Advertisement

ಸಾಮೂಹಿಕ ವಿವಾಹದಿಂದ ಸಿಬ್ಬಂದಿ ವೇತನಕ್ಕೆ ಸಮಸ್ಯೆ ಆಗಲ್ಲ

11:20 PM Mar 06, 2020 | Lakshmi GovindaRaj |

ವಿಧಾನಪರಿಷತ್‌: ರಾಜ್ಯದ ಎ ದರ್ಜೆಯ 100 ದೇವಸ್ಥಾನಗಳಲ್ಲಿ ಮಾತ್ರ ಸಾಮೂಹಿಕ ವಿವಾಹ ನಡೆಸಲಿದ್ದು ಇದರಿಂದ ಸಿಬ್ಬಂದಿ ವೇತನಕ್ಕೆ ಸಮಸ್ಯೆ ಆಗುವುದಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

Advertisement

ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುವ ವೇಳೆ “ಭಕ್ತರು ಹುಂಡಿಗೆ ಹಾಕುವ ಹಣವನ್ನು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಬೇಕೇ ವಿನಃ ಸಾಮೂಹಿಕ ವಿವಾಹಕ್ಕೆ ಉಪಯೋಗಿಸುವುದು ಸರಿಯಲ್ಲ. ಸರ್ಕಾರ ಸ್ವಂತ ಖರ್ಚಿನಿಂದ ಇದನ್ನು ಮಾಡಬೇಕು’ ಎಂದರು.

ಇದಕ್ಕೆ ಸಭಾ ನಾಯಕರೂ ಆದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಶೇ.35ಕ್ಕಿಂತ ಕಡಿಮೆ ಆದಾಯ ಮಿತಿ ಇರುವ ದೇವಸ್ಥಾನದ ಹಣ ವನ್ನು ಬಳಕೆ ಮಾಡಿಕೊಳ್ಳದೆ ಮುಜರಾಯಿ ಇಲಾಖೆ ಯಿಂದಲೇ ಆರ್ಥಿಕ ನೆರವು ನೀಡಿ ಉಚಿತ ಸಾಮೂಹಿಕ ವಿವಾಹ ನಡೆಸಲಾಗುವುದು. ಆರ್ಥಿಕ ವಾಗಿ ಬಲವಾಗಿರುವ ನೂರು ಎ ದರ್ಜೆ ದೇವ ಸ್ಥಾನಗಳ ಪೈಕಿ 3 ದೇಗುಲ ಹೊರತುಪಡಿಸಿ 97 ದೇಗುಲಗಳಲ್ಲಿ ಸಾಮೂಹಿಕ ವಿವಾಹ ಮಾಡಲಾಗುತ್ತದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 100 ಕೋಟಿ, ಕೊಲ್ಲೂರು ಮೂಕಾಂಬಿಕೆಯಿಂದ 60-80 ಕೋಟಿ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ದಿಂದ 35ರಿಂದ 40 ಕೋಟಿ, ಚಾಮುಂಡೇಶ್ವರಿ ದೇವಸ್ಥಾನ ದಿಂದ 40- 50 ಕೋಟಿ ಆದಾಯ ಬರುತ್ತದೆ. 190 ದೇವಸ್ಥಾನಗಳ ಪೈಕಿ 100 ಎ ದರ್ಜೆಯ ದೇಗುಲಗಳಲ್ಲಿರುವ ಹಣವನ್ನು ಮಾತ್ರ ಬಳಕೆ ಮಾಡುತ್ತಿದ್ದೇವೆ. ಆರ್ಥಿಕವಾಗಿ ಶಕ್ತಿ ಕಡಿಮೆ ಇರುವ ದೇವಸ್ಥಾನಗಳ ಹುಂಡಿ ಹಣವನ್ನು ಅಲ್ಲಿನ ಸಿಬ್ಬಂದಿ ವೇತನಕ್ಕೆ ಉಪಯೋಗಿಸಲಿದ್ದೇವೆಂದರು.

ಉಚಿತ ಸಾಮೂಹಿಕ ವಿವಾಹಕ್ಕೆ ಹಣಕಾಸಿನ ಕೊರತೆ ಇಲ್ಲ. ನಮ್ಮ ಇಲಾಖೆ ಇದೆಲ್ಲವನ್ನೂ ಭರಿಸಲು ಶಕ್ತವಾಗಿದೆ. ಈವರೆಗೂ ಸಾಮೂಹಿಕ ಮದುವೆ ಯಾಗಲು 2000ಕ್ಕೂ ಹೆಚ್ಚು ಅರ್ಜಿ ಬಂದಿವೆ. ವಿವಾಹ ವಾಗುವವರು ಸ್ಥಳದಲ್ಲಿಯೇ ನೋಂದಣಿ ಮಾಡಿಸಿ ಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೊಂದು ಪಾರದರ್ಶಕ ಕಾರ್ಯಕ್ರಮವಾಗಿದ್ದು, ಪಕ್ಷಬೇಧ ಮರೆತು ಎಲ್ಲರೂ ಸಹಕಾರ ನೀಡುತ್ತಿದ್ದಾರೆಂದರು.

Advertisement

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯೆ ಜಯಮಾಲಾ, ಇದೊಂದು ಅತ್ಯುತ್ತಮ ಕಾರ್ಯ ಕ್ರಮ. ತಾವೆಲ್ಲರೂ ಪಕ್ಷಬೇಧ ಮರೆತು ಬೆಂಬಲಿಸ ಬೇಕು. ವಿವಾಹವಾಗುವ ನೂತನ ವಧು ವರರಿಗೆ ಸ್ಥಳದಲ್ಲಿಯೇ ನೋಂದಣಿ ಮಾಡಿಸಿಕೊಳ್ಳಲು ಅನು ಕೂಲ ಕಲ್ಪಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next