Advertisement

ಸ್ಕೂಡ್‌ವೇಸ್‌ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕಗಳಿಗೆ ಸಿಬ್ಬಂದಿಗೆ ಏಳು ತಿಂಗಳಿಂದ ವೇತನವಿಲ್ಲ

04:37 PM Oct 04, 2020 | sudhir |

ಕಾರವಾರ: ಎಂಡೋಸಲ್ಪಾನ್‌ ಪೀಡಿತರಿಗಾಗಿ ಕಾರ್ಯನಿರ್ವಹಿಸುತ್ತಿರುವ ಸ್ಕೂಡ್‌ವೇಸ್‌ ಸಂಸ್ಥೆ ಸಂಚಾರಿ ಆರೋಗ್ಯ ಘಟಕಗಳಿಗೆ ಕಳೆದ 7 ತಿಂಗಳಿಂದ ಮಾಸಿಕ ಸೇವಾ ವೆಚ್ಚವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರ ಹಿಂದೆ ಅಧಿಕಾರಿಗಳ ಕೈವಾಡವಿದ ಎಂದು  ಸ್ಕೊಡ್‌ವೆಸ್‌ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್‌ ನಾಯ್ಕ ಆಪಾದಿಸಿದ್ದಾರೆ.

Advertisement

ಈ ಸಂಬಂಧ ಅವರು ಜಿಲ್ಲಾಧಿಕಾರಿಗಳಿಗೆ ಲಿಖೀತ ದೂರು ಸಲ್ಲಿಸಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯದ ಆದೇಶವನ್ನಾಧರಿಸಿ ಸರ್ಕಾರ ಎಂಡೋಸಲ್ಪಾನ್‌ ಬಾಧಿತರಿಗಾಗಿ ಜಿಲ್ಲೆಯ ಆರು ತಾಲೂಕುಗಳಲ್ಲಿ ವಿಶೇಷವಾಗಿ ಸಿದ್ದಪಡಿಸಲಾದ 4 ಸಂಚಾರಿ ಆರೋಗ್ಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮಾರ್ಚ್ -2018 ರಿಂದ ಈ ಸೇವೆ ಆರಂಭಿಸಲಾಗಿದ್ದು ಎಂಡೋಸಲ್ಪಾನ್‌ ಪೀಡಿತರು ಹಾಗೂ ಅವರ ಕುಟುಂಬ ಸದಸ್ಯರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಆರೋಗ್ಯ ಸೇವೆ ಪಡೆಯಲು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತೊಂದರೆ ಆಗುತ್ತಿರುವುದರಿಂದ ಸ್ಥಳಿಯವಾಗಿಯೇ ಉತ್ತಮ ಸೇವೆ ಲಭ್ಯವಾಗಬೇಕೆಂಬ ಕಾರಣದಿಂದ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ನಾಲ್ಕು ಸಂಚಾರಿ ಆರೋಗ್ಯ ಘಟಕಗಳನ್ನು ರೂಪಿಸಿ ಎಂಡೋಬಾಧಿತರ ಸೇವೆಗೆ ನಿಯೋಜಿಸಿದೆ.

ಇದನ್ನೂ ಓದಿ :ಕೃಷಿ ಮಸೂದೆ ರೈತ ಪರವಾಗಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿತ್ತೆ ?: ರಾಹುಲ್ ಗಾಂಧಿ

ಸರಕಾರದ ನಿರ್ದೇಶನದಂತೆ ಇ-ಟೆಂಡರ್‌ ಮೂಲಕ ನಮ್ಮ ಸಂಸ್ಥೆಗೆ ಸಂಚಾರಿ ಆರೋಗ್ಯ ಘಟಕಗಳನ್ನು ರೂಪಿಸಿ ಎಂಡೋಬಾಧಿ ತರಿಗೆ ಸೇವೆನೀಡಲು ಆದೇಶ ನೀಡಿರುವುದರಿಂದ ಇಲಾಖೆಯಿಂದ ನೀಡಲಾದ ವೇಳಾ ಪಟ್ಟಿಯಂತೆ ನಿಯಮಾನುಸಾರ ನಿಗದಿತ ಗ್ರಾಮಗಳಿಗೆ ತೆರಳಿ ಎಂಡೋಬಾಧಿತರು ಹಾಗೂ ಅವರ ಕುಟುಂಬಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದೇವೆ.

