನಲ್ಲಿ ಎಲ್ಲವೂ ನಾವು ಅಂದುಕೊಂಡಂತೆಯೇ ಆಗುವುದಿಲ್ಲ. ಅನೇಕ ಅಡಚಣೆಗಳು, ಕುಟುಂಬದ ಪರಿಸ್ಥಿತಿ ಇತ್ಯಾದಿ ಸಮಸ್ಯೆಗಳು ಎಷ್ಟೋ ಬಾರಿ ಓದು ಅರ್ಧಕ್ಕೇ ನಿಲ್ಲುವಂತೆ ಮಾಡಿರುತ್ತವೆ. ಎಸ್ಸೆಸ್ಸೆಲ್ಸಿ, ಪಿಯುಸಿವರೆಗೂ ಓದಿ ಕುಟುಂಬದ ಭಾರವನ್ನು ಹೊತ್ತವರೂ ಇದ್ದಾರೆ. ಪದವಿ, ಸ್ನಾತಕೋತ್ತರ ಪದವಿ ಮಾಡಲಿಲ್ಲ ಎಂದು ಕೊರಗುತ್ತಾ ಉಳಿದವರು ಸಾವಿರಾರು ಮಂದಿ ಸಿಗುತ್ತಾರೆ. ಈ ಸಂಕಟದ ಮಧ್ಯೆಯೂ ಕೆಲವರು ಗಣಕ ಜ್ಞಾನದ ಕೌಶಲ ಪಡೆದು ಯಾವುದಾದರೂ ಒಳ್ಳೆಯ ನೌಕರಿ ಸಿಗಬಹುದೆಂದು ಹುಡುಕಾಟ ಆರಂಭಿಸುತ್ತಾರೆ. ಅಂಥವರಿಗಾಗಿ ಸ್ಟಾಫ್‌ ಸೆಲೆಕ್ಷನ್‌ ಕಮೀಷನ್‌ ಕಂಬೈಂಡ್‌ ಹೈಯರ್‌ ಸೆಕೆಂಡರಿ ಲೆವೆಲ…(10+2) ಪರೀಕ್ಷೆ ಮೂಲಕ 3259 ಹುದ್ದೆಗಳಿಗೆ ಅವಕಾಶ ಕಲ್ಪಿಸಿದೆ.

Advertisement

“ನೋಡು, ನೀನು ಪಿಯುಸಿ ಮುಗಿದ ಮೇಲೆ ಡಿಗ್ರಿಗೆ ಸೇರೊಬೇಡ. ನಿನ್ನ ಮಾವ ಒಂದು ಕೆಲಸ ನೋಡಿದಾರೆ, ಅಲ್ಲಿಗೆ ಹೋಗಿ ಸೇರಿಕೊ. ನಿಮ್ಮಪ್ಪ ಇದ್ದಿದ್ರೆ ನಿನ್ನನ್ನು ಚೆನ್ನಾಗಿ ಓದಿಸ್ತಾ ಇದ್ರು. ಇನ್ನು ಅದೆಲ್ಲಾ ಕನಸಿನ ಮಾತು…’ ಎಂದು ಕುಟುಂಬದ ಹಿರಿಯರು ಹೇಳಿದಾಗ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಂಬಲಿಸುವ ತಂದೆಯಿಲ್ಲದ ಹುಡುಗನ ಮನಸ್ಸಿಗೆ ಹೇಗಾಗಿರಬೇಡಾ…? ಇಂಥದ್ದೊಂದು ಸಂಕಟಕ್ಕೆ ಸಿಲುಕುವವರದ್ದು ಒಂದು ತಂಡವಾದರೆ, “ನಮ್ಮಪ್ಪ ತೋಟದ ಕೆಲಸಕ್ಕೆ ಹಾಕಿ ನನ್ನನ್ನು ಹಾಳು ಮಾಡಿದ್ರು’, “ನಾನು ಅತ್ತೆ ಮನೆಗೆ ಹೋಗದೆ ಇದ್ದಿದ್ದರೆ ಡಿಗ್ರೀಲಿ ಫೇಲ್‌ ಆಗುತ್ತಿರಲಿಲ್ಲ’… ಎಂದೆಲ್ಲಾ ಪರಿತಪಿಸುವವರದ್ದು ಇನ್ನೊಂದು ತಂಡ. ಹಲವರು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿ ಕೈ ಚೆಲ್ಲಿ, ಯಾವುದೋ ಸಿಕ್ಕಿದ ನೌಕರಿಯನ್ನು ಪಡೆದವರನ್ನೂ ನೋಡಿದ್ದೇವೆ.

ಓದಂತೂ ಹತ್ತಲಿಲ್ಲ. ಕಂಪ್ಯೂಟರ್‌ ಆಧಾರಿತ ಕೆಲವು ತಂತ್ರಾಂಶಗಳ ಕೌಶಲಗಳನ್ನಾದರೂ ಕಲಿಯೋಣ. ಈಗ ಕಂಪ್ಯೂಟರ್‌ ಕಲಿತರೆ ಕೆಲಸ ಗ್ಯಾರಂಟಿಯಂತೆ ಎಂದುಕೊಂಡು ಸ್ವಲ್ಪ ಪ್ರಯತ್ನಪಟ್ಟು ತಮ್ಮ ಜೀವನವನ್ನು ಸುಗಮಗೊಳಿಸಿಕೊಂಡವರೂ ಇದ್ದಾರೆ. ಈ ಎರಡನೇ ಮಾದರಿಯ ಪ್ರಯತ್ನಶಾಲಿಗಳಿಗಾಗಿ ಸ್ಟಾಫ್‌ ಸೆಲೆಕ್ಷನ್‌ ಕಮೀಷನ್‌ ಕಂಬೈಂಡ್‌ ಹೈಯರ್‌ ಸೆಕೆಂಡರಿ ಲೆವೆಲ…(10+2) ಪರೀಕ್ಷೆ ಮೂಲಕ ಲೋಯರ್‌ ಡಿವಿಷನ್‌ ಕ್ಲರ್ಕ್‌, ಪೋಸ್ಟಲ್ ಅಸಿಸ್ಟೆಂಟ…, ಡೆಟಾಎಂಟ್ರಿ ಆಪರೇಟರ್‌ಗಳ ಒಟ್ಟು 3259 ಹುದ್ದೆಗಳಿಗೆ ಆಹ್ವಾನ ನೀಡಿದೆ.

