Advertisement

ತಿಂಗಳಲ್ಲಿ ಸಾರಿಗೆ ಸಿಬ್ಬಂದಿ ಬೇಡಿಕೆ ಈಡೇರಿಕೆ: ಸವದಿ

05:20 PM Jan 25, 2021 | Team Udayavani |

ಗದಗ: ಸಾರಿಗೆ ಸಂಸ್ಥೆ ನೌಕರರ 10 ಬೇಡಿಕೆಗಳಲ್ಲಿ ಪ್ರಮುಖ 9 ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದ್ದು, ಒಂದು ತಿಂಗಳಲ್ಲಿ ಈಡೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಿಂದ ಪ್ರಯಾಣಿಕರ ಟಿಕೆಟ್‌ ದರ ಹೆಚ್ಚಿಸಿಲ್ಲ. ಆದರೂ ವಿದ್ಯಾರ್ಥಿಗಳ ರಿಯಾಯಿತಿ ಪಾಸ್‌, ವಿಕಲಚೇತರು, ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಸೇವೆ ಒದಗಿಸಲಾಗುತ್ತಿದೆ. ಇದೆಲ್ಲದರ ಮಧ್ಯೆ ಸಾರಿಗೆ ಸಂಸ್ಥೆಯ ನಾಲ್ಕು ಸಂದರ್ಭದಲ್ಲಿ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಕೋವಿಡ್‌ ನಿಂದಾಗಿ ಇಲಾಖೆಯ 1.34 ಲಕ್ಷ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇರಲಿಲ್ಲ. ಏಳು ತಿಂಗಳವರೆಗೆ ಸಿಬ್ಬಂದಿ ಸಂಕಷ್ಟ ಎದುರಿಸಬೇಕಾಯಿತು.

ಈ ಬಗ್ಗೆ ಮುಖ್ಯಮಂತ್ರಿಗಳಗಮನ ಸೆಳೆದಿದ್ದರಿಂದ ಶೇ.70ರಷ್ಟು ಸಂಬಳವನ್ನು ಸರ್ಕಾರ ನೀಡಿದ್ದರಿಂದ ಐದು  ತಿಂಗಳ ಸಂಬಳವನ್ನು ಸಿಬ್ಬಂದಿಗೆ ಬಿಡುಗಡೆ ಮಾಡಲಾಗಿದೆ. ರಮೇಶ್‌ ಜಾರಕಿಹೊಳಿ ಚಿಕ್ಕಮಗಳೂರಿಗೆ ಪರಿಶೀಲನೆ ಸಭೆಗೆ ಹೋಗಿದ್ದರು. ಈ ವೇಳೆ ಅನೇಕ ಸಚಿವರು, ಶಾಸಕರು ಅವರನ್ನು ಭೇಟಿಯಾಗುವುದು ಸ್ವಾಭಾವಿಕ. ನಾನೂ ಗದಗ ಬಂದಿದ್ದೇನೆ. ನನಗೂ ಸಚಿವರು, ಶಾಸಕರು ಭೇಟಿಯಾಗೋದು ಸಹಜ. ಆ ಭಾಗದ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದಾರೆ. ಅದನ್ನೇ ರೆಸಾರ್ಟ್‌ ರಾಜಕೀಯವೆಂದು ಪರಿಗಣಿಸಬಾರದು.

ಇದನ್ನೂ ಓದಿ:ಬಾರದ 108, ಹೊಂಡಕ್ಕೆ ಬಿದ್ದ ಮಕ್ಕಳಿಬ್ಬರು ಸಾವು ; ಆಸ್ಪತ್ರೆಯಲ್ಲಿ ಯುವಕರಿಂದ ದಾಂಧಲೆ

ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರಿಗೂ ಸಚಿವರು ಆಗಬೇಕು, ಜನರ ಸೇವೆ ಮಾಡಬೇಕು ಎನ್ನುವ ಬಯಕೆ ಇರೋದು ತಪ್ಪಲ್ಲ. ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಅದನ್ನು ಸರಿಪಡಿಸುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next