ಆದರೆ ಕಳೆದ 7 ತಿಂಗಳಿಂದ ಸಂಸ್ಥೆಗೆ ಬರಬೇಕಾದ ಸೇವಾ ವೆಚ್ಚ ನೀಡದ ಕಾರಣ ನೌಕರರಿಗೆ ವೇತನ ನೀಡುವುದು ಕಷ್ಟವಾಗಿದೆ ಎಂದು ಅವರು ಜಿಲ್ಲಾಡಳಿತದ ಬಳಿ ಅಳಲು ತೋಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲಾಖೆಯಿಂದ ಗುರುತಿಸಲಾದ ಹಾಗೂ ವಿವಿಧ ಕಾರಣಗಳಿಂದ ಎಂಡೋಸಲ್ಪಾನ್‌ ಪಟ್ಟಿಯಿಂದ ಬಿಟ್ಟುಹೋದ ಒಟ್ಟೂ 1972 ಎಂಡೋಸಲ್ಫಾ ನ್‌ ಬಾಧಿತರು ಹಾಗೂ ಸುಮಾರು 8000 ಕ್ಕೂ ಹೆಚ್ಚು ಕುಟುಂಬ ಸದಸ್ಯರು ಸೇರಿದಂತೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬರುವ ಇತರ ಸಾವಿರಾರು ರೋಗಿಗಳಿಗೂ ಸಂಚಾರಿ ಆರೋಗ್ಯ ಘಟಕದ ಸೇವೆ ನೀಡಲಾಗುತ್ತಿದೆ. ಕಳೆದ 2 ವರ್ಷ 6 ತಿಂಗಳಲ್ಲಿ ಸುಮಾರು 75625 ಬಾಧಿತರು, ಅವರ ಕುಟುಂಬ ಸದಸ್ಯರು ಹಾಗೂ ರೋಗಿಗಳಿಗೆ ಸ್ಕೂಡ್‌ ವೇಸ್‌ ಸಂಸ್ಥೆ ಸಿಬ್ಬಂದಿ ಸೇವೆ ನೀಡಿದೆ. ಪ್ರತಿ ತಿಂಗಳು ಸಂಸ್ಥೆ ಸಲ್ಲಿಸುವ ವರದಿಯನ್ನಾಧರಿಸಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಒಪ್ಪಂದದ ಪ್ರಕಾರ ಮಾಸಿಕ ನಿರ್ವಹಣಾ ವೆಚ್ಚ ಪಾವತಿಸಲಾಗುತ್ತದೆ.

Advertisement

ಇದನ್ನೂ ಓದಿ :ರಾಮಮಂದಿರಕ್ಕೆ ಅರ್ಪಿಸಲಿರುವ ಬೆಳ್ಳಿ ಇಟ್ಟಿಗೆ ಅ.6ರಂದು ದಾವಣಗೆರೆಗೆ ಆಗಮನ

ಆದರೆ ಕಳೆದ 7 ತಿಂಗಳಿಂದ ನಿರ್ವಹಣಾ ವೆಚ್ಚ ಪಾವತಿಯಾಗಿಲ್ಲ. ಇದರಿಂದ ಸಂಚಾರಿ ಆರೋಗ್ಯ ಘಟಕಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಮ್ಮ ಸಂಸ್ಥೆ ಅನವಶ್ಯಕ ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಎರಡೂವರೆ ವರ್ಷದಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದ ಸಂಚಾರಿ ಆರೋಗ್ಯ ಘಟಕಗಳ ಬಗ್ಗೆ ಆರೋಗ್ಯ ಇಲಾಖೆ ನಿರ್ದೇಶಕರು ಹೊರ ಗುತ್ತಿಗೆ ಆಧಾರದಲ್ಲಿ ಪಡೆದಿರುವ ಸಂಚಾರಿ ಆರೋಗ್ಯ ಘಟಕಗಳ ಸೇವೆ ಬಹಳ ದುಬಾರಿಯಾಗಿದ್ದು, ಸರ್ಕಾರಕ್ಕೆ ಹೊರೆಯಾಗುವ ಸಾಧ್ಯತೆ ಇರುತ್ತದೆ.

ತಾವು ತಿಳಿಸಿರುವಂತೆ ಒಂದು ಮೊಬೈಲ್‌ ಯೂನಿಟ್‌ಗೆ 3.34.375.00 ರೂ.ಗಳು ತುಂಬಾ ದುಬಾರಿಯಾಗಿದೆ. ಅಲ್ಲದೆ ಸಂಚಾರಿ ಘಟಕಗಳನ್ನು ಪಡೆಯುವಾಗ ನಿರ್ದೇಶನಾಲಯದಿಂದ ಯಾವುದೇ ಹಣಕಾಸಿನ ಅನುಮೋದನೆ ಪಡೆದಿರುವುದಿಲ್ಲ.
ಆದುದರಿಂದ ಸಂಚಾರಿ ಘಟಕದ ವೆಚ್ಚದ ಆಡಳಿತಾತ್ಮಕ ಅನುಮೋದನೆ ದೊರೆತಿರುವುದಿಲ್ಲ ಎಂದು ಉಲ್ಲೇಖೀಸಿರುವ ಪತ್ರವನ್ನು ಡಿಎಚ್‌ಒ ನೀಡಿರುತ್ತಾರೆ.

ಆದರೆ ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಮುಂದುವರಿಸಬೇಕೆ ಅಥವಾ ಸ್ಥಗಿತಗೊಳಿಸಬೇಕೆ ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿರುವುದಿಲ್ಲ. ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರು ಎಂಡೋಸಲ್ಪಾನ್‌ ಪೀಡಿತರ ಸೇವೆಗೆ ಸ್ಕೂಡ್‌
ವೇಸ್‌ ಕಾರ್ಯ ಅಗತ್ಯ ಎಂದಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಹ ಹೋಗಿದೆ. ಆದರೆ ಹಿರಿಯ ಅಧಿಕಾರಿಗಳು ಸ್ಥಳ ಭೇಟಿ ಮಾಡದೇ ಆರ್ಥಿಕ ಹೊರೆಯ ನೆಪ ಹೇಳಿ, ಮಾಡಿದ ಕೆಲಸಕ್ಕೆ ಅನುದಾನ ತಡೆಹಿಡಿದಿದ್ದಾರೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಆಪಾದಿಸಿದ್ದಾರೆ. ತಕ್ಷಣ ಅನುದಾನ ಬಿಡುಗಡೆ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ
ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next