ಪರೀಕ್ಷೆ ಹೇಗಿರುತ್ತೆ?
– ಈ ಎಲ್ಲಾ ಹುದ್ದೆಗಳಿಗೂ ಒಟ್ಟು ಮೂರು ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೊದಲು ಕಂಪ್ಯೂಟರ್‌ ಬೇಸಿಕ್‌ ಪರೀಕ್ಷೆ(ಆಬೆಕ್ಟಿವ್‌) ನಡೆಸಲಾಗುತ್ತದೆ. ಇದು 2018ರ ಮಾ.4ರಿಂದ 26ರವರೆಗೆ ನಡೆಯಲಿದ್ದು ಆಂಗ್ಲಭಾಷೆ, ಸಾಮಾನ್ಯ ಜ್ಞಾನ, ಕ್ವಾಂಟಿಟೀವ್‌ ಅಪ್ಟಿಟ್ಯೂಡ್‌, ಜನರಲ… ಅವೇರ್ನೆಸ್‌ ಎಂಬ ನಾಲ್ಕು ಪತ್ರಿಕೆಗಳ 200 ಅಂಕಗಳಿಗೆ ಉತ್ತರಿಸಬೇಕಾಗುತ್ತದೆ.

– ಎರಡನೇ ಮಾದರಿ ಪರೀಕ್ಷೆಯಲ್ಲಿ ನೂರು ಅಂಕಗಳಿಗೆ ಲಿಖತ ಪರೀಕ್ಷೆಯಿದ್ದು ಪ್ರಬಂಧವನ್ನು ಬರೆಯಬೇಕು.
– ಮೂರರಲ್ಲಿ ಅಭ್ಯರ್ಥಿಯ ಕೌಶಲವನ್ನು ಪರೀಕ್ಷಿಸಲಾಗುವುದು. ಪ್ರಶ್ನಾವಳಿಗಳು, ಟೈಪಿಂಗ್‌ ಟೆಸ್ಟ್‌, ಡಾಟಾ ಎಂಟ್ರಿ ಇತ್ಯಾದಿ ಪರೀಕ್ಷೆಯಿರುತ್ತದೆ.

Advertisement

ಹುದ್ದೆಗಳು ಎಷ್ಟು?
ಲೋಯರ್‌ ಸೆಕೆಂಡರಿ ಕ್ಲರ್ಕ್‌/ ಜೂನಿಯರ್‌ ಸಚಿವಾಲಯ ಸಹಾಯಕ- 898
ಪೋಸ್ಟಲ್ ಅಸಿಸ್ಟೆಂಟ…- 2359
ಡೆಟಾ ಎಂಟ್ರಿ ಹುದ್ದೆಗಳು- 2

ಅರ್ಹತೆ ಏನು?
ಈ ಹುದ್ದೆಗಳನ್ನು ಹೊಂದಲು ದ್ವಿತೀಯ ಪಿಯುಸಿ ಸಾಮಾನ್ಯ ವಿದ್ಯಾರ್ಹತೆಯಾಗಿದೆ. ಜೊತೆಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 27ವರ್ಷ ವಯೋಮಿತಿಯನ್ನು ಹೊಂದಿರಬೇಕು. ಪರಿಶಿಷ್ಟರಿಗೆ 5ವರ್ಷ, ಒಬಿಸಿಗೆ 3ವರ್ಷ, ಅಂಗವಿಕಲರಿಗೆ 10ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆಯಿದೆ.ಈ ಎಲ್ಲಾ ಹುದ್ದೆಗಳಿಗೆ ಹುದ್ದೆಗಳಿಗೆ 5200 ರೂ ಯಿಂದ 20200+1900 ರೂ. ವರೆಗೆ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ಲೋಯರ್‌ ಡಿವಿಷನ್‌ ಕ್ಲರ್ಕ್‌, ಪೋಸ್ಟಲ್ ಅಸಿಸ್ಟೆಂಟ್‌, ಡಾಟಾ ಎಂಟ್ರಿ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಂಡು tinyurl.com/ yaofwk9p ಜಾಲತಾಣದ ಮೂಲಕ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ತಾಣದಲ್ಲಿ ರಿಜಿಸ್ಟರ್‌ ಆಗಬೇಕು ಬಳಿಕ ಅರ್ಜಿ ಸಲ್ಲಿಸಬೇಕು. ಅಪ್ಲಿಕೇಷನ್‌ ಶುಲ್ಕ 100 ರೂ. ಗಳನ್ನು ನಿಗದಿ ಮಾಡಿದ್ದು, ಇದನ್ನು ಎಸ್‌ಬಿಐ ಚಲನ್‌, ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌ ಮೂಲಕ ಪಾವತಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿ.18 ಕೊನೆ ದಿನವಾಗಿದೆ. 

ಹೆಚ್ಚಿನ ಮಾಹಿತಿಗೆ- tinyurl.com/y9pjqjen 

ